Rajat Patidar: ಶಿವಂ ದುಬೆ ಬದಲಾಗಿ ಆರ್‌ಸಿಬಿ ಬ್ಯಾಟರ್ ಆಯ್ಕೆಯಾಗಬೇಕಿತ್ತು!
ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 119 ರನ್‌ಗಳಿಗೆ ಆಲೌಟ್ ಆಗಿದೆ. ಒಂದು ಹಂತದಲ್ಲಿ 160 ರನ್ ಗಳಿಸುವ ಉತ್ಸಾಹದಲ್ಲಿದ್ದ ಟೀಂ ಇಂಡಿಯಾ ದಿಢೀರ್ ಕುಸಿದು 119 ರನ್‌ಗಳಿಗೆ ಆಲೌಟ್ ಆಯಿತು.
ರಿಷಬ್ ಪಂತ್ 42 ರನ್, ಅಕ್ಷರ್ ಪಟೇಲ್ 20 ರನ್, ರೋಹಿತ್ ಶರ್ಮಾ 13 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಿವಂ ದುಬೆ 9 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದರು.

ಶಿವಂ ದುಬೆ ಔಟಾದ ರೀತಿಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ದುಬೆ ಬದಲಾಗಿ ಆರ್ ಸಿಬಿ ಬ್ಯಾಟರ್ ರಜತ್ ಪಟಿದಾರ್ ಭಾರತ ತಂಡಕ್ಕೆ ಆಯ್ಕೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿವಂ ದುಬೆ ಐಪಿಎಲ್ 2024ರ ಆರಂಭದ ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಅದರಲ್ಲೂ ಸ್ಪಿನ್ನರ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲು ಕಾರಣವಾಗಿತ್ತು.
ಶಿವಂ ದುಬೆಗಿಂತ ಪಟಿದಾರ್ ಬೆಸ್ಟ್
ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಬಳಿಕ ಶಿವಂ ದುಬೆ, ಸತತವಾಗಿ ವೈಫಲ್ಯ ಅನುಭವಿಸಿದರು. ಕ್ರಿಕೆಟ್ ತಜ್ಞರ ಪ್ರಕಾರ ಹೆಚ್ಚಾಗಿ ತಿರುಗುವ ಸ್ಪಿನ್ ಪಿಚ್‌ಗಳಲ್ಲಿ ಶಿವಂ ದುಬೆ ಪರಿಣಾಮಕಾರಿ ಬ್ಯಾಟರ್ ಅಲ್ಲ ಎಂದು ಅಭಿಪ್ರಾಯಪಟ್ಟರು. ದುಬೆ ನಿಂತಲ್ಲೇ ಆಡುವ ಆಟಗಾರ, ಆದರೆ ಪಟಿದಾರ್ ಕ್ರೀಸ್‌ನ ಬಳಸಿಕೊಂಡು ಬ್ಯಾಟಿಂಗ್ ಆಡುತ್ತಾರೆ. ಅದಕ್ಕೆ ಪಡಿದಾರ್ ಸ್ಪಿನ್ ಬೌಲರ್ ವಿರುದ್ಧ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಆಡಿದ್ದರು.
ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ನಲ್ಲಿ ಈ ಬಾರಿ ವಿಶ್ವಕಪ್ ನಡೆಯುತ್ತಿದ್ದು, ವೆಸ್ಟ್ ಇಂಡೀಸ್‌ನಲ್ಲಿ ಸ್ಪಿನ್ನರ್ ಗಳು ಮಾರಕವಾಗುತ್ತಾರೆ. ಅಂತಹ ಪಿಚ್‌ಗಳಲ್ಲಿ ದುಬೆಗಿಂತ ರಜತ್ ಪಟಿದಾರ್ ಪರಿಣಾಮಕಾರಿಯಾಗಿರುತ್ತಿದ್ದರು ಎನ್ನುವುದು ಅಭಿಮಾನಿಗಳ ವಾದವಾಗಿದೆ.
ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ವೈಫಲ್ಯವನ್ನು ಕೂಡ ಅಭಿಮಾನಿಗಳು ಖಂಡಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಶಿವಂ ದುಬೆ ಬದಲು ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಿಂಕು ಸಿಂಗ್ ಅವರಿಗಾದರೂ ಅವಕಾಶ ಕೊಡಿ ಎಂದು ಹೇಳಿದ್ದಾರೆ.












Click it and Unblock the Notifications