Glenn Maxwell Retirement: ಗ್ಲೆನ್ ಮ್ಯಾಕ್ಸ್‌ವೆಲ್ ದಿಢೀರ್ ವಿದಾಯ ಘೋಷಣೆ
Glenn Maxwell Retirement: ಇದೀಗ ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯನ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹಾಗಾದ್ರೆ ಏಕದಿನ ಕ್ರಿಕೆಟ್‌ನಲ್ಲಿ ಇವರ ಸಾಧನೇ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆಸ್ಟ್ರೇಲಿಯಲ್ ಆಲ್‌ರೌಂಡರ್ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್‌ವೆಲ್ ಇದೀಗ ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇನ್ನೇನು ಐಪಿಎಲ್ ಮುಕ್ತಾಯದ ಹಂತಕ್ಕೆ ಬಂದಿದ್ದು, ಫೈನಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ನಡುವೆ ಮಂಗಳವಾರ (ಜೂನ್ 3) ನಡೆಯಲಿದೆ. ಇದಕ್ಕೂ ಮುನ್ನವೇ ಮ್ಯಾಕ್ಸ್‌ವೆಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿ ಎಚ್ಚರಿ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ಗೆ ಇಂದು (ಜೂನ್ 2) ನಿವೃತ್ತಿ ಘೋಷಿಸಿದ್ದಾರೆ. 2012ರಿಂದ 2025ರ ವರೆಗಿನ ಕ್ರಿಕೆಟ್ ವೃತ್ತಿಯಲ್ಲಿ ಅವರು 149 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 3,990 ರನ್ ಗಳಿಸಿ, 77 ವಿಕೆಟ್ ಪಡೆದಿದ್ದಾರೆ. 2015 ಮತ್ತು 2023ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರಾಗಿದ್ದಾರೆ. ಸ್ಫೋಟಕ ಬ್ಯಾಟರ್ ಆಗಿರುವ ಮ್ಯಾಕ್ಸ್‌ವೆಲ್, 33.81 ಸರಾಸರಿ ಮತ್ತು 126.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೆ, ಸ್ಪನ್ನರ್ ಕೂಡ ಆಗಿದ್ದಾರೆ. ಈ ಮೂಲಕ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 201 ರನ್ ಸಿಡಿಸಿ ಅವರ ಇನ್ನಿಂಗ್ಸ್ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವರು ಮೂರು ಶತಕಗಳು ಮತ್ತು 23 ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲರ್ ಆಗಿಯೂ ಅವರು ನಾಲ್ಕು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾಗಿದ್ದಾರೆ. ಅವರು ತಮ್ಮ ವೃತ್ತಿ ಬದುಕಿನಲ್ಲಿ 91 ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಮ್ಯಾಕ್ಸ್‌ವೆಲ್ ಅವರು ಮುಂದಿನ ದಿನಗಳಲ್ಲಿ ಟಿ-20 ಕ್ರಿಕೆಟ್‌ಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದು, 2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ತಯಾರಿ ನಡೆಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಗ್ ಬ್ಯಾಶ್ ಲೀಗ್ ಮತ್ತು ಇತರ ಅಂತಾರಾಷ್ಟ್ರೀಯ ಟಿ-20 ಟೂರ್ನಿಗಳಲ್ಲಿಯೂ ಅವರು ಮುಂದುವರೆಯಲಿದ್ದಾರೆ.
ನಿವೃತ್ತಿ ಕುರಿತು ಮಾತನಾಡಿದ ಮ್ಯಾಕ್ಸ್‌ವೆಲ್, 'ನಾನು ಆರಂಭದಲ್ಲಿ ಆಯ್ಕೆಯಾಗಿದ್ದೇ ನನಗೆ ಆಶ್ಚರ್ಯವಾಗಿತ್ತು. ಆಸ್ಟ್ರೇಲಿಯಾ ಪರ ಕೆಲ ಪಂದ್ಯಗಳನ್ನಾದರೂ ಆಡೋಕೆ ಅವಕಾಶ ಸಿಕ್ಕಿದರೆ ಸಾಕು ಅನ್ನಿಸಿತ್ತು. ನಂತರ ಹಲವು ಏರುಪೇರುಗಳ ನಡುವೆಯೂ ವಿಶ್ವಕಪ್‌ಗಳಲ್ಲಿ ಭಾಗವಹಿಸಿ, ಅದ್ಭುತ ತಂಡದ ಭಾಗವಾಗಿದ್ದೇನೆ' ಎಂದು ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಅವರ ನಿವೃತ್ತಿಗೆ ಅಭಿನಂದನೆ ಸಲ್ಲಿಸಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ, 'ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನ ಅತ್ಯಂತ ಡೈನಾಮಿಕ್ ಆಟಗಾರರಲ್ಲಿ ಒಬ್ಬರು. ಅವರ ಪ್ರತಿಭೆ, ಕ್ಷೇತ್ರದಲ್ಲಿ ತೋರಿದ ಶಕ್ತಿ, ಬೌಲಿಂಗ್ ಮಾಡಿದ ರೀತಿ ಮತ್ತು ದೀರ್ಘಾವಧಿಯ ಸೇವೆ ಗಮನಾರ್ಹವಾಗಿದೆ' ಎಂದು ಪ್ರಶಂಸಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಟಿ20 ತಂಡಕ್ಕೆ ಪ್ರಮುಖ ಆಟಗಾರರಾಗಿರಲಿದ್ದಾರೆ.
ಇನ್ನು ಇಂಡಿಯನ್ಸ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮ್ಯಾಕ್ಸ್‌ವೆಲ್ 141 ಪಂದ್ಯಗಳನ್ನಾಡಿ, 2,800ಕ್ಕೂ ಹೆಚ್ಚು ರನ್ ಮತ್ತು 160ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ಬಾದಾರೆ. 18 ಅರ್ಧಶತಕಗಳು ಸಿಡಿಸಿದ್ದು, ಅತಿ ಹೆಚ್ಚು 19 ಬಾರಿ ಡಕ್ ಔಟ್ ಆದ ದಾಖಲೆಯನ್ನೂ ಹೊತ್ತೊಕೊಂಡಿದ್ದಾರೆ. ಮ್ಯಾಕ್ಸ್‌ವೆಲ್ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಟಿ-20 ಹಾಗೂ ಐಪಿಎಲ್‌ನಲ್ಲಿ ಆಟ ಮುಂದುವರೆಸುವುದಾಗಿ ಹೇಳಿದ್ದಾರೆ.












Click it and Unblock the Notifications