ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೆಡೆ ಆರ್ಭಟಿಸಿದ ಕಿರಿಯರು, ಇನ್ನೊಂದೆಡೆ ಸೋತುಸುಣ್ಣವಾದ ಹಿರಿಯರು

|
Google Oneindia Kannada News

ನವದೆಹಲಿ, ಸೆ. 28: ಭಾರತ ಫುಟ್ಬಾಲ್ ತಂಡಗಳು ಮಂಗಳವಾರ ನಡೆದ ಪಂದ್ಯಗಳಲ್ಲಿ ಮಿಶ್ರಫಲ ಅನುಭವಿಸಿವೆ. ಭಾರತ ರಾಷ್ಟ್ರೀಯ ತಂಡ ವಿಯೆಟ್ನಾಂ ಎದುರು 0-3 ಗೋಲುಗಳಿಂದ ಸೋತರೆ, ಅಂಡರ್-17 ತಂಡ 3-1 ಗೋಲುಗಳ ಅಂತರದಿಂದ ಓಮನ್ ಅನ್ನು ಮಣಿಸಿದೆ. ಎರಡೂ ಕೂಡ ಫ್ರೆಂಡ್ಲಿ ಮ್ಯಾಚ್‌ಗಳಾಗಿದ್ದು ಪ್ರಮುಖ ಟೂರ್ನಿಗೆ ಸಿದ್ಧತಾ ಪಂದ್ಯಗಳಾಗಿವೆ.

ಏಷ್ಯಾ ಕಪ್‌ನಲ್ಲಿ ಆಡಲು ಅರ್ಹತೆ ಪಡೆದಿರುವ ಭಾರತ ಫುಟ್ಬಾಲ್ ತಂಡಕ್ಕೆ ಆ ಟೂರ್ನಿಗೆ ಮುನ್ನ ಇದು ಕೊನೆಯ ಅಭ್ಯಾಸ ಪಂದ್ಯವಾಗಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಸಿಂಗಾಪುರ್ ವಿರುದ್ಧ 1-1 ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿದ್ದ ಭಾರತೀಯರು ಮಂಗಳವಾರ ಪ್ರಬಲ ವಿಯೆಟ್ನಾಂ ಎದುರು ಒಂದೂ ಗೋಲು ಗಳಿಸಲಾಗದೇ ಸೋತರು. ವಿಯೆಟ್ನಾಂನ ಹುಂಗ್ ತಿನ್ಹ್ ಫ್ರೆಂಡ್ಲಿ ಫುಟ್ಬಾಲ್ ಟೂರ್ನಿಯ ಭಾಗವಾಗಿ ಈ ಎರಡು ಪಂದ್ಯಗಳನ್ನು ಭಾರತ ಆಡಿತು.

ಲಂಡನ್ ಹೋಟೆಲ್ ರೂಮಲ್ಲಿ ಹಣ, ಒಡವೆ ಕಳೆದುಕೊಂಡ ಭಾರತೀಯ ಕ್ರಿಕೆಟರ್ಲಂಡನ್ ಹೋಟೆಲ್ ರೂಮಲ್ಲಿ ಹಣ, ಒಡವೆ ಕಳೆದುಕೊಂಡ ಭಾರತೀಯ ಕ್ರಿಕೆಟರ್

ವಿಶ್ವ ಫುಟ್ಬಾಲ್ ರ‍್ಯಾಂಕಿಂಗ್‌ನಲ್ಲಿ ಭಾರತ 104ನೇ ಸ್ಥಾನದಲ್ಲಿದೆ. ರ‍್ಯಾಂಕಿಂಗ್‌ನಲ್ಲಿ ತನಗಿಂತ ಬಹಳ ಕೆಳಗಿರುವ ಸಿಂಗಾಪುರ ವಿರುದ್ಧ ಭಾರತ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಗೋಲು ಗಳಿಸುವ ಅನೇಕ ಅವಕಾಶಗಳನ್ನು ಭಾರತ ಕೈಚೆಲ್ಲಿತ್ತು. ನಾಯಕ ಸುನೀಲ್ ಛೇಟ್ರಿ ಕೂಡ ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿ ನಿರಾಶೆ ವ್ಯಕ್ತಪಡಿಸಿದ್ದರು.

Football; India Team Loses To Vietnam, U-17 Team Beat Oman

ಇತ್ತ ವಿಯೆಟ್ನಾಂ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದೆ. ಹೀಗಾಗಿ, ಭಾರತಕ್ಕೆ ಈ ಪಂದ್ಯ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಮೊದಲಾರ್ಧದಲ್ಲಿ ಭಾರತ ಉತ್ತಮ ಪೈಪೋಟಿ ನೀಡಿತಾದರೂ ಎರಡನೇ ಭಾಗದಲ್ಲಿ ವಿಯೆಟ್ನಾಂ ಆಟಗಾರರು ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು.

