ಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್ ಕ್ರಿಕೆಟ್ ಪಯಣ, ಸಾಧನೆ
ಮುಂಬೈ ಜೂನ್ 10: ಮಿಥಾಲಿ ರಾಜ್, ಮಹಿಳಾ ಕ್ರಿಕೆಟ್‌ನ ದಂತಕತೆ. ಪುರುಷರ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಯ ಸೂರ್ಯ ಅಂತಹ ಮಹಾನ್ ಕ್ರಿಕೆಟಿಗರಂತೆ 2 ದಶಕಗಳಿಗಿಂತಲೂ ಹೆಚ್ಚುಕಾಲ ಕ್ರಿಕೆಟ್ ಮೈದಾನದಲ್ಲಿ ಮೆರೆದಾಡಿದ ಕ್ರಿಕೆಟಿಗೆ. ಮಹಿಳಾ ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಭಾರತೀಯ ಲೆಜೆಂಡರಿ ಕ್ರಿಕೆಟರ್ ಬುಧವಾರ, ಜೂನ್ 8ರಂದು, ತಮ್ಮ 23 ವರ್ಷಗಳ ವೃತ್ತಿಬದುಕಿಗೆ ಅಂತ್ಯವಾಡಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಆಯ್ಕೆ ಮಾಡಿಕೊಳ್ಳಬೇಕೆಂಬ ಕೋಟ್ಯಾಂತರ ಬಾಲಕಿಯರಿಗೆ ಪ್ರೇರಣೆಯಾಗಿರುವ ಮಿಥಾಲಿ ತಮ್ಮ 39ನೇ ವಯಸ್ಸಿನಲ್ಲಿ ಟ್ವಿಟರ್ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಅಭಿಮಾನಿಗಳು ಇತ್ತ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಟಿ20 ಮತ್ತು ಏಕದಿನ ತಂಡದ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದರೆ ಇತ್ತ, ಮಿಥಾಲಿ ನಿವೃತ್ತಿ ಘೋಷಣೆ ಮಾಡಿದ್ದರು.
ನಕ್ಸಲರಿಂದ ತಂದೆ ಹತ್ಯೆ, ಸ್ಕಾಲರ್‌ಶಿಪ್‌ನಲ್ಲಿ ಓದು, ಈಗ ನ್ಯಾಷನಲ್ ರೆಕಾರ್ಡ್ ಬ್ರೇಕರ್
ಟ್ವಿಟರ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು " ಪ್ರತಿಯೊಬ್ಬ ಆಟಗಾರರಿಗೆ ತಮ್ಮ ದೇಶವನ್ನು ಪ್ರತಿನಿಧಿಸುವುದು ಅತ್ಯಂತ ದೊಡ್ಡ ಗೌರವವಾಗಿದೆ. ನಾನು ತುಂಬಾ ಚಿಕ್ಕ ವಯಸ್ಸಿನಲ್ಲೇ ಭಾರತ ಜರ್ಸಿಯನ್ನು ತೊಟ್ಟು ನನ್ನ ಪಯಣ ಆರಂಭಿಸಿದೆ. ಈ ಪಯಣದಲ್ಲಿ ತುಂಬಾ ಏರಿಳಿತಗಳು ಕಂಡಿದ್ದೇನೆ. ಕಳೆದ 23 ವರ್ಷಗಳಿಂದ ಪ್ರತಿಯೊಂದು ಈವೆಂಟ್ ಕೂಡ ನನಗೆ ವಿಶೇಷವಾದದ್ದನ್ನು ಕಲಿಸಿದೆ ಮತ್ತು ಈ ವರ್ಷಗಳು ನನ್ನ ಜೀವನದ ಅತ್ಯಂತ ತೃಪ್ತಿಕರ, ಸವಾಲಿನ ಮತ್ತು ಆನಂದದಾಯಕ ವರ್ಷಗಳಾಗಿದ್ದವು. ಎಲ್ಲ ಪಯಣಗಳಂತೆ ನನ್ನ ಈ ಪಯಣವೂ ಕೊನೆಯಾಗುತ್ತಿದೆ. ಈ ದಿನ ನಾನು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ" ಎಂದು ತಿಳಿಸಿದ್ದರು.
