India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್‌ ಕೊಟ್ಟು ,ಬೇಗ ಐಪಿಎಲ್ ಅವಕಾಶ ಸಿಗಲಿ ಎಂದ ಪಾಂಡ್ಯ

|
Google Oneindia Kannada News

ಡಬ್ಲಿನ್, ಜೂನ್ 28: ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಐರ್ಲೆಂಡ್‌ ಯುವ ಆಟಗಾರನಿಗೆ ತನ್ನ ಬ್ಯಾಟ್‌ ಒಂದನ್ನ ಉಡುಗೊರೆಯಾಗಿ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಭಾರತ ತಂಡ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು ಆದರೂ ಐರಿಸ್ ಯುವ ಬ್ಯಾಟರ್ ಹ್ಯಾರಿ ಟೆಕ್ಟರ್ ಬ್ಯಾಟಿಂಗ್ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿತ್ತು. ಹ್ಯಾರಿ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 64 ರನ್‌ ಸಿಡಿಸಿ ಪಂದ್ಯ ಒಂದು ಕಡೆಗೆ ವಾಲುವುದನ್ನ ತಪ್ಪಿಸಿ, ಒಂಚೂರು ಮನರಂಜನೆ ಸಿಗುವಂತೆ ಮಾಡಿದ್ದರು. ಅವರ ಅರ್ಧಶತಕದ ನೆರವಿನಿಂದ ಐರ್ಲೆಂಡ್‌ 12 ಓವರ್‌ಗಳಲ್ಲಿ 108 ರನ್‌ಗಳಿಸಿತ್ತು. ಐರಿಸ್‌ ಇನ್ನಿಂಗ್ಸ್‌ನಲ್ಲಿ ಹ್ಯಾರಿ(64) ಹೊರತುಪಡಿಸಿದರೆ, 18 ರನ್‌ಗಳಿಸಿದ ಟಕ್ಕರ್ ತಂಡದ ಎರಡನೇ ಗರಿಷ್ಠ ಸ್ಕೋರರ್‌ ಆಗಿದ್ದರು.

Breaking: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ರೋಹಿತ್ ಬದಲು ಮಯಾಂಕ್Breaking: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ರೋಹಿತ್ ಬದಲು ಮಯಾಂಕ್

109ರನ್‌ಗಳ ಗುರಿಯನ್ನು ಭಾರತ ತಂಡ 3 ವಿಕೆಟ್‌ ಕಳೆದುಕೊಂಡು ಇನ್ನೂ 15 ಎಸೆತಗಳಿರುವಂತೆ ತಲುಪಿತು. ನಂತರ ಆರಂಭಿಕನಾಗಿ ಭಡ್ತಿ ಪಡೆದಿದ್ದ ದೀಪಕ್ ಹೂಡ 29 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 47, ಇಶಾನ್ ಕಿಶನ್ 11 ಎಸೆತಗಳಲ್ಲಿ 26 ಮತ್ತು ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್‌ಗಳಿಸಿ ಸುಲಭ ಜಯಕ್ಕೆ ಕಾರಣರಾಗಿದ್ದರು.

ಐಪಿಎಲ್ ಕಾಂಟ್ರಾಕ್ಟ್‌ ಸಿಗಲಿ ಎಂದು ಹಾರೈಸಿದ ಪಾಂಡ್ಯ

ಪಂದ್ಯವನ್ನು ಸುಲಭವಾಗಿ ಗೆದ್ದರೂ ಎದುರಾಳಿ ತಂಡದ ಯುವ ಆಟಗಾರನ ಆಟಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಹ್ಯಾರಿ ಟೆಕ್ಟರ್‌ಗೆ ನನ್ನ ಬ್ಯಾಟ್‌ ಉಡುಗೊರೆಯಾಗಿ ನೀಡಿದ್ದೇನೆ. ಅವರೂ ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಸಿಕ್ಸರ್‌ಗಳನ್ನು ಸಿಡಿಸುವಂತಾಗಿ, ಐಪಿಎಲ್ ಒಪ್ಪಂದ ಪಡೆದುಕೊಳ್ಳಲಿ, ಆತನಿಗೆ ಕೇವಲ 22 ವರ್ಷ, ಆದಷ್ಟು ಬೇಗ ವಿಶ್ವದ ಹಲವು ಟಿ20 ಲೀಗ್‌ಗಳಲ್ಲಿ ಆಡಲಿ ಎಂದು ಹಾರೈಸುತ್ತೇನೆ " ಎಂದು ಪಾಂಡ್ಯ ತಿಳಿಸಿದ್ದಾರೆ.

ಏಷ್ಯನ್ ಚಾಂಪಿಯನ್‌ ಚಿನ್ನ ಗೆದ್ದು ಕರ್ನಾಟಕದ ಕುಸ್ತಿ ಪವರ್‌ ತೋರಿಸಿದ ಮೊಧೋಳದ ನಿಂಗಪ್ಪಏಷ್ಯನ್ ಚಾಂಪಿಯನ್‌ ಚಿನ್ನ ಗೆದ್ದು ಕರ್ನಾಟಕದ ಕುಸ್ತಿ ಪವರ್‌ ತೋರಿಸಿದ ಮೊಧೋಳದ ನಿಂಗಪ್ಪ

ಶ್ರೀಲಂಕಾದ ಆಟಗಾರನಿಗೂ ಗಿಫ್ಟ್‌ ನೀಡಿದ್ದ ಹಾರ್ದಿಕ್

ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಶ್ರೀಲಂಕಾದ ಯುವ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಗೂ ಕೂಡ ಬ್ಯಾಟ್ ಉಡುಗೊರೆ ನೀಡಿದ್ದರು. ಬ್ಯಾಟ್‌ ಸ್ವೀಕರಿಸಿದ್ದ ಶ್ರೀಲಂಕನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ನನ್ನ ರೋಲ್‌ ಮಾಡೆಲ್ ಪಾಂಡ್ಯರಿಂದ ಬ್ಯಾಟ್‌ ಸ್ವೀಕರಿಸುತ್ತಿರುವುದು ನನಗೆ ಸಿಕ್ಕಂತಹ ಗೌರವ, ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಈ ದಿನವನ್ನು ನಾನು ಎಂದಿಗೂ ಮರೆಯಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು.

 ಮೊದಲ ಬಾರಿಗೆ ಭಾರತದ ನಾಯಕತ್ವ

ಮೊದಲ ಬಾರಿಗೆ ಭಾರತದ ನಾಯಕತ್ವ

ಇನ್ನು ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಅಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅವರು ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 2022ರ ಆವೃತ್ತಿಯ ಐಪಿಎಲ್‌ನಲ್ಲಿ ನೂತನ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ಮೊದಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಅದರ ಬೆನ್ನಲ್ಲೇ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ.

 ಸರಣಿ ಗೆಲ್ಲುವ ವಿಶ್ವಾಸದಲ್ಲಿ ಹಾರ್ದಿಕ್ ಪಡೆ

ಸರಣಿ ಗೆಲ್ಲುವ ವಿಶ್ವಾಸದಲ್ಲಿ ಹಾರ್ದಿಕ್ ಪಡೆ

ಮಂಗಳವಾರ ಐರ್ಲೆಂಡ್ ವಿರುದ್ಧ ಭಾರತ 2ನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲಿದೆ. ಮೇಲು ನೋಟಕ್ಕೆ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡರೂ ಉತ್ತಮ ಫೈಟ್‌ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ್ದ ಐರಿಸ್‌ ಪಡೆ ಮತ್ತೊಮ್ಮೆ ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಇನ್ನೂ ಕಳೆದ ಪಂದ್ಯದಲ್ಲಿ ಕೇವಲ 1 ಓವರ್ ಮಾಡಿದ್ದ ಯುವ ಬೌಲರ್ ಉಮ್ರಾನ್ ಮಲಿಕ್ ಇಂದಿನ ಪಂದ್ಯದಲ್ಲಿ ಫುಲ್ ಕೋಟವನ್ನು ಮುಗಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ.

English summary
Indian captain Hardik Pandya gifted a bat to Ireland youngster Harry tector, after he showing impressive performance against India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X