ಗುಜರಾತ್ ಟೈಟಾನ್ಸ್ ಪಾಲಿಗೆ ವರದಾನವಾದ 84, 64, 57, 3,3,3 ನಂಬರ್ಸ್: ಸಿಎಸ್ಕೆ ಹೀನಾಯ ಸೋಲು
GT Vs CSK IPL 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ (ಮೇ 21) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸಾಯಿ ಸುದರ್ಶನ್, ನಾಯಕ ಶುಭ್ಮನ್ ಗಿಲ್, ಬಟ್ಲರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಸಿಎಸ್ಕೆ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಹಾಗಾದ್ರೆ ಸಂಪೂರ್ಣ ಮ್ಯಾಚ್ ರಿಪೋರ್ಟ್ ಇಲ್ಲಿದೆ ನೋಡಿ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ನಿಗದಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ಗಳನ್ನು ಕಲೆಹಾಕಿತು. ಆದರೆ ಬಳಿಕ ಬ್ಯಾಟ್ ಬೀಸಿದ ಸಿಎಸ್ಕೆ 140 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 89 ರನ್ಗಳಿಂದ ಹೀನಾಯ ಸೋಲು ಕಂಡಿದೆ.

ಮಿಂಚಿದ ಸಾಯಿ ಸುದರ್ಶನ್, ಗಿಲ್, ಬಟ್ಲರ್
ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಗುಜರಾತ್ ತಂಡಕ್ಕೆ ಸುದರ್ಶನ್ ಮತ್ತು ಗಿಲ್ ಜೋಡಿಯು ಮೊದಲ ವಿಕೆಟ್ಗೆ 125 ರನ್ಗಳ ಜೊತೆಯಾಟ ನೀಡುವ ಮೂಲಕ 229 ರನ್ಗಳ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಸಾಯಿ ಸುದರ್ಶನ್ 53 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ಶುಭ್ಮನ್ ಗಿಲ್ 37 ಎಸೆತಗಳಲ್ಲಿ 64 ರನ್ ಗಳಿಸಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 57 ರನ್ ಚಚ್ಚಿದರು.
ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದ ಸಿಎಸ್ಕೆ
230 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಬೌಲರ್ಗಳು ಕೇವಲ 13.4 ಓವರ್ಗಳಲ್ಲಿ 140 ರನ್ಗಳಿಗೆ ಆಲೌಟ್ ಮಾಡಿದರು. ಮೊಹಮ್ಮದ್ ಸಿರಾಜ್ (3/26), ರಶೀದ್ ಖಾನ್ (3/18) ಮತ್ತು ಕಗಿಸೊ ರಬಾಡ (3/32) ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಸಿಎಸ್ಕೆ ಬ್ಯಾಟರ್ಗಳಿಗೆ ಬ್ರೇಕ್ ಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸೀಸನ್ನ ಐಪಿಎಲ್ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಸಿಎಸ್ಕೆ ಪರ ಯಾರು ಎಷ್ಟು ರನ್ ಗಳಿಸಿದರು?
ಸಿಎಸ್ಕೆ ಪರ ಬ್ಯಾಟ್ ಬೀಸಿದ ಮ್ಯಾಥ್ಯೂ ಶಾರ್ಟ್ 24(14), ಶಿವಂ ದುಬೆ 47(17), ನಾಯಕ ಋತುರಾಜ್ ಗಾಯಕ್ವಾಡ್ 16(7), ಕಾರ್ತಿಕ್ ಶರ್ಮಾ 19(15), ಅನ್ಶುಲ್ ಕಾಂಬೋಜ್ 19(8) ರನ್ ಸಿಡಿಸಿದರೆ, ಉಳಿದವರು ಒಂದಂಕಿ ದಾಟಲಿಲ್ಲ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಂ ದುಬೆ (47 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಿಎಸ್ಕೆ ಸೋಲಿಗೆ ಪ್ರಮುಖ ಕಾರಣವೆಂದರೆ ಮೊದಲು ಬೌಲರ್ಗಳು ಹೆಚ್ಚು ರನ್ ಕೊಟ್ಟು ದುಬಾರಿಯಾದದ್ದು. ಎರಡನೇಯದು ಆರಂಭದಲ್ಲೇ ಸರಣಿ ವಿಕೆಟ್ಗಳನ್ನು ಕಳೆದುಕೊಂಡಿದ್ದು.
84, 64, 57, 3, 3, 3 ನಂಬರ್ಗಳ ಅರ್ಥವೇನು?
84, 64, 57 ಇವು ಗುಜರಾಟ್ ಟೈಟಾನ್ಸ್ ಪರ ಬ್ಯಾಟ್ಗಳು ಸಿಡಿಸಿದ ರನ್ಗಳಾಗಿವೆ. 3, 3, 3 ಇವು ಜಿಟಿಯ ಮೂವರು ಬೌಲರ್ಗಳು ಪಡೆದ ತಲಾ ಮೂರು ವಿಕೆಟ್ಗಳು. ಸಾಯಿ ಸುದರ್ಶನ್ 53 ಎಸೆತಗಳಲ್ಲಿ 84 ರನ್, ಶುಭ್ಮನ್ ಗಿಲ್ 37 ಎಸೆತಗಳಲ್ಲಿ 64 ರನ್ ಚಚ್ಚಿದರೆ ಅಂತಿಮ ಹಂತದಲ್ಲಿ ಅಬ್ಬರಿಸಿದ ಜೋಸ್ 57 ರನ್ ಚಚ್ಚಿ ತಂಡದ ಮೊತ್ತವನ್ನು ಏರಿಸಿದರು. ಉಳಿದಂತೆ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್, ರಶೀದ್ ಖಾನ್ ಮತ್ತು ಕಗಿಸೊ ರಬಾಡ ಮೂವರು ತಲಾ 3 ವಿಕೆಟ್ ಕಿತ್ತು ಸಿಎಸ್ಕೆಯನ್ನು ಈ ಸೀಸನ್ನ ಟೂರ್ನಿಯಿಂದಲೇ ಆಚೆ ಹಾಕಿದರು












Click it and Unblock the Notifications