ಟೀಂ ಇಂಡಿಯಾ ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್‌ಗೆ ಮಾತೃ ವಿಯೋಗ
Javagal Srinath Mother Passed Away: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ತಾಯಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಮೈಸೂರಿನ ಕುವೆಂಪು ನಗರದಲ್ಲಿ ವಾಸವಿದ್ದ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮಿ ನಿಧನ ಹೊಂದಿದ್ಧಾರೆ ಎಂದು ತಿಳಿದುಬಂದಿದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಐಸಿಸಿ ಮ್ಯಾಚ್ ರೆಫರಿ ಆಗಿರುವ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮಿ ಅಬರು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಈ ಸುದ್ದಿ ಜಾವಗಲ್ ಶ್ರೀನಾಥ್ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಭಾಗ್ಯಲಕ್ಷ್ಮಿ ಅವರು ತಮ್ಮ ಪತಿ ಜೆ.ಕೆ. ಚಂದ್ರಶೇಖರ್ ಅವರೊಂದಿಗೆ ಸರಳ ಜೀವನ ನಡೆಸಿದ್ದರು. ಇವರು ಇದೀಗ ಜಾವಗಲ್ ಶ್ರೀನಾಥ್ ಸೇರಿದಂತೆ ಜೆ.ಸಿ. ಶ್ರೀನಿವಾಸ್, ಜೆ.ಸಿ.ಶ್ರೀಲಕ್ಷ್ಮಿ ಹಾಗೂ ಜೆ.ಸಿ. ಶ್ರೀಲತಾ ಎಂಬ ಮಕ್ಕಳನ್ನು ಅಗಲಿದ್ದಾರೆ.

ಮೈಸೂರಿನ ಜಾವಗಲ್ ಗ್ರಾಮದಲ್ಲಿ ಭಾಗ್ಯಲಕ್ಷ್ಮಿ ಅವರು ಜನಿಸಿದ್ದರು. ತಮ್ಮ ಪತಿ ಜೆ.ಕೆ.ಚಂದ್ರಶೇಖರ್ ಅವರೊಂದಿಗೆ, ಕುವೆಂಪುನಗರದಲ್ಲಿ ಸರಳ ಜೀವನ ನಡೆಸುತ್ತಿದ್ದರು. ಚಂದ್ರಶೇಖರ್ ಅವರು ವ್ಯಾಪಾರಿ ಆಗಿದ್ದು, ಕ್ರೀಡಾಪ್ರಿಯರು ಗಿದ್ದರು ಹಾಗೂ ಕರ್ನಾಟಕದಲ್ಲಿ ಫುಟ್‌ಬಾಲ್ ಅನ್ನು ಕೂಡ ಆಡಿ ಗಮನ ಸೆಳೆದಿದ್ದರು.
ಆದರೆ, 2018ರಲ್ಲಿ ಚಂದ್ರಶೇಖರ್ ಅವರ ನಿಧನ ಆಗಿದ್ದು, ಇದೀಗ ಅವರ ಪತ್ನಿ ಭಾಗ್ಯಲಕ್ಷ್ಮಿ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಆಗಸ್ಟ್ 16ರ ರಾತ್ರಿ ನಿಧನರಾಗಿದ್ಧಾರೆ ಎಂದು ತಿಳಿದುಬಂದಿದೆ.
ಭಾರತದ ಮೈಸೂರು ಎಕ್ಸ್‌ಪ್ರೆಸ್ ಅಂತಲೇ ಪ್ರಸಿದ್ಧಿ ಆಗಿರುವ ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು, 1991ರಿಂದ 2003ರ ವರೆಗೆ ಟಿಂ ಇಂಡಿಯಾವನ್ನ ಪ್ರತಿನಿಧಿಸಿದ್ದರು. 67 ಟೆಸ್ಟ್, 229 ಏಕದಿನ ಪಂದ್ಯಗಳಲ್ಲಿ ಆಡಿದ್ದು, 551 ವಿಕೆಟ್‌ಗಳನ್ನು ಕಬಳಿಸಿರುವ ಶ್ರೀನಾಥ್ ಅವರು ಭಾರತದ ಮಾರಕ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ತಂದೆ ಚಂದ್ರಶೇಖರ್ 2018ರಲ್ಲಿ ನಿಧನರಾದರು. ಇದೀಗ ತಾಯಿ ಭಾಗ್ಯಲಕ್ಷ್ಮಿ ಅವರು ನಿಧನರಾಗಿದ್ಧಾರೆ.
ಶ್ರೀನಾಥ್ ಅವರು ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಐಸಿಸಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮೈಸೂರು ಜಿಲ್ಲೆಯ ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ, ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊತೆಗೆ, ಯೋಗ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಭಾಗ್ಯಲಕ್ಷ್ಮಿ ಅವರು ತಮ್ಮ ಮಗನ ಈ ಉತ್ತಮ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತಲೇ ಬಂದಿದ್ದರು. ಮೈಸೂರು ವಿಶ್ವವಿದ್ಯಾಲಯವು 2023ರಲ್ಲಿ ಶ್ರೀನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಈ ವೇಳೆ ಭಾಗ್ಯಲಕ್ಷ್ಮಿ ಅವರ ಸರಳತೆಯನ್ನು ಶ್ರೀನಾಥ್‌ರ ಸಾಧನೆಗೆ ಮೂಲ ಎಂದು ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದರು. ಇನ್ನು ಇದೀಗ ಭಾಗ್ಯಲಕ್ಷ್ಮಿ ಅವರ ನಿಧನದ ಸುದ್ದಿ ಮೈಸೂರಿನ ಸ್ಥಳೀಯ ನಿವಾಸಿಗಳು ಹಾಗೂ ಕ್ರೀಡಾಪ್ರಿಯರಿಗೆ ದುಃಖ ಉಂಟುಮಾಡಿದೆ.












Click it and Unblock the Notifications