ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಆಸ್ತಿ ಎಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ಲೆನ್‌ ಮೆಕ್‌ಗ್ರಾತ್

|
Google Oneindia Kannada News

ಪ್ರಸ್ತುತ ಭಾರತ ತಂಡ ಭರ್ಜರಿ ಫಾರ್ಮ್‌ನಲ್ಲಿದೆ, ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್‌ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಭರ್ಜರಿ ಗೆಲುವುಗಳನ್ನು ದಾಖಲಿಸಿದೆ. ಅದ್ಭುತ ಪ್ರದರ್ಶನ ನೀಡದ ಹೊರತು ಭಾರತ ತಂಡವನ್ನು ಸೋಲಿಸುವುದು ಅಸಾಧ್ಯ ಎನ್ನುವಂತಾಗಿದೆ. ಅನುಭವಿ ಆಟಗಾರರ ಜೊತೆ ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ.

ದೀಪಕ್ ಹೂಡಾ, ರುತುರಾಜ್ ಗಾಯಕ್‌ವಾಡ್, ಅರ್ಶ್‌ದೀಪ್ ಸಿಂಗ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದು ಮಿಂಚಿದ್ದಾರೆ. ಸದ್ಯ ಅನುಭವಿಗಳ ಅನುಪಸ್ಥಿತಿಯಲ್ಲಿ ಇವರಿಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದರು, ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಅಲ್ಲಿಯವರೆಗೆ ಅನುಭವಿ ಆಟಗಾರರಿಗೆ ಇವರು ತಂಡದಲ್ಲಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಅನಿಲ್ ಕುಂಬ್ಳೆ ಕ್ರಿಕೆಟ್ ಆಟವಾಡ್ತಿದ್ದ ಮೈದಾನ ಬಂದ್‌ಗೆ ಬಿಡಿಎ ಹುನ್ನಾರ!ಅನಿಲ್ ಕುಂಬ್ಳೆ ಕ್ರಿಕೆಟ್ ಆಟವಾಡ್ತಿದ್ದ ಮೈದಾನ ಬಂದ್‌ಗೆ ಬಿಡಿಎ ಹುನ್ನಾರ!

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮುಂತಾದವರು ಕನಿಷ್ಠ 2023 ರ ವಿಶ್ವಕಪ್‌ನವರೆಗೆ ಟೀಂ ಇಂಡಿಯಾದ ಭಾಗವಾಗಲಿದ್ದಾರೆ ಮತ್ತು ಭಾರತಕ್ಕೆ ಮತ್ತೊಂದು ವಿಶ್ವಕಪ್‌ ಗೆದ್ದುಕೊಡುವ ಮೂಲಕ ಕ್ರಿಕೆಟ್‌ಗೆ ಅಂತಿಮ ವಿದಾಯ ಹೇಳುವ ಸಾಧ್ಯತೆ ಇದೆ. ಈ ನಾಲ್ಕು ಟಾಪ್ ಸ್ಟಾರ್‌ಗಳ ಹೊರತಾಗಿ, ಈಗ ಭಾರತ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿರುವುದು ಹಾರ್ದಿಕ್ ಪಾಂಡ್ಯ.

 ಉತ್ತಮ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ

ಉತ್ತಮ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ

ಗಾಯಗೊಂಡು ಕ್ರಿಕೆಟ್‌ನಿಂದ ಸ್ವಲ್ಪದಿನ ದೂರ ಉಳಿದಿದ್ದ ಹಾರ್ದಿಕ್‌ ಪಾಂಡ್ಯ ಚೇತರಿಸಿಕೊಂಡ ನಂತರ ಕ್ರಿಕೆಟ್‌ಗೆ ಮರಳಿದರು. ಆದರೆ, ಈ ಬಾರಿ ಅವರ ಪ್ರದರ್ಶನ ಎಂದಿಗಿಂತಲೂ ಉತ್ತಮವಾಗಿದೆ. ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ, ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಹಾರ್ದಿಕ್‌ ಪಾಂಡ್ಯರನ್ನು ಹಾಡಿ ಹೊಗಳಿದ್ದಾರೆ.

"ಭಾರತದ ಆಲ್‌ರೌಂಡರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ವಿಕೆಟ್‌ಗಳನ್ನು ಪಡೆದುಕೊಳ್ಳುತ್ತಾರೆ, ರನ್ ಗಳಿಸುತ್ತಾರೆ ಮತ್ತು ಕ್ಯಾಚ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಾಂಡ್ಯ ಅವರಂತಹ ಉಪಯುಕ್ತ ಆಟಗಾರರು ಯಾವುದೇ ತಂಡಕ್ಕೆ ಆಸ್ತಿಯಾಗಿದ್ದಾರೆ" ಎಂದು ಗ್ಲೆನ್ ಮೆಕ್‌ಗ್ರಾತ್ ಹೇಳಿದ್ದಾರೆ.

 ಹಾರ್ದಿಕ್ ಪಾಂಡ್ಯ ಟೂ ಇನ್‌ ಒನ್‌ ಆಟಗಾರ

ಹಾರ್ದಿಕ್ ಪಾಂಡ್ಯ ಟೂ ಇನ್‌ ಒನ್‌ ಆಟಗಾರ

ಹಾರ್ದಿಕ್ ಪಾಂಡ್ಯರನ್ನು ಶ್ಲಾಘಿಸಿರುವ ಗ್ಲೆನ್‌ ಮೆಕ್‌ಗ್ರಾತ್ ಪಾಂಡ್ಯರನ್ನು 'ಟೂ ಇನ್ ಒನ್' ಆಟಗಾರ ಎಂದು ಕರೆದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಪ್ರಭಾವಶಾಲಿ ಆಲ್-ರೌಂಡ್ ಕೌಶಲ್ಯಗಳು ಅವರನ್ನು ಶಕ್ತಿಯುತ ಆಟಗಾರನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

"ಕ್ರಿಕೆಟ್ ತುಂಬಾ ಆತ್ಮವಿಶ್ವಾಸದ ಕ್ರೀಡೆಯಾಗಿದೆ. ಹಾರ್ದಿಕ್ ತುಂಬಾ ಆತ್ಮವಿಶ್ವಾಸದ ಆಟಗಾರ. ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೆ, ಅದು ಅವರ ಬ್ಯಾಟಿಂಗ್‌ನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆತನಲ್ಲಿ ಇಬ್ಬರು ಆಟಗಾರರಿದ್ದಾರೆ. ತಂಡಕ್ಕೆ ಅವರು ಲಕ್ಷುರಿ. ಪಾಂಡ್ಯ ಒಳ್ಳೆಯ, ಬುದ್ಧಿವಂತ ಬೌಲರ್ ಮತ್ತು ಶಕ್ತಿಶಾಲಿ ಹಿಟ್ಟರ್, ಅವರು ಉತ್ತಮ ಆಟದ ಯೋಜನೆಯನ್ನು ಹೊಂದಿದ್ದಾರೆ" ಎಂದು ಮೆಕ್‌ಗ್ರಾತ್ ಸುದ್ದಿಗಾರರಿಗೆ ತಿಳಿಸಿದರು.j

 ಏಕದಿನ ಕ್ರಿಕೆಟ್ ಜನಪ್ರಿಯತೆ ಕಡಿಮೆಯಾಗುತ್ತಿದೆ

ಏಕದಿನ ಕ್ರಿಕೆಟ್ ಜನಪ್ರಿಯತೆ ಕಡಿಮೆಯಾಗುತ್ತಿದೆ

ಟಿ20 ಪಂದ್ಯಗಳು ಇಂದು ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ. 50 ಓವರ್ ಗಳ ಏಕದಿನ ಕ್ರಿಕೆಟ್‌ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಗ್ಲೆನ್‌ ಮೆಕ್‌ಗ್ರಾತ್ ಒಪ್ಪಿಕೊಂಡಿದ್ದಾರೆ. ಟಿ20 ಓವರ್ ಕ್ರಿಕೆಟ್‌ ಜನಪ್ರಿಯತೆಯಿಂದ ಏಕದಿನ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ, ಇದರ ಬಗ್ಗೆ ಆಲೋಚನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

"ನನಗೆ ಟೆಸ್ಟ್ ಕ್ರಿಕೆಟ್‌ ಮೇಲೆ ಹೆಚ್ಚಿನ ಒಲವಿದ್ದರೂ, ಏಕದಿನ ಮಾದರಿ ಕ್ರಿಕೆಟ್‌ ಉಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು", ಎಂದು ಗ್ಲೆನ್‌ ಮೆಕ್‌ಗ್ರಾತ್ ತಿಳಿಸಿದ್ದಾರೆ.

 ನಾನು ತುಂಬಾ ಸಂಪ್ರದಾಯವಾದಿ ಎಂದ ಮೆಕ್‌ಗ್ರಾತ್

ನಾನು ತುಂಬಾ ಸಂಪ್ರದಾಯವಾದಿ ಎಂದ ಮೆಕ್‌ಗ್ರಾತ್

ನಾನು ತುಂಬಾ ಸಂಪ್ರದಾಯವಾದಿ. ನಾನು ಟೆಸ್ಟ್ ಅನ್ನು ಇಷ್ಟಪಟ್ಟೆ, ನನ್ನ ಏಕದಿನ ಮಾದರಿ ಕ್ರಿಕೆಟ್‌ ಅನ್ನು ನಾನು ಇಷ್ಟಪಟ್ಟೆ. ಟೆಸ್ಟ್ ಕ್ರಿಕೆಟ್‌ ಎಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಟೆಸ್ಟ್ ಕ್ರಿಕೆಟ್ ಕೂಡ ಈಗ ರೋಮಾಂಚನಕಾರಿಯಾಗಿರುತ್ತದೆ. ಈಗಿನ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಗೌರವವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು.


ಏಕದಿನ ಮಾದರಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಆಟಗಾರರು ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ, ಏಕದಿನ ಪಂದ್ಯಗಳು ನೋಡಲು ಆಸಕ್ತಿದಾಯಕವಾಗಿರುತ್ತವೆ. ಆದರೆ ಅದನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸುವಂತೆ ಮಾಡಬೇಕಾಗಿದೆ. ಐಸಿಸಿಗೆ ಅದನ್ನು ಮಾಡಲು ಕೆಲವು ಸವಾಲುಗಳಿವೆ ಎಂದರು.

English summary
Australia pacer Glenn McGrath Hails Indian all-rounder Hardik Pandya, and calls him an asset for any team. Hardik is very much a confident player. If he is bowling well, it has a positive impact on his batting. He is two players in one. He is a luxury. He is a good, intelligent bowler and powerful hitter. McGrath praises Hardik Pandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X