ಹಾಲಿ ಕೋಚ್ ಗೌತಮ್ ಗಂಭೀರ್‌ಗೆ, ಮಾಜಿ ಕೋಚ್ ದ್ರಾವಿಡ್ ಕಿವಿ ಮಾತು
ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸ ಆರಂಭಿಸಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕಾರ್ಯ ನಿರ್ವಹಿಸಲಿದ್ದಾರೆ. ಕೋಚ್ ಆಗಿ ಗೌತಿ ಅವರಿಗೆ ಇದು ಮೊದಲ ಪರೀಕ್ಷೆ. ಗೌತಮ್ ಗಂಭೀರ್ ಅವರಿಗೆ ಟಿ20 ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ಅವರು ವಿಡಿಯೋ ಸಂದೇಶ್ ರವಾನಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಲ್ಯಾಪ್‌ಟಾಪ್ ಅನ್ನು ತೆರೆಯುವುದನ್ನು ಈ ವೀಡಿಯೊದಲ್ಲಿ ನೋಡಬಹುದು ಮತ್ತು ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸಂದೇಶವು ಆರಂಭವಾಗುತ್ತದೆ.

ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್, 'ನಮಸ್ಕಾರ ಗೌತಮ್, ವಿಶ್ವದ ಅತ್ಯಂತ ಬೆಸ್ಟ್ ಕೆಲಸಕ್ಕೆ ಸ್ವಾಗತ. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನನ್ನ ಅಧಿಕಾರಾವಧಿ ಮುಗಿದು ಮೂರು ವಾರಗಳು ಕಳೆದಿವೆ ಎಂದು ದ್ರಾವಿಡ್ ತಮ್ಮ ಅನುಭವ ತಿಳಿಸಿದ್ದಾರೆ.
𝗣𝗮𝘀𝘀𝗶𝗻𝗴 𝗼𝗻 𝘁𝗵𝗲 𝗯𝗮𝘁𝗼𝗻 𝘄𝗶𝘁𝗵 𝗰𝗹𝗮𝘀𝘀 & 𝗴𝗿𝗮𝗰𝗲! 📝
— BCCI (@BCCI) July 27, 2024
To,
Gautam Gambhir ✉
From,
Rahul Dravid 🔊#TeamIndia | #SLvIND | @GautamGambhir pic.twitter.com/k33X5GKHm0
ನೆನಪುಗಳ ಮೆಲಕು
ಇನ್ನು ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋಲಿನಿ ಚಾಂಪಿಯನ್ ಪಟ್ಟಕೇರಿದ್ದ ಭಾರತ ತಂಡಕ್ಕೆ, ಮುಂಬೈನಲ್ಲಿ ಅಭೂತ್‌ಪೂರ್ವ ಸ್ವಾಗತವನ್ನು ನೀಡಲಾಗಿತ್ತು. ಇದನ್ನೇ ನೇನಪಿಸಿಕೊಂಡಿರುವ ದ್ರಾವಿಡ್ ಇದೊಂದು ಸ್ಮರಣೀಯ ಕ್ಷಣ ಎಂದು ಬಣಿಸಿದ್ದಾರೆ.

ತಂಡದೊಂದಿಗೆ ಇದ್ದಾಗಿನ ತಮ್ಮ ನೆನಪುಗಳು ಮನದಲ್ಲಿ ಹಸಿರಾಗಿದೆ. ಆಟಗಾರರ ಸ್ನೇಹವನ್ನು ಆನಂದಿಸಿದ್ದೇನೆ. ನೀವು ಈಗ ಭಾರತ ತಂಡದ ಕೋಚ್ ಆಗಿ ಕಾರ್ಯವನ್ನು ಮಾಡಲಿದ್ದೀರಿ. ನಿಮಗೂ ಸಹ ಅದೇ ರೀತಿಯ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.
ಒತ್ತಡದಲ್ಲಿದ್ದಾಗ ಹೀಗೆ ಮಾಡಿ?
