ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟ, ವಿಡಿಯೋ ವೈರಲ್... Hardik Pandya
ಹಾರ್ದಿಕ್ ಪಾಂಡ್ಯ ಜೀವನ ಯಾಕೆ ಹಿಂಗಾಯ್ತು... ಇದಕ್ಕಿದ್ದಂತೆ ಫಾರಿನ್ ಹೆಂಡತಿ ಕೈಕೊಟ್ಟು ಹೋಗಿದ್ದು ಯಾಕೆ... ಹೀಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಚರ್ಚೆ ಮಾಡುವಾಗಲೇ, ಈ ಬಗ್ಗೆ ಆಕ್ರೋಶ ಕೂಡ ಮೊಳಗುತ್ತಿತ್ತು. ಹಾರ್ದಿಕ್ ಪಾಂಡ್ಯ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿ ಎಲ್ಲೆಲ್ಲೂ ಇದೇ ವಿಚಾರ ಹಲವು ತಿಂಗಳ ಕಾಲ ವೈರಲ್ ಆಗಿತ್ತು. ಕೊನೆಗೆ ಹಾರ್ದಿಕ್ ಪಾಂಡ್ಯ ಹೆಂಡತಿ ಬೇರೆ ಹುಡುಗನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಇಷ್ಟೆಲ್ಲಾ ಘಟನೆಗಳ ನಡುವೆಯೇ, ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟ... ವಿಡಿಯೋ ವೈರಲ್!
ಹೌದು, ಹಾರ್ದಿಕ್ ಪಾಂಡ್ಯ ಭಾರತ ತಂಡದ ಆಲ್‌ರೌಂಡರ್ ಹಾಗೂ ಕಷ್ಟ ಕಾಲದಲ್ಲಿ ಹಲವು ಪಂದ್ಯ ಗೆಲ್ಲಿಸಿದ ಬ್ಯಾಟರ್ ಕೂಡ. ಹೀಗಾಗಿಯೇ ಹಾರ್ದಿಕ್ ಪಾಂಡ್ಯಗೆ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗ ಇತ್ತು. ಆದರೆ ಯಾವಾಗ ಹಾರ್ದಿಕ್ ಪಾಂಡ್ಯ ಫಾರಿನ್ ಹುಡುಗಿ ಮದುವೆ ಆಗಿ ಬಂದರೋ ಅಲ್ಲಿಂದ ಮುಂದೆ ಹಾರ್ದಿಕ್ ಜೀವನದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿ ಹೋಯ್ತು ಅಂತಾ ಅಭಿಮಾನಿಗಳು ನೋವು ತೋಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗಲೇ, ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟ... ವಿಡಿಯೋ ವೈರಲ್!

ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ...
ಹೌದು, ಹಾರ್ದಿಕ್ ಪಾಂಡ್ಯ ಹೊಸ ಬಾಳು ಆರಂಭ ಮಾಡುತ್ತಿದ್ದಾರೆ. ಈಗಾಗಲೇ ಬಿಟ್ಟು ಹೋದ ಹಳೆಯ ಹೆಂಡತಿ ಮರೆತು ಹೊಸ ಹುಡುಗಿ ಜೊತೆಗೆ ಸಖತ್ ಖುಷಿಯಾಗಿರುವ ಹಾರ್ದಿಕ್ ಪಾಂಡ್ಯ ತಮ್ಮ ಅಭಿಮಾನಿಗಳಿಗೆ ಶೀಘ್ರದಲ್ಲೇ ಭರ್ಜರಿ ಸುದ್ದಿ ಕೊಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಈ ಬೆನ್ನಲ್ಲೇ ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟದ ವಿಡಿಯೋ ಕೂಡ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಕೆಲವರು ಇದನ್ನು ಎಐ ವಿಡಿಯೋ ಅಂದ್ರೆ, ಇನ್ನೂ ಕೆಲವರು ಜೋಡಿಯು ಚನ್ನಾಗಿದೆ ಅಂತಾ ಆಶೀರ್ವಾದ ಮಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ 2ನೇ ಮದುವೆ?
ಒಟ್ನಲ್ಲಿ ಡಿವೋರ್ಸ್ ನಂತರ ಹಾರ್ದಿಕ್ ಪಾಂಡ್ಯ ಎದುರಿಸಿದ್ದ ನೋವು ಹಾಗೂ ದುಖಃ ಈಗಲಾದ್ರೂ ಮರೆಯಲಿ, ಹಾರ್ದಿಕ್ ಪಾಂಡ್ಯ ಹೊಸ ಜೀವನ ಕಟ್ಟಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸುತ್ತಾ ಇದ್ದಾರೆ. 2ನೇ ಮದುವೆ ಬಗ್ಗೆ ಹಾರ್ದಿಕ್ ಪಾಂಡ್ಯ ಮಾಹಿತಿ ಕೊಡ್ತಾರಾ? ಅನ್ನೋದನ್ನು ಕೂಡ ಇದೀಗ ಕಾದು ನೋಡಬೇಕಿದೆ. ಹಾಗೇ ಹಾರ್ದಿಕ್ ಪಾಂಡ್ಯ ಅವರ ಹೊಸ ಹುಡುಗಿ ಯಾರು? ಆ ಹುಡುಗಿ ಏನು ಮಾಡುತ್ತಿದ್ದಾರೆ? ಅನ್ನೋ ಬಗ್ಗೆ ಕೂಡ ಅಭಿಮಾನಿಗಳು ಚರ್ಚೆಯನ್ನ ಈಗ ಆರಂಭ ಮಾಡಿದ್ದಾರೆ.












Click it and Unblock the Notifications