ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2010 - Group Wise Fixture

By Super
|
Google Oneindia Kannada News

ಜೋಹಾನ್ಸ್ ಬರ್ಗ್, ಜೂ.22: ಛೇ! ಹೀಗಾಗಬಾರದಿತ್ತು...ಇದು ಎಲ್ಲರ ಒಕ್ಕೊರಲ ಉದ್ಗಾರ. ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ಕಾಕಾರನ್ನು ಫ್ರೆಂಚ್ ರೆಫ್ರಿ ಸ್ಟಿಫನ್ ನೊಯ್ ವಿನಾಕಾರಾಣ ಮೈದಾನದಿಂದ ಹೊರಕ್ಕೆ ಕಳಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ, ಪಂದ್ಯದಲ್ಲಿ ಎರೆಡೆರಡು ಹ್ಯಾಂಡ್ ಬಾಲ್ ಆದರೂ ರೆಫ್ರಿ ಕಣ್ಣಿಗೆ ಬೀಳದೇ ಹೋದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಳದಿ ಕಾರ್ಡ್ ನಿಯಮಕ್ಕೆ ಬದಲಾವಣೆ ತಂದಿದ್ದೇವೆ. ಸ್ಟಾರ್ ಆಟಗಾರರನ್ನು ಮುಂದಿನ ಹಂತದವರೆಗೂ ಉಳಿಸಿಕೊಳ್ಳಲಾಗುವುದು ಎಂದು ಫೀಫಾ ಇತ್ತೀಚೆಗೆ ಬೊಬ್ಬೆ ಹಾಕಿದ್ದು, ಬಹುಶಃ ಫ್ರಾನ್ಸ್ ನ ರೆಫ್ರಿ ಕಿವಿಗೆ ಬಿದ್ದಂತ್ತಿಲ್ಲ.

ಬ್ರೆಜಿಲ್ ಹಾಗೂ ಐವರಿ ಕೋಸ್ಟ್ ಪಂದ್ಯದಲ್ಲಿ ಅಬ್ದುಲ್ ಕದರ್ ಕೈಟ ನಾಟಕೀಯವಾಗಿ ಬಿದ್ದು,ಮುಖಮುಚ್ಚಿಕೊಂಡದ್ದನ್ನು ನೋಡಿದ ರೆಫ್ರಿಗೆ ಕರ್ತವ್ಯ ಜಾಗೃತಿಕೊಂಡು, ಮೊದಲೇ ಹಳದಿ ದಿರಿಸಿನಲ್ಲಿ ಸುಂದರವಾಗಿ ಕಾಣುತ್ತಿದ್ದ ಕಾಕಾಗೆ ಹಳದಿ ಕಾರ್ಡ್ ತೋರಿಸಿ, ಎರಡನೇ ಹಳದಿ ಕಾರ್ಡ್ ಪಡೆದ ಮೈದಾನದಿಂದ ಹೊರಗಟ್ಟಿಬಿಟ್ಟ.

ನಿಜ. ಮರಡೋನಾ ಸುಮ್ಮನೆ ಏನೇನೊ ಬಡಬಡಾಯಿಸುವ ಪೈಕಿಯಲ್ಲ. ಅರ್ಜೆಂಟೀನಾದ ಸ್ಟಾರ್ ಆಟಗಾರರಾದ ಮೆಸ್ಸಿ, ಟೆವೆಜ್ ಗೆ ಎದುರಾಳಿ ತಂಡದ ಒರಟಾಟದಿಂದ ರಕ್ಷಣೆ ಬೇಕಿದೆ ಎಂದಿದ್ದರು. ಈ ಮಾತು ಬ್ರೆಜಿಲ್ ಆಟಗಾರರಿಗೂ ಅನ್ವಯಿಸುತ್ತದೆ. ತನ್ನದಲ್ಲದ ತಪ್ಪಿಗೆ ಕಾಕಾ ಬಲಿಯಾಗಿದ್ದಾರೆ.

English summary
The group stage match will take place from Friday 11 June to Friday 26 June in various cities in South Africa. The top two teams in each group based on points, or the team with greater goal difference if teams are equal on points will make it to the next round.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X