ಒತ್ತಡದಲ್ಲಿದ್ದಾಗ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಗೌತಮ್ ಗಂಭೀರ್‌ಗೆ ದ್ರಾವಿಡ್ ಸಲಹೆ ನೀಡಿದ್ದಾರೆ. ಕಷ್ಟದಲ್ಲಿದ್ದಾಗ ನೀವು ಒಮ್ಮೆ ದೊಡ್ಡ ಉಸಿರು ತೆಗೆದುಕೊಂಡು, ಒಂದು ಹೆಜ್ಜೆ ಹಿಂದೆ ಹೋಗಿ, ನಗುತ್ತಾ ಇರಿ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ನಾವು ಒಂದೇ ತಂಡದ ಆಟಗಾರರಾಗಿದ್ದಾಗ, ನೀವು ಬ್ಯಾಟಿಂಗ್‌ನಲ್ಲಿ ಮಾಡಿದ ಸಾಧನೆ ಅಮೋಘ. ತಂಡದ ಸಹ ಆಟಗಾರನಾಗಿ ನಿಮ್ಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅನ್ನು ನಾನು ನೋಡಿದ್ದೇನೆ. ಹಲವು ಐಪಿಎಲ್ ಸೀಸನ್‌ಗಳಲ್ಲಿ ನೀವು ಗೆಲ್ಲಲು ಎಷ್ಟು ತಂಡಕ್ಕೆ ಪ್ರೇರೇಪಿಸಿದ್ದೀರಿ ಎಂದು ನಾನು ಗಮನಿಸಿದ್ದೇನೆ. ಮತ್ತು ನೀವು ಯುವ ಆಟಗಾರರಿಗೆ ಸಹಾಯ ಮಾಡುವುದನ್ನು ನಾನು ನೋಡಿದ್ದೇನೆ. ಇಲ್ಲೂ ತಂಡಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಇಲ್ಲಿ ಆಟಗಾರರು ಸೇರಿದಂತೆ ಎಲ್ಲರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ ಎಂದಿದ್ದಾರೆ.
ಒತ್ತಡದಲ್ಲಿದ್ದಾಗ ಹೀಗೆ ಮಾಡಿ?
ಒತ್ತಡದಲ್ಲಿದ್ದಾಗ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಗೌತಮ್ ಗಂಭೀರ್‌ಗೆ ದ್ರಾವಿಡ್ ಸಲಹೆ ನೀಡಿದ್ದಾರೆ. ಕಷ್ಟದಲ್ಲಿದ್ದಾಗ ನೀವು ಒಮ್ಮೆ ದೊಡ್ಡ ಉಸಿರು ತೆಗೆದುಕೊಂಡು, ಒಂದು ಹೆಜ್ಜೆ ಹಿಂದೆ ಹೋಗಿ, ನಗುತ್ತಾ ಇರಿ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಗೌತಿ ಹೇಳಿದ್ದೇನು?
ದ್ರಾವಿಡ್ ಕಳಿಸಿದ ಸಂದೇಶಕ್ಕೆ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದೇಶ ನನಗೆ ಎಷ್ಟು ಮಹತ್ವದಾಗಿದೆ ಎಂಬುದು ನನಗೆ ತಿಳಿದಿದೆ. ಈ ಸಂದೇಶ ನಿಮ್ಮಿಂದ ಬಂದಿದ್ದು ನನಗೆ ಇನ್ನಷ್ಟು ಬೂಸ್ಟ್ ನೀಡಲಿದೆ. ದೇಶ ಕಂಡ ನಿಸ್ವಾರ್ಥ ಆಟಗಾರ. ದ್ರಾವಿಡ್ ಭಾರತೀಯ ಕ್ರಿಕೆಟ್‌ಗಾಗಿ ಏನು ಮಾಡಿದರೂ ಮತ್ತು ಎಲ್ಲವೂ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯ. ಮುಂದಿನ ಪೀಳಿಗೆಗೂ ಇವರು ಮಾದರಿ ಎಂದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications