• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಕ್ರಿಕೆಟ್ ತಂಡಕ್ಕೆ ಭಾರತದ ಮಾಜಿ ಕ್ರಿಕೆಟರ್ ಮನೋಜ್ ಕೋಚ್

|
Google Oneindia Kannada News

ಕಠ್ಮಂಡು, ಆಗಸ್ಟ್ 9: ಭಾರತದ ಮಾಜಿ ಕ್ರಿಕೆಟರ್ ಮನೋಜ್ ಪ್ರಭಾಕರ್ ಅವರನ್ನು ನೇಪಾಳದ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಿಸಲಾಗಿದೆ. ಈ ಕುರಿತಂತೆ ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ​​(CAN) ಸೋಮವಾರದಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಭಾರತದ ಮಾಜಿ ಆಲ್‌ರೌಂಡರ್ ಪ್ರಭಾಕರ್ ಅನುಭವಿ ಕೋಚ್ ಆಗಿ ಕೂಡಾ ಹೆಸರು ಗಳಿಸಿದ್ದಾರೆ. ಮೂರು ರಣಜಿ ಟ್ರೋಫಿ ತಂಡಗಳಿಗೆ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. 2016 ರಲ್ಲಿ, 169 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪರ ಆಡಿದ್ದ ಪ್ರಭಾಕರ್ ಈ ಹಿಂದೆ ಅಫ್ಘಾನಿಸ್ತಾನದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಂಗಾಮಿ ಕಾರ್ಯದರ್ಶಿ - ಪ್ರಶಾಂತ್ ಬಿಕ್ರಮ್ ಮಲ್ಲ ಅವರ ನೇತೃತ್ವದ ಕೋಚ್ ನೇಮಕಾತಿ ಸಮಿತಿಯು ಖಜಾಂಚಿ - ರೋಷನ್ ಕುಮಾರ್ ಸಿಂಗ್, ಜನರಲ್ ಮ್ಯಾನೇಜರ್ - ರೌನಕ್ ಬಿ. ಮಲ್ಲ ಮತ್ತು ಕ್ರಿಕೆಟ್ ಮ್ಯಾನೇಜರ್ - ಬಿನೋದ್ ಕುಮಾರ್ ದಾಸ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಯ್ಕೆ ಮಾಡಿದೆ.

"ಭಾರತದ ಮಾಜಿ ಸ್ಟಾರ್ ಆಲ್ ರೌಂಡರ್ ಮತ್ತು ರಣಜಿ ಟ್ರೋಫಿ ವಿಜೇತ ಕೋಚ್, ಭಾರತದ ಮನೋಜ್ ಪ್ರಭಾಕರ್ ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪ್ರಭಾಕರ್ ಅವರು ಭಾರತಕ್ಕಾಗಿ 39 ಟೆಸ್ಟ್ ಪಂದ್ಯಗಳು ಮತ್ತು 130 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದೆಹಲಿ, ರಾಜಸ್ಥಾನ ಮತ್ತು ಯುಪಿ ಕ್ರಿಕೆಟ್ ಅಸೋಸಿಯೇಷನ್‌ನ ರಣಜಿ ಟ್ರೋಫಿ ತಂಡಗಳೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ, "ಎಂದು ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೇಪಾಳ ಸದ್ಯ ಸಂಕಷ್ಟ ಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಪ್ರಭಾಕರ್ ನೇಪಾಳಿ ಕ್ರಿಕೆಟ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನೇಪಾಳ 2022ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಅರ್ಹತಾ ಪಂದ್ಯವನ್ನು ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೋಚ್ ಆಗಿ ಆಯ್ಕೆಯಾದ ಬಗ್ಗೆ ಪ್ರಭಾಕರ್, "ನೇಪಾಳದಲ್ಲಿ ಕ್ರಿಕೆಟ್‌ನ ಆಸಕ್ತಿ, ಅವರ ಪ್ರತಿಭೆ ಮತ್ತು ಕೌಶಲ್ಯ ಮಟ್ಟವನ್ನು ನೋಡಿ, ನೇಪಾಳ ಕ್ರಿಕೆಟ್ ತಂಡವನ್ನು ಪರಿಗಣಿಸಲು ಕ್ರಿಕೆಟ್ ಶಕ್ತಿಯನ್ನಾಗಿ ಮಾಡಲು ಅವರೊಂದಿಗೆ ಕೆಲಸ ಮಾಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ." ಎಂದಿದ್ದಾರೆ. ಕಳೆದ ವರ್ಷ ಪುಬುಡು ದಸನಾಯಕೆ ಪುರುಷರ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮರು ನೇಮಕಗೊಂಡಿದ್ದರು.

Former India Cricketer Manoj Prabhakar Appointed As New Head Coach Of Nepal

ದಸನಾಯಕೆ ಅವರು ಈ ಹಿಂದೆ ನೇಪಾಳದಲ್ಲಿ 2011 ರಿಂದ 2016 ರವರೆಗೆ ಇದ್ದರು, ವಿಶ್ವ ಕ್ರಿಕೆಟ್ ಲೀಗ್ (WCL) ನ ನಾಲ್ಕನೇ ವಿಭಾಗದಿಂದ WCL ಚಾಂಪಿಯನ್‌ಶಿಪ್ ಡಿವಿಷನ್ ಒಂದಕ್ಕೆ ಮಾರ್ಗದರ್ಶನ ನೀಡಿದರು. ಅವರು ತಂಡವನ್ನು ತಮ್ಮ ಮೊದಲ ಪ್ರಮುಖ ICC ಟೂರ್ನಮೆಂಟ್, 2014 T20 ವಿಶ್ವಕಪ್‌ಗೆ ಕರೆದೊಯ್ದಿದ್ದರು.

Recommended Video

   Asia Cupಗಾಗಿ ಪ್ರಕಟವಾದ ಭಾರತ ತಂಡದಲ್ಲಿ ಏನೆಲ್ಲಾ ಸಮಸ್ಯೆಗಳಿವೆ | OneIndia Kannada
   English summary
   The Cricket Association of Nepal (CAN) on Monday announced former Indian cricketer Manoj Prabhakar as the new head coach of the Nepal Men's national team. Succeeding Pubudu Dassanayake.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X