ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2022 : ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಫಿಫಾ ವಿಶ್ವಕಪ್ ಲೈವ್ ಪ್ರದರ್ಶನ

|
Google Oneindia Kannada News

ನವದೆಹಲಿ, ನವೆಂಬರ್ 24: ಮಲ್ಟಿಪ್ಲೆಕ್ಸ್ ಆಪರೇಟರ್ ಐನಾಕ್ಸ್ ಲೇಸರ್‌ ಬುಧವಾರ 15 ನಗರಗಳಲ್ಲಿನ ತನ್ನ 22 ಮಲ್ಟಿಪ್ಲೆಕ್ಸ್‌ಗಳಲ್ಲಿ ಫಿಫಾ ವಿಶ್ವಕಪ್‌ನ ಲೈವ್ ಪಂದ್ಯಗಳನ್ನು ಪ್ರದರ್ಶಿಸುವುದಾಗಿ ಘೋಷಿಸಿದೆ.

ಕತಾರ್ ದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರ ಸುಮಾರು 40 ಪಂದ್ಯಗಳನ್ನು ನೇರ ಪ್ರಸಾರ ಮಾಡುವುದಾಗಿ ಐನಾಕ್ಸ್ ಘೋಷಿಸಿದೆ. ಈ ವಾರದಲ್ಲಿ ಆರಂಭವಾದ ಫಿಫಾ ವಿಶ್ವಕಪ್ ಡಿಸೆಂಬರ್ 18ರವರೆಗೂ ನಡೆಯಲಿದೆ.

ಐನಾಕ್ಸ್ ಹಾಲ್‌ಗಳಲ್ಲಿ ಕುಳಿತು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಬೇಕೇ?ಐನಾಕ್ಸ್ ಹಾಲ್‌ಗಳಲ್ಲಿ ಕುಳಿತು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಬೇಕೇ?

ಸಾಕರ್ ಅಭಿಮಾನಿಗಳು ತನ್ನ ಮಲ್ಟಿಪ್ಲೆಕ್ಸ್‌ನಲ್ಲಿ ಕಾರ್ನೀವಲ್‌ನಂತಹ ವಾತಾವರಣದಲ್ಲಿ ಕ್ರೀಡಾಂಗಣದ ಅನುಭವವನ್ನು ಕಂಡುಕೊಳ್ಳುತ್ತಾರೆ ಎಂದು ಐನಾಕ್ಸ್ ಹೇಳಿಕೆ ತಿಳಿಸಿದೆ.

FIFA World Cup: INOX to screen live matches at its 22 multiplexes

ಮರೆಯಲಾಗದ ನೆನಪುಗಳನ್ನು ನೀಡುವ ಅವಕಾಶ

ಐನಾಕ್ಸ್ ಲಿಯೋಸುರ್ ಸಿಇಒ ಅಲೋಕ್ ಟಂಡನ್ ಮಾತನಾಡಿದ್ದು, "ಈ ಮೂಲಕ ಮರೆಯಲಾಗದ ಅನುಭವ ಮತ್ತು ನೆನಪುಗಳನ್ನು ಸೃಷ್ಟಿಸುವ, ಅವಕಾಶವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕ್ರೀಡಾಂಗಣದಲ್ಲಿಯೇ ಇದ್ದಂತಹ ಅನುಭವ ಅಭಿಮಾನಿಗಳಿಗೆ ಆಗುತ್ತದೆ. ಈ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಈ ಐತಿಹಾಸಿಕ ಸ್ಕ್ರೀನಿಂಗ್ ಮೂಲಕ ಕ್ರೀಡೆಯೊಂದಿಗೆ ಹೊಸತನದ ಪಯಣ ಪ್ರಾರಂಭವಾಗಲಿದೆ' ಎಂದು ಹೇಳಿದ್ದಾರೆ.

ಪರ್ಯಾಯ ಆದಾಯಕ್ಕಾಗಿ ಹೊಸ ಹಾದಿ

ಈ ಹಿಂದೆ ಐನಾಕ್ಸ್ ಇತ್ತೀಚೆಗೆ ಮುಕ್ತಾಯಗೊಂಡ ಪುರುಷರ ಟಿ-20 ವಿಶ್ವಕಪ್ 2022 ಮತ್ತು ಏಷ್ಯಾ ಕಪ್ ಪಂದ್ಯಗಳ ಆಯ್ದ ಪಂದ್ಯಗಳನ್ನು ತನ್ನ ಆಯ್ದ ಪರದೆಗಳಲ್ಲಿ ಲೈವ್ ಆಗಿ ಪ್ರಸಾರ ಮಾಡಿತ್ತು. ಈಗ ಸುಮಾರು ಎರಡು ವರ್ಷಗಳಿಂದ ಲಾಕ್‌ಡೌನ್ ಮತ್ತು ಕೋವಿಡ್-ಪ್ರೇರಿತ ನಿರ್ಬಂಧದ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾದ ಮಲ್ಟಿಪ್ಲೆಕ್ಸ್ ಉದ್ಯಮವು ಸಾಂಪ್ರದಾಯಿಕ ಚಲನಚಿತ್ರ ಪ್ರದರ್ಶನ ವ್ಯವಹಾರವನ್ನು ಮೀರಿ ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿದೆ.

ವ್ಯಾಪಾರಿಗಳು ಸಹ ವ್ಯಾಪಾರಕ್ಕಾಗಿ ಚಲನಚಿತ್ರಗಳ ಖಾಸಗಿ ಪ್ರದರ್ಶನದಂತಹ ಹೊಸ ಕ್ರಮಗಳನ್ನು ಕಂಡುಕೊಂಡಿದ್ದಾರೆ. ಈ ಉದ್ಯಮವು ತನ್ನ ಆದಾಯವನ್ನು ಹೆಚ್ಚಿಸುವ ಮೂಲಕ ಆಹಾರ ಮತ್ತು ಪಾನೀಯ (ಎಫ್ & ಬಿ) ವಿಭಾಗದಿಂದ ಆದಾಯವನ್ನು ವೃದ್ಧಿಸಿಕೊಳ್ಳುವ ಕೆಲಸ ಮಾಡುತ್ತಿದೆ.

English summary
FIFA World cup: INOX to screen live matches at its 22 multiplexes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X