T20 World Cup: ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್: ಇಂಗ್ಲೆಂಡ್‌ಗೆ ಭರ್ಜರಿ ಜಯ
ಟಿ20 ವಿಶ್ವಕಪ್ ರೋಚಕ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಲೀಗ್ ಹಂತದ ಪಂದ್ಯಗಳು ಆರಂಭವಾಗಿವೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಸೂಪರ್ 8 ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಂಗ್ಲರ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಡ್ ಇನ್ನು 15 ಎಸೆತ ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು 181 ರನ್ ಕಲೆ ಹಾಕಿ ಅಬ್ಬರಿಸಿತು.

ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಆರಂಭಿಕ ಫಿಲ್ ಸಾಲ್ಟ್ ಹಾಗೂ ನಾಯಕ ಜೋಸ್ ಬಟ್ಲರ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 7.4 ಓವರ್‌ಗಳಲ್ಲಿ 67 ರನ್ ಸೇರಿಸಿ ಮಿಂಚಿತು. ಜೋಸ್ 25 ರನ್ ಬಾರಿಸಿ ಔಟ್ ಆದರು. ಆಲ್ ರೌಂಡರ್ ಮೊಯಿನ್ ಅಲಿ 13 ರನ್‌ಗಳಿಗೆ ಆಟ ಮುಗಿಸಿದರು.
ಭರ್ಜರಿ ಜೊತೆಯಾಟ
ಮೂರನೇ ವಿಕೆಟ್‌ಗೆ ಸಾಲ್ಟ್ ಜೊತೆಗೂಡಿದ ಜಾನಿ ಬೇರ್ ಸ್ಟೋ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಈ ಜೋಡಿ ವೆಸ್ಟ್ ಇಂಡೀಸ್ ಬೌಲರ್‌ಗಳು ಮಾಡಿಕೊಂಡಿದ್ದ ಪ್ಲ್ಯಾನ್ ಎಲ್ಲ ಉಲ್ಟಾ ಮಾಡಿ ಬ್ಯಾಟ್ ಮಾಡಿತು. ಈ ಜೋಡಿ 97 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಜಾನಿ 26 ಎಸೆತಗಳಲ್ಲಿ ಅಜೇಯ 48 ರನ್ ಸಿಡಿಸಿದರು. ಈ ಅಮೋಘ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 2 ಸಿಕ್ಸರ್ ಸೇರಿದ್ದವು.
ಫಿಲ್ ಸಾಲ್ಟ್ ಅಬ್ಬರ
ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಫಿಲ್ ಸಾಲ್ಟ್ 47 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರು. ಈ ಕ್ಲಾಸಿಕ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 5 ಮುಗಿಲೆತ್ತರದ ಸಿಕ್ಸರ್ ಸೇರಿವೆ.

ಉತ್ತಮ ಆರಂಭ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ ಹಾಗೂ ಜಾನ್ಸನ್ ಚಾರ್ಲ್ಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಬ್ರಾಂಡನ್ ಕಿಂಗ್ 23 ರನ್ ಬಾರಿಸಿ ನಿವೃತ್ತರಾದರು. ಜಾನ್ಸನ್ ಚಾರ್ಲ್ಸ್ (38) ಮತ್ತು ನಿಕೋಲಸ್ ಪೂರನ್ (36) ಸೊಗಸಾದ ಆಟದ ಪ್ರದರ್ಶನ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ರೋವನ್ ಪೊವೇಲ್ 17 ಎಸೆತಗಳಲ್ಲಿ 5 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿದರು. ಆಂಡ್ರಿ ರಸೆಲ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಶೆರ್ಫೇನ್ ರುದರ್ಫೋರ್ಡ್ 15 ಎಸೆತಗಳಲ್ಲಿ ಅಜೇಯ 28 ರನ್ ಸಿಡಿಸಿದರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಆದಿಲ್ ರಶೀದ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.












Click it and Unblock the Notifications