ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಬಳಿಕ ದೊಡ್ಡತನ ಮೆರೆದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್

Harmanpreet Kaur: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಟಿ20 ಏಷ್ಯಾ ಕಪ್ 2026ರ ಗ್ರೂಪ್ 'ಎ' ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಅತ್ಯಂತ ಸುಲಭವಾಗಿ ಮಣಿಸಿತು. ಈ ಮೂಲಕ ಗ್ರೂಪ್ ಹಂತದಲ್ಲಿ ಸತತ ಮೂರನೇ ಜಯ ದಾಖಲಿಸಿ ಅಗ್ರಸ್ಥಾನ ಪಡೆದುಕೊಂಡು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮಹತ್ವದ ಹೇಳಿಕೆ ನೀಡಿ ದೊಡ್ಡತನ ಮೆರೆದಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಆರಂಭದಿಂದಲೇ ಭಾರೀ ಆಘಾತ ನೀಡಿದರು. ಶ್ರೀ ಚರಣಿ (3/7) ಮತ್ತು ಪ್ರೇಮಾ ರಾವತ್ (3/9), ದೀಪ್ತಿ ಶರ್ಮಾ 2/5) ಹಾಗೂ ಶಫಾಲಿ ವರ್ಮಾ (1/10) ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ಪಾಕ್‌ ಕೇವಲ 55 ರನ್‌ಗಳಿಗೆ ಆಲ್ ಔಟ್ ಆಯಿತು. ಇದು ಟಿ20ಐ ಇತಿಹಾಸದಲ್ಲಿ ಪಾಕಿಸ್ತಾನ ಮಹಿಳಾ ತಂಡದ ಅತ್ಯಂತ ಕನಿಷ್ಠ ಮೊತ್ತವಾಗಿದೆ.

Harmanpreet Kaur Praises Bowlers After India s Win Over Pakistan in Women T20 Asia cup Group Match

ಬಳಿಕ ಪಾಕ್‌ ನೀಡಿದ ಸಾಧಾರಣ ಗುರಿ ಯನ್ನು ಭಾರತ ತಂಡ 8.4 ಓವರ್‌ಗಳಲ್ಲಿ ತಲುಪುವಲ್ಲಿ ಯಶಸ್ವಿಯಾಗುವ ಮೂಲಕ ಭರ್ಜರಿ ಜಯ ಸಾಧಿಸಿತು. ಶಫಾಲಿ ವರ್ಮಾ ಆರಂಭಿಕವಾಗಿ ವೇಗದ ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ (18*) ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ನಾಯಕಿ ಗೆಲುವಿನ ಕ್ರೆಡಿಟ್‌ ಕೊಟ್ಟಿದ್ದರು ಯಾರಿಗೆ?

ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು, ತಮ್ಮ ತಂಡದ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. 'ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಮೈದಾನದಲ್ಲಿ ಎದುರಾಳಿಗಳ ವಿರುದ್ಧ ಉತ್ತಮವಾಗಿ ಆಡಬೇಕು ಎಂದು ನಾವು ಸದಾ ಚರ್ಚಿಸುತ್ತೇವೆ. ಇಂದು ಇಡೀ ತಂಡ ಅದೇ ರೀತಿ ಸಂಘಟಿತ ಪ್ರದರ್ಶನ ನೀಡಿದ್ದು ನಿಜಕ್ಕೂ ಸಂತಸ ತಂದಿದೆ. ನಮ್ಮ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಪಿಚ್‌ನ ಸ್ವರೂಪವನ್ನು ಸರಿಯಾಗಿ ಅರ್ಥೈಸಿಕೊಂಡು, ಯೋಜನೆಯಂತೆ ಬೌಲಿಂಗ್ ಮಾಡಿದ್ದೇ ಈ ಯಶಸ್ಸಿಗೆ ಮುಖ್ಯ ಕಾರಣ,' ಎಂದು ಬೌಲಿಂಗ್ ವಿಭಾಗವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಇದೇ ಪ್ರದರ್ಶನ ಮುಂದುವರೆಸುವ ಭರವಸೆ

ಚೇಸಿಂಗ್ ವೇಳೆ ಮೂರು ವಿಕೆಟ್ ಕಳೆದುಕೊಂಡಿದ್ದರ ಬಗ್ಗೆ ಪ್ರತಿಕ್ರಯಿಸಿದ ಅವರು, 'ಅದು ಆಟದ ಒಂದು ಭಾಗ, ಪ್ರತಿಯೊಂದು ಪಂದ್ಯದಲ್ಲೂ ನಾವು ನಮ್ಮ ಉನ್ನತ ಮಟ್ಟದ ಪ್ರದರ್ಶನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಂಬರುವ ಪಂದ್ಯಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರೆಸುವ ಭರವಸೆ ಇದೆ,' ಎಂದು ಹೇಳಿದರು.

ಭಾವುಕರಾಗಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್

ಇನ್ನೂ ಈ ಪಂದ್ಯವು ಹರ್ಮನ್‌ಪ್ರೀತ್ ಕೌರ್ ಅವರಿಗೆ ನಾಯಕಿಯಾಗಿ 150ನೇ ಅಂತಾರಾಷ್ಟ್ರೀಯ ಟಿ20 (T20I) ಪಂದ್ಯವಾಗಿತ್ತು. ಇದರೊಂದಿಗೆ ಪುರುಷ ಅಥವಾ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ 150 ಟಿ20ಐ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಮಹಾನ್ ದಾಖಲೆಗೆ ಅವರು ಪಾತ್ರರಾದರು.

ತಮ್ಮ ಈ ಸಾಧನೆಯ ಬಗ್ಗೆ ಭಾವುಕರಾಗಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್ ಅವರು, 'ನಾನು ಇಲ್ಲಿಯವರೆಗೆ ತಲುಪುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ನನಗೆ ನಿರಂತರವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞಳಾಗಿದ್ದೇನೆ. ಅಭಿಮಾನಿಗಳ ಈ ಬೆಂಬಲವಿಲ್ಲದೆ ನಾನೇನೂ ಅಲ್ಲ, ಮುಂದೆಯೂ ನಿಮ್ಮ ಬೆಂಬಲ ಹೀಗೆಯೇ ಇರಲಿ,' ಎಂದು ಮನವಿ ಮಾಡಿಕೊಂದರು. ಇನ್ನೂ ಭಾರತ ತಂಡವು ಸೆಪ್ಟೆಂಬರ್ 10ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಹರ್ಮನ್‌ಪ್ರೀತ್ ಕೌರ್ ಅವರು ಪಾಕಿಸ್ತಾನ ವಿರುದ್ಧದ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಅನ್ನು ಬೌಲರ್‌ಗಳಿಗೆ ನೀಡಿ ದೊಡ್ಡತನ ಮೆರೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+