ಮಿಥಾಲಿ ರಾಜ್, ಭಾರತೀಯ ಕ್ರಿಕೆಟ್‌ನ ದಂತಕತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ನಾಯಕಿಯಾಗಿ ಮುನ್ನಡೆಸಿದ್ದಾರೆ. ದೇಶದ ಮಹಿಳಾ ಕ್ರಿಕೆಟ್ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಇವರ ಪಾತ್ರ ಅಮೋಘಯವಾಗಿದೆ. ಇಂದು ಈ ಎರಡು ದಶಗಳ ಕ್ರಿಕೆಟ್ ಪಯಣದಲ್ಲಿ ದೇಶ ಮತ್ತು ವಿಶ್ವಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ಮಿಥಾಲಿ ಪ್ರಮುಖ ಪಾತ್ರವಹಿಸಿದ್ದಾರೆ.
ರಾಜ್ ಡಿಸೆಂಬರ್ 3, 1982ರಲ್ಲಿ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ತಮಿಳು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ದೊರೈ ರಾಜ್ ಭಾರತೀಯ ನೌಕಾಪಡೆಯಲ್ಲಿ ಏರ್‌ಮ್ಯಾನ್ ಆಗಿದ್ದರು. ಹೈದರಾಬಾದ್‌ನಲ್ಲಿ ವಾಸವಿದ್ದ ಮಿಥಾಲಿ, ಕೇವಲ 10ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಶುರುಮಾಡಿದ್ದರು. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದ ಅವರು, ಶಾಲಾ ದಿನಗಳಲ್ಲಿ ತಮ್ಮ ಹಿರಿಯ ಸಹೋದರನ ಜೊತೆಗೆ ಕ್ರಿಕೆಟ್ ಕೋಚಿಂಗ್ ಪಡೆಯಲು ಶುರು ಮಾಡಿದ್ದರು.

1999ರಲ್ಲಿ ಪದಾರ್ಪಣೆ
ಭಾರತ ಮಹಿಳಾ ಕ್ರಿಕೆಟ್‌ನ ಮೂರು ದಶಕಗಳ ಕಾಲ ಆಡಿದ ಮಿಥಾಲಿ ರಾಜ್ ತಮ್ಮ 14ನೇ ವಯಸ್ಸಿನಲ್ಲೇ ಭಾರತ ತಂಡದಲ್ಲಿ ಅವಕಾಶ ಪಡೆದರಾದರೂ,1999 ಜೂನ್ 26ರಂದು ಐರ್ಲೆಂಡ್ ಮಹಿಳಾ ತಂಡದ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಅದೇ ಪಂದ್ಯದಲ್ಲಿ 112 ರನ್‌ಗಳಿಸಿ ಕಿರಿಯ ವಯಸ್ಸಿಗೆ ಶತಕ ಸಿಡಿಸಿದ ಮಹಿಳಾ ಕ್ರಿಕೆಟರ್ ಎಂಬ ದಾಖಲೆಗೆ ಪಾತ್ರರಾದರು. ಈ ವಿಶ್ವ ದಾಖಲೆಯನ್ನು ಇದುವರೆಗೂ ಮಹಿಳಾ ಕ್ರಿಕೆಟ್ ಅಥವಾ ಪುರುಷ್ ಕ್ರಿಕೆಟ್‌ನಲ್ಲಿ ಯಾರೊಬ್ಬರು ಬ್ರೇಕ್ ಮಾಡಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ
ಮಿಥಾಲಿ ರಾಜ್ ತಮ್ಮ 19ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಟಾಂಟನ್‌ನಲ್ಲಿ 214 ರನ್‌ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಅವರು ಆಸ್ಟ್ರೇಲಿಯಾದ ಕೇರನ್ ರಾಲ್ಟನ್ ಅವರನ್ನು ಹಿಂದಿಕ್ಕಿ ಈ ಗರಿಷ್ಠ ವೈಕ್ತಿಕ ರನ್‌ಗಳಿಸಿದ ವಿಶ್ವ ದಾಖಲೆ ಬರೆದಿದ್ದರು. 2004ರಲ್ಲಿ ಪಾಕಿಸ್ತಾನದ ಕಿರನ್ ಬಲುಚ್ ವೆಸ್ಟ್ ಇಂಡೀಸ್ ವಿರುದ್ಧ 242 ರನ್‌ಗಳಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದರು.

