ಶಾಂತಿಯಿಂದ ಬದುಕಲು ಬಿಡಿ, ಇಲ್ಲದಿದ್ದರೆ...! ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ

ಪಾಕಿಸ್ತಾನ ತಾವು ನೆಮ್ಮದಿಯಿಂದ ಬದುಕಬೇಕು ಭಾರತವನ್ನು ಪದೇ ಪದೇ ಕೆಣಕಿದರೆ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಭಯೋತ್ಪಾದನೆಯನ್ನು ಭಾರತ ಸಹಿಸಲು ಸಾಧ್ಯವೇ ಇಲ್ಲ ಎಂದಿರುವ ಪ್ರಧಾನಿ ಮೋದಿ ಪಾಕಿಸ್ತಾನ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.

ಸೋಮವಾರ ಗುಜರಾತ್‌ನ ಭುಜ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಪಾಕಿಸ್ತಾನ ತಮ್ಮ ದೇಶದ ಸಾಧನೆ ಎಂದು ಪರಿಗಣಿಸುತ್ತಿದೆ ಆದರೆ ಭಯೋತ್ಪಾದನೆ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಹೇಳಿದರು.

end terrorism in pakistan narendra modi statement

ಭಾರತದ ಪ್ರವಾಸೋದ್ಯಮ ಆಧಾರಿತ ದೃಷ್ಟಿಕೋನವನ್ನು ಪಾಕಿಸ್ತಾನದ ಭಯೋತ್ಪಾದನಾ ಕೇಂದ್ರಿತ ಮನಸ್ಥಿತಿ ಎಂದಿರುವ ಅವರು, ಭಾರತ ಪ್ರವಾಸೋದ್ಯಮದಲ್ಲಿ ನಂಬಿಕೆ ಇಡುತ್ತದೆ. ಪ್ರವಾಸೋದ್ಯಮ ಜನರನ್ನು ಒಟ್ಟುಗೂಡಿಸುತ್ತದೆ. ಆದರೆ ಪಾಕಿಸ್ತಾನದಂತಹ ದೇಶವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮ ಎಂದು ಭಾವಿಸುತ್ತದೆ. ಇದು ಜಗತ್ತಿಗೆ ದೊಡ್ಡ ಬೆದರಿಕೆ ಎಂದು ಎಂದರು.

ಶಾಂತಿಯಿಂದ ಬದುಕಲು ಬಿಡಿ

ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿರುವ ಪ್ರಧಾನಿ ಮೋದಿ, ಒಂದೋ ಬದುಕಿ ಶಾಂತಿಯಿಂದ ಬದುಕಲು ಬಿಡಿ ಅಥವಾ ಭಾರತೀಯ ಗುಂಡುಗಳನ್ನು ಎದುರಿಸಿ ಎಂದಿದ್ದಾರೆ. ಶಾಂತಿಯಿಂದ ಬದುಕಿ, ನಿಮ್ಮ ರೊಟ್ಟಿಯನ್ನು ಸದ್ದಿಲ್ಲದೆ ತಿನ್ನಿರಿ, ಇಲ್ಲದಿದ್ದರೆ, ಭಾರತದ ಗುಂಡು ಯಾವಾಗಲೂ ಸಿದ್ಧವಾಗಿರುತ್ತದೆ ಎಂದಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಅವರು, ಇದು ಭಾರತದ ನೀತಿಯನ್ನು ಸ್ಪಷ್ಟಪಡಿಸಿದೆ. ನಮಗೆ ಹಾನಿ ಮಾಡುವ ಯಾರಿಗೇ ಆದರೂ ಅವರಿಗೆ ಇದೇ ರೀತಿಯ ಪ್ರತಿಕ್ರಿಯೆ ಸಿಗುತ್ತದೆ. ಯಾವುದೇ ಬೆಲೆ ಇಲ್ಲದೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಆಪರೇಷನ್ ಸಿಂದೂರ್ ಮಾನವೀಯತೆಯನ್ನು ಉಳಿಸುವ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಒಂದು ಧ್ಯೇಯವಾಗಿದೆ ಎಂದರು.

ಭಾರತವು ಮೇ 6-7 ರ ರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಾದ್ಯಂತ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಭಾರತೀಯ ವಾಯುಪಡೆಯು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಪ್ರಮುಖ ಕೇಂದ್ರಗಳ ಮೇಲೆ ದಾಳಿ ಮಾಡಿತು, ಇದರಲ್ಲಿ ಎರಡೂ ನಿಷೇಧಿತ ಸಂಘಟನೆಗಳ ಪ್ರಧಾನ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ.

ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ ಎಂದು ನೋಡಲು ನಾವು 15 ದಿನಗಳವರೆಗೆ ಕಾಯುತ್ತಿದ್ದೆವು, ಆದರೆ ಬಹುಶಃ ಭಯೋತ್ಪಾದನೆ ಅನ್ನದ ಮೂಲವಾಗಿದೆ. ಅವರು ಏನೂ ಮಾಡದಿದ್ದಾಗ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ಸ್ವಾತಂತ್ರ ನೀಡಿದ್ದೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+