ಟೀಮ್ ಇಂಡಿಯಾ ಕೋಚ್‌ ಗೌತಮ್ ಮುಂದಿರುವ ಮೂರು "ಗಂಭೀರ" ಸವಾಲುಗಳು

ಟೀಮ್ ಇಂಡಿಯಾ ನೂತನ ಕೋಚ್‌ ನೇಮಕ ಆಗಿದೆ. ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಟೀಮ್ ಇಂಡಿಯಾ ಅಲಂಕರಿಸಿದೆ. ಚಾಂಪಿಯನ್‌ ತಂಡದ ಕೋಚ್‌ ಅಧಿಕಾರದ ಅವಧಿ ಮುಗಿದಿದ್ದು, ಐತಿಹಾಸಿಕ ಗೆಲುವಿನ ಮೂಲಕ ತಂಡಕ್ಕೆ ರಾಹುಲ್‌ ದ್ರಾವಿಡ್‌ ಗುಡ್‌ ಬೈ ಹೇಳಿದ್ದಾರೆ. ಈಗ ಇವರ ಸ್ಥಾನವನ್ನು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತುಂಬಲಿದ್ದಾರೆ.

ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಬಳಿಕ ಇದೀಗ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೊದಲ ಸರಣಿ ಆಡಲಿದೆ. ಇದಕ್ಕಾಗಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಇದೀಗ ಟೀಂ ಇಂಡಿಯಾದ ಹೊಸ ಕೋಚ್ ಆದ ನಂತರ ಗೌತಮ್ ಗಂಭೀರ್ ಈ 3 ದೊಡ್ಡ ಸವಾಲುಗಳನ್ನು ಎದುರಿಸಲಿದ್ದಾರೆ.

Gautam Gambhir Appointed as New Head Coach of Team India Faces Major Challenges Ahead

WTC ಫೈನಲ್

ಟೀಮ್ ಇಂಡಿಯಾ WTC ಫೈನಲ್ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿದೆ. ಸತತ ಎರಡು ವರ್ಷ ಫೈನಲ್‌ ಪ್ರವೇಶಿಸಿದರೂ, ಪ್ರಶಸ್ತಿ ವಂಚಿತರಾಗಿರುವ ಬ್ಲ್ಯೂ ಬಾಯ್ಸ್‌, ಈ ಬಾರಿ ಶತಾಯ ಗತಾಯ ಕಪ್‌ಗೆ ಮುತ್ತಿಡುವ ಕನಸು ಕಾಣುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ 2025 ರಲ್ಲಿ ನಡೆಯಲಿದೆ. ಈ ಬಾರಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವ ಸವಾಲು ಗೌತಮ್ ಗಂಭೀರ್ ಮುಂದಿದೆ.

ಟೀಂ ಇಂಡಿಯಾ ಹಲವು ಬಾರಿ ಫೈನಲ್‌ಗೆ ತಲುಪಿದೆ ಆದರೆ ಭಾರತ ತಂಡ ಫೈನಲ್‌ನಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಗಂಭೀರ್ ತಮ್ಮ ಕೋಚಿಂಗ್ ಅಡಿಯಲ್ಲಿ ಟೀಮ್ ಇಂಡಿಯಾಗೆ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತೊಡಿಸಲು ಶ್ರಮಿಸಬೇಕಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ

ಐಸಿಸಿ ಚಾಂಪಿಯನ್‌ಶಿಪ್ 2025 ಅನ್ನು ಪಾಕಿಸ್ತಾನ ಆಯೋಜಿಸಲಿದೆ. ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಐಸಿಸಿ ಟೂರ್ನಿಯನ್ನು ಈ ಸರಣಿಯಿಂದಲೇ ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ಅವರ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾವನ್ನು ಮೊದಲ ಪ್ರಮುಖ ಐಸಿಸಿ ಟೂರ್ನಮೆಂಟ್ ಗೆಲ್ಲುವಂತೆ ಮಾಡುವ ಸವಾಲು ಗೌತಮ್‌ ಮುಂದಿದೆ. 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಕೊನೆಯ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿತ್ತು.

Gautam Gambhir Appointed as New Head Coach of Team India Faces Major Challenges Ahead

ಮುಂದಿನ ಟಿ20 ವಿಶ್ವಕಪ್‌ಗೆ ತಂಡ

ಈಗಾಗಲೇ ಅನುಭವಿ ಆಟಗಾರರಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ನಾಯಕ ರೋಹಿತ್‌ ಶರ್ಮಾ, ಆಲ್‌ರೌಂಡರ್‌ ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಭಾರತ ತಂಡದ ಆಟಗಾರರು ಈ ನಿರ್ಧಾರ ಪ್ರಕಟಿಸಿದ್ದಾರೆ. ಈಗ ಗೌತಮ್‌ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ 2026ಗೆ ತಯಾರಿ ನಡೆಸಬೇಕಿದೆ.

ಟಿ20 ವಿಶ್ವಕಪ್‌ಗಾಗಿ ಗೌತಮ್ ಗಂಭೀರ್ ಹೊಸ ಹಾಗೂ ಯುವ ತಂಡವನ್ನು ಸಿದ್ಧಪಡಿಸಬೇಕಿದೆ. ಶ್ರೀಲಂಕಾ ಪ್ರವಾಸದಿಂದಲೇ ಗಂಭೀರ್ ಇದಕ್ಕಾಗಿ ಸಿದ್ಧತೆ ಆರಂಭಿಸಲಿದ್ದಾರೆ. ಮುಂಬರುವ ಚುಟುಕು ವಿಶ್ವಕಪ್‌ಗೆ ಗೌತಮ್‌ ಈಗಿನಿಂದಲೇ ರೋಡ್ ಮ್ಯಾಪ್ ಹಾಕಿಕೊಳ್ಳಬೇಕಿದೆ. ಇಲ್ಲದೇ ಇದಲ್ಲಿ ಟೀಕೆಗೆ ಗುರಿಯಾಗಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+