ಕುಡಿತದ ಚಟಕ್ಕೆ ದಾಸನಾಗಿ ಏಕಾಗ್ರತೆ ಕಳೆದುಕೊಂಡ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್?

ಆರ್‌ಸಿಬಿ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿಸಿದೆ, ಇದು ಫ್ಯಾನ್ಸ್‌ಗೆ ಭಾರಿ ಕೋಪ ತರಿಸಿದೆ. ಈ ನಡುವೆ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಂ ಬೌಲರ್ ಒಬ್ಬರು ಕುಡಿತದ ಚಟಕ್ಕೆ ದಾಸರಾಗಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ. ಅದು ಬೇರೆ ಯಾರೂ ಅಲ್ಲ ಆರ್‌ಸಿಬಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್!

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ 2023ರ ವಿಶ್ವಕಪ್ ಟೂರ್ನಿಯಲ್ಲಿ 128 ಬಾಲ್ ಆಡಿ ಅಫ್ಘಾನ್ ವಿರುದ್ಧ ಭರ್ಜರಿ 201 ರನ್ ಗಳಿಸಿದ್ದರು. 21 ಬೌಂಡರಿ ಮತ್ತು 10 ಸಿಕ್ಸರ್ ಚಚ್ಚಿದ್ದ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ಈಗ, ಆರ್‌ಸಿಬಿ ತಂಡಕ್ಕೆ ವಿಲನ್ ಆಗುತ್ತಿದ್ದಾರೆ ಎಂಬ ಆರೋಪ ಸದ್ಯ ಕೇಳಿಬರುತ್ತಿದೆ. ಈ ಆರೋಪಗಳ ನಡುವೆ, ಗ್ಲೆನ್ ಮ್ಯಾಕ್ಸ್‌ವೆಲ್ ಕುಡಿತಕ್ಕೆ ದಾಸರಾಗಿದ್ದಾರೆ. ವಿಪರೀತ ಕುಡಿತದ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಗ್ರತೆ ಕಳೆದುಕೊಂಡಿದ್ದಾರೆ, ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಹಾಗಾದ್ರೆ ಅಸಲಿಗೆ ಆಗಿರೋದು ಏನು? ಮ್ಯಾಕ್ಸ್‌ವೆಲ್ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯ್ತಾ? ಅಷ್ಟೊಂದು ಕುಡಿತಾ ಇದ್ದಾರಾ ಮ್ಯಾಕ್ಸ್? ಬನ್ನಿ ತಿಳಿಯೋಣ.

Has Glenn Maxwell Lost his Form in IPL 2024 Due to Alcoholism Find Out More

'ಎಣ್ಣೆ' ಕಾರಣಕ್ಕೆ ಆಟ ಆಡ್ತಿಲ್ವಾ?

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕುಡಿತದ ಸ್ಟೋರಿ ಇಂದು ನಿನ್ನೆಯದಲ್ಲ, ಈ ಹಿಂದೆ ಕೂಡ ಈ ರೀತಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಎಣ್ಣೆ ಹೊಡೆದು ತೂರಾಡಿ ಆಸ್ಪತ್ರೆ ಸೇರಿದ್ದ ಆರೋಪವು ಕೇಳಿಬಂದಿತ್ತು. ಆದರೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬರುತ್ತಿದೆ. 2024ರಲ್ಲಿ ಅಂದರೆ ಇದೇ ವರ್ಷ ಜನವರಿ ತಿಂಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅತಿಯಾಗಿ ಕುಡಿತದ ಚಟಕ್ಕೆ ಬಿದ್ದ ಕಾರಣ ಆಸ್ಪತ್ರೆಗೆ ಸೇರಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಆಗಲೂ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ಆಡುವಾಗ ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ಎಣ್ಣೆ ಹೊಡೆದು ಏಕಾಗ್ರತೆ ಕಳೆದುಕೊಂಡಿದ್ದಾರಾ? ಎಂಬ ಪ್ರಶ್ನೆ ಮತ್ತು ಆರೋಪಗಳು ಕೇಳಿಬರುತ್ತಿವೆ.

ಆರ್‌ಸಿಬಿ ತಂಡಕ್ಕೆ ಹೀನಾಯ ಸೋಲು

2024 ಐಪಿಎಲ್ ಟೂರ್ನಿಯಲ್ಲಿ RCB ಸೋಲಿನ ಸುಳಿ ಮುಂದುವರಿದಿದೆ. ಆರ್‌ಸಿಬಿ ಬೆಂಗಳೂರು ಸತತ 3ನೇ ಸೋಲು ಕಂಡಿದೆ, ಆರ್‌ಸಿಬಿ ಬೆಂಗಳೂರು ತಂಡದ ಈ ಹೀನಾಯ ಪ್ರದರ್ಶನ ಈಗ ಭಾರಿ ಚರ್ಚೆಗೂ ವೇದಿಕೆ ಒದಗಿಸಿದೆ. ಮತ್ತೊಂದು ಕಡೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಪದೇ ಪದೇ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಈ ಟೂರ್ನಿ ಪೂರ್ತಿ ಇದೇ ರೀತಿ ಹೀನಾಯ ಆಟ ಆಡಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.

ಮ್ಯಾಕ್ಸ್ ಅವರ ಹೀನಾಯ ಪ್ರದರ್ಶನ ಸೇರಿದಂತೆ ಸಂಪೂರ್ಣ ಆರ್‌ಸಿಬಿ ತಂಡ ಕುಸಿದಿದ್ದು, ಹೀಗಾಗಿ ಈ ಕುರಿತು, ಭಾರಿ ಆಕ್ರೋಶ ಕೂಡ ಮೊಳಗಿದೆ. ಅಭಿಮಾನಿಗಳು ರೊಚ್ಚಿಗೆದ್ದು, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಗುಡ್‌ಬೈ ಹೇಳಿ ಅಂತಾ ಆರ್‌ಸಿಬಿ ಟೀಂ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಇದೇ ಸಮಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಕುಡಿತದ ಚಟದ ಆರೋಪ ಕೇಳಿಬಂದಿದೆ.

ಮುಂದೆ ಏನಾಗುತ್ತೆ ಮ್ಯಾಕ್ಸ್ ಭವಿಷ್ಯ?

ಒಟ್ನಲ್ಲಿ ಆರ್‌ಸಿಬಿ ಕಪ್ ಗೆಲ್ಲದೇ ಇದ್ದರೂ ಪರವಾಗಿಲ್ಲ, ಆದರೆ ಈ ರೀತಿಯ ಹೀನಾಯದ ಪ್ರದರ್ಶನ ಕೊಡುವುದು ಬೇಡ. ಆ ಮೂಲಕ ಬೆಂಗಳೂರು ತಂಡದ ಮಾನವನ್ನ ಕ್ರಿಕೆಟ್‌ನ ಅಂಗಳದಲ್ಲಿ ಹರಾಜು ಹಾಕುವುದು ಬೇಡ ಅನ್ನೋದು ಅಭಿಮಾನಿಗಳ ಆಗ್ರಹ. ಯಾಕಂದ್ರೆ ಸಾಲು ಸಾಲು ಹೀನಾಯ ಸೋಲು ಕಾಣುತ್ತಿರುವ ಆರ್‌ಸಿಬಿ ಬೆಂಗಳೂರು ತಂಡ ಈಗಲಾದ್ರು ಮೈಕೊಡವಿ ಧೂಳಿನಿಂದ ಎದ್ದು ಬರಲಿ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಅದ್ರಲ್ಲೂ ಈಗ ಗ್ಲೆನ್ ಮ್ಯಾಕ್ಸ್‌ವೆಲ್ ವಿಚಾರ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕನ್ನಡಿಗರಿಗೆ ಅವಕಾಶ ಏಕೆ ಇಲ್ಲ?

ಇದಿಷ್ಟೂ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ಕನ್ನಡಿಗರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ? ಎಂಬ ಪ್ರಶ್ನೆಯನ್ನ ಆರ್‌ಸಿಬಿ ಅಭಿಮಾನಿಗಳು ಕೇಳುತ್ತಿದ್ದಾರೆ. ಯಾಕಂದ್ರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಸುಮಾರು 14 ಕೋಟಿ ರೂಪಾಯಿ ಕೊಡುತ್ತಿದ್ದು, ಇದೇ ದುಡ್ಡನ್ನು ಕರ್ನಾಟಕ ಮೂಲದ ಅತ್ಯುತ್ತಮ ಆಟಗಾರರಿಗೆ ಕೊಟ್ಟಿದ್ದರೆ ಅವರೇ ಚೆನ್ನಾಗಿ ಆಡುತ್ತಿರಲಿಲ್ವಾ? ಅಂತ ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಸರಿಯಾಗಿ ಆಟ ಆಡ್ತಾ ಇಲ್ಲ ಅನ್ನೋ ವಿಚಾರ ಎಲ್ಲೆಲ್ಲೂ ಬೆಂಕಿ ಹಚ್ಚಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+