ಭಾರತದ ಗೆಲುವಿನ ಜೊತೆ ಗಮನ ಸೆಳೆದ ವಿರಾಟ್ ಕೊಹ್ಲಿ ಸೆಲಬ್ರೇಶನ್ಭಾರತದ ಗೆಲುವಿನ ಜೊತೆ ಗಮನ ಸೆಳೆದ ವಿರಾಟ್ ಕೊಹ್ಲಿ ಸೆಲಬ್ರೇಶನ್

ವಿಯೆಟ್ನಾಂ ವಿರುದ್ಧ ಭಾರತ ಈ ಹಿಂದೆ ಕೆಲ ಬಾರಿ ಗೆದ್ದಿದಿದೆ. 2010ರಲ್ಲಿ ವಿಯೆಟ್ನಾಂ ವಿರುದ್ಧ ಭಾರತ 3-1 ಗೋಲುಗಳಿಂದ ಸೋಲಿಸಿತ್ತು. ಅದಾದ ಬಳಿಕ ಇವೆರಡು ತಂಡಗಳು ಸಂಧಿಸಿದ್ದು ಇದೇ ಮೊದಲು. ಗಮನಿಸಬೇಕಾದ ಅಂಶ ಎಂದರೆ ಕಳೆದ 10 ವರ್ಷದಲ್ಲಿ ವಿಯೆಟ್ನಾಂ ಫುಟ್ಬಾಲ್ ಗಣನೀಯವಾಗಿ ವೃದ್ಧಿಸಿದೆ. ಏಷ್ಯಾದ ಪ್ರಬಲ ತಂಡಗಳಿಗೆ ಉತ್ತಮ ಪೈಪೋಟಿ ನೀಡಲು ಸಮರ್ಥವೆನಿಸಿದೆ. 2022ರ ಫೀಫಾ ವರ್ಲ್ಡ್ ಕಪ್ ಕ್ವಾಲಿಫಯರ್ಸ್ ಟೂರ್ನಿಯ ಅಂತಿಮ ಸುತ್ತು ತಲುಪಿತ್ತು. 2019ರ ಏಷ್ಯನ್ ಕಪ್‌ನ ಎಂಟರ ಹಂತವನ್ನೂ ತಲುಪಲು ಯಶಸ್ವಿಯಾಗಿತ್ತು.

ಇನ್ನೊಂದೆಡೆ ಭಾರತ ಫುಟ್ಬಾಲ್ ತಂಡದ ರ‍್ಯಾಂಕಿಂಗ್ ಇತ್ತೀಚೆಗೆ ಉತ್ತಮಗೊಂಡಿದೆಯಾದರೂ ಆಟದ ಮಟ್ಟದಲ್ಲಿ ಗಮನಾರ್ಹ ಏರಿಕೆ ಆಗಿಲ್ಲ. ಈಗಲೂ ಭಾರತ ತಂಡ ಫುಟ್ಬಾಲ್‌ನಲ್ಲಿ ಮಲಗಿರುವ ದೈತ್ಯ ದೇಶವೇ ಆಗಿ ಮುಂದುವರಿಯುತ್ತಿದೆ.

Football; India Team Loses To Vietnam, U-17 Team Beat Oman

ಕಿರಿಯರ ತಂಡದ ಸಾಧನೆ
ಎಎಫ್‌ಸಿ ಅಂಡರ್-17 ಏಷ್ಯನ್ ಕಪ್ ಕ್ವಾಲಿಯರ್ಸ್ ಟೂರ್ನಿಗೆ ಸಿದ್ಧಗೊಳ್ಳುತ್ತಿರುವ ಭಾರತದ ಅಂಡರ್-17 ಫುಟ್ಬಾಲ್ ತಂಡ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಮಸ್ಕಟ್ ನಗರದಲ್ಲಿ ನಡೆದ ಪಂದ್ಯದಲ್ಲಿ ಓಮನ್ ಹುಡುಗರ ವಿರುದ್ಧ ಭಾರತೀಯರು 3-1ರಿಂದ ಸೋಲಿಸಿತು. ಭಾರತದ ಪರ ಗಾಂಗ್ಟೆ, ತೋಕ್‌ಚೋಮ್ ಮತ್ತು ಲಾಲ್ಪೆಖ್ಲುವಾ ಗೋಲು ಗಳಿಸಿದರು.

ಅಂಡರ್-17 ಏಷ್ಯನ್ ಕಪ್ ಕ್ವಾಲಿಫಯರ್ಸ್ ಟೂರ್ನಿ ಸೌದಿ ಅರೇಬಿಯಾದ ದಮ್ಮಮ್ ನಗರದಲ್ಲಿ ಅಕ್ಟೋಬರ್ 3ರಂದು ಅರಂಭವಾಗುತ್ತಿದೆ. ಒಟ್ಟು 47 ತಂಡಗಳು ಸೆಣಸುತ್ತಿದ್ದು 10 ಗುಂಪುಗಳನ್ನು ಮಾಡಲಾಗಿದೆ. ಡಿ ಗುಂಪಿನಲ್ಲಿ ಭಾರತ ಇದೆ. ಭಾರತದ ಜೊತೆ ಸೌದಿ ಅರೇಬಿಯಾ, ಮಯನ್ಮಾರ್, ಮಾಲ್ಡೀವ್ಸ್ ಮತ್ತು ಕುವೇತ್ ತಂಡಗಳಿವೆ.

ಭಾರತದ ಪಂದ್ಯಗಳ ವೇಳಾಪಟ್ಟಿ
1) ಭಾರತ ವರ್ಸಸ್ ಮಾಲ್ಡೀವ್ಸ್ - ಅ. 3
2) ಭಾರತ ವರ್ಸಸ್ ಕುವೇತ್ - ಅ. 5
3) ಭಾರತ ವರ್ಸಸ್ ಮಯನ್ಮಾರ್ - ಅ. 7
4) ಭಾರತ ವರ್ಸಸ್ ಸೌದಿ ಅರೇಬಿಯಾ - ಅ. 9

(ಒನ್ಇಂಡಿಯಾ ಸುದ್ದಿ)

English summary
India football team suffered loss agaist higher ranked Vietnam in a friendly match before start of AFC Asian Cup Tournament. While U-17 team is performing great by beating Oman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X