ಮಿಥಾಲಿ ರಾಜ್ ನಾಯಕತ್ವ
ಭಾರತ ಮಹಿಳಾ ತಂಡ ಮೊದಲ ಬಾರಿಗೆ ಮಿಥಾಲಿ ರಾಜ್ ನಾಯಕತ್ವದಲ್ಲಿ 2005ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2006ರಲ್ಲಿ ಅವರದೇ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಮತ್ತು ಏಷ್ಯಾಕಪ್ ಜಯಿಸಿತ್ತು. ಮಿಥಾಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ನಾಯಕಿಯಾಗಿದ್ದಾರೆ. 2019ರಲ್ಲಿ ಏಕದಿನ ವಿಶ್ವಕಪ್ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಟಿ20 ಕ್ರಿಕೆಟ್‌ಗೆ ನಿವೃತ್ತಿಯಾಗಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್
ಮಿಥಾಲಿ ರಾಜ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಆಗಿದ್ದಾರೆ. ವೃತ್ತಿ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ 50.68ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಿಥಾಲಿ 7 ಶತಕ ಮತ್ತು 64 ಅರ್ಧಶತಕಗಳ ಸಹಿತ 7805 ರನ್‌ಗಳಿಸಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 12 ಪಂದ್ಯಗಳಲ್ಲಿ 43.68ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಿಥಾಲಿ, 1 ಶತಕ 4 ಅರ್ಧಶತಕ ಸಹಿತ 699 ರನ್ ಕಲೆಹಾಕಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 89 ಪಂದ್ಯಗಳಲ್ಲಿ ಅಜೇಯ 97ರನ್‌ಗಳ ವೈಯಕ್ತಿಕ ಗರಿಷ್ಠ ಸೇರಿದಂತೆ 2,364 ರನ್ ಸಿಡಿಸಿದ್ದಾರೆ.

ಹೆಚ್ಚು ಅಂತಾರಾಷ್ಟ್ರಿಯ ರನ್
ಒಟ್ಟಾರೆ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿ ಸೇರಿ ಮಿಥಾಲಿ ರಾಜ್ 10,000ಕ್ಕೂ ಹೆಚ್ಚು ರನ್‌ಗಳಿಸಿರುವ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ. 10,868 ರನ್‌ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಚಾರ್ಲೊಟ್ ಎಡ್ವರ್ಡ್ಸ್(10,273) ಇದ್ದಾರೆ.

ಪ್ರಶಸ್ತಿ ಮತ್ತು ಗೌರವ
ಭಾರತ ಮಹಿಳಾ ಕ್ರಿಕೆಟ್‌ಗೆ ಸಲ್ಲಿಸಿರುವ ಅನನ್ಯ ಕೊಡುಗೆಗಾಗಿ ಮಿಥಾಲಿ ರಾಜ್‌ಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಭಾರತ ಸರಕಾರದಿಂದ ಪದ್ಮಶ್ರಿ ಪ್ರಶಸ್ತಿ, 2017ರಲ್ಲಿ ಬಿಬಿಸಿ 100 ಮಹಿಳೆಯರ ಸಾಲ್ಲಿ ಸ್ಥಾನ, 2017ರಲ್ಲಿ ವಿಶ್ವದ ಮುಂಚೂಣಿ ಮಹಿಳಾ ಕ್ರಿಕೆಟರ್, 2021ರಲ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications