ಮಾಡಿದ ತಪ್ಪಿನಿಂದ ಪಾಠ ಕಲಿಯದ ಇಂಗ್ಲೆಂಡ್: ಕಾದಿದೆ ದೊಡ್ಡ ಶಿಕ್ಷೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ನಡೆದಿದೆ. ಈ ಪಂದ್ಯವನ್ನು ಗೆಲ್ಲು ಇಂಗ್ಲೆಂಡ್‌ಗೆ 371 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾ ನೀಡಿದೆ. ಬೆನ್ ಸ್ಟೋಕ್ಸ್ ಪಡೆ ಈ ಅಂಗಳದಲ್ಲಿ 4 ಬಾರಿ 300ಕ್ಕೂ ಹೆಚ್ಚು ರನ್‌ಗಳನ್ನು ಚೇಸ್ ಮಾಡಿದ ದಾಖಲೆ ಹೊಂದಿದೆ. ಈಗ ಮತ್ತೊಮ್ಮೆ ಈ ಸಾಧನೆಯನ್ನು ರಿಪೀಟ್ ಮಾಡುವ ಆಸೆ ಹೊಂದಿದೆ. ಆದರೆ ಸ್ಟೋಕ್ಸ್ ಪಡೆಗೆ ಆ ಒಂದು ಭಯ ಕಾದಿದೆ. ಮಾಡಿದ ತಪ್ಪನ್ನು ಸುಧಾರಿಸಿಕೊಳ್ಳುವಲ್ಲಿ ವಿಫಲವಾದ ಇಂಗ್ಲೆಂಡ್‌ಗೆ ಗಾಬರಿ ಆರಂಭವಾಗಿದೆ.
ಮಂಗಳವಾರ ರಾತ್ರಿಯ ವೇಳೆ ಐದನೇ ದಿನದಾಟ ಮುಗಿಯುವಷ್ಟರಲ್ಲಿ ಇಂಗ್ಲೆಂಡ್ ಸೋಲು ಗೆಲುವಿನ ಲೆಕ್ಕಾಚಾರಾದ ಪೂರ್ಣ ಚಿತ್ರ ಸಿಗುತ್ತದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಐಸಿಸಿ ದೊಡ್ಡ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಐಸಿಸಿ ಇಂಗ್ಲೆಂಡ್ ತಂಡದ ವಿರುದ್ಧ ಕ್ರಮ ಕೈಗೊಳ್ಳುವುದು ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಲರ್ ಟ್ರೋಫಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿದೆ. ಹೀಗಾಗಿ ಈ ವೇಳೆ ಪ್ರತಿ ಅಂಕವೂ ತಂಡಗಳಿಗೆ ಮಹತ್ವದಾಗಿದೆ. ಇಂಗ್ಲೆಂಡ್ ನಾಲ್ಕನೇ ದಿನದಾಟದ ವೇಳೆ ಸಮಯ ಊ ಮಾಡಿತ್ತು. ಈ ಬಗ್ಗೆ ಅಂಪೈರ್ ಸಹ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ಎಚ್ಚರಿಕೆಯನ್ನು ಸಹ ನೀಡಿದ್ದರು. ವಿಶೇಷ ಎಂದರೆ ಇದೇ ಪಂದ್ಯದ ವೇಳೆ ಸ್ಟೋಕ್ಸ್‌ಗೆ ಸಿಕ್ಕ ಎರಡನೇ ಎಚ್ಚರಿಕೆ ಇದಾಗಿದೆ. ಹೀಗಾಗಿ ಈ ಎಚ್ಚರಿಕೆ ತಂಡಕ್ಕೆ ಮಾರಕವಾಗಬಹುದಾಗಿದೆ.
ಇಂಗ್ಲೆಂಡ್‌ಗೆ ಕಾದಿದೆಯಾ ಶಿಕ್ಷೆಯ ಬಿಸಿ
ಇಂಗ್ಲೆಂಡ್ ಈ ಹಿಂದಿನಿಂದಲೂ ಇಂಗ್ಲೆಂಡ್ ಇದೇ ರೀತಿ ತಪ್ಪನ್ನು ಮಾಡಿ ಐಸಿಸಿ ಕೆಂಗಣ್ಣಿಗೆ ಗುರಿಯಾಗಿತ್ತು. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವೇಳೆ ಇಂಗ್ಲೆಂಡ್ ಫೀಲ್ಡಿಂಗ್ ಮಾಡುವ ವೇಳೆ ಸಮಯ ವ್ಯರ್ಥಮಾಡಿಯೇ 22 ಅಂಕಗಳನ್ನು ಕಳೆದುಕೊಂಡಿದ್ದು, ಇದು ಐಸಿಸಿ ವಿಧಿಸಿದ ದಂಡವಾಗಿದೆ. ಅಂದರೆ ಇಂಗ್ಲೆಂಡ್ ಸರಿ ಸುಮಾರು 2 ಪಂದ್ಯಗಳು ಗೆದ್ದ ಬಳಿಕ ನೀಡಬಹುದಾದ ಅಂಕವನ್ನು ಕಳೆದುಕೊಂಡಿದೆ. ಹೊಸ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಇಂಗ್ಲೆಂಡ್ ಮಾಡಿದ ತಪ್ಪನ್ನು ಮುಂದುವರೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಈಗ ಟೆಸ್ಟ್ ಸರಣಿಯನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿದೆ. ಈ ವೇಳೆ ಪ್ರತಿ ಪಂದ್ಯದ ಫಲಿತಾಂಶ ತಂಡಗಳಿಗೆ ಅಂಕ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಪ್ರತಿ ಪಂದ್ಯದ ಸೋಲು ಗೆಲುವು, ಅಂಕ ಪಟ್ಟಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಅಂಕ ಪಟ್ಟಿಯನ್ನು ತಂಡಗಳ ಶೇಕಡಾವಾರು ಗೆಲುವಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಟೀಮ್ ಇಂಡಿಯಾ ಈವರೆಗೂ ಇಂತಹ ಒಂದೇ ಒಂದು ತಪ್ಪನ್ನು ಸಹ ಮಾಡಿಲ್ಲ.












Click it and Unblock the Notifications