Get Updates
Get notified of breaking news, exclusive insights, and must-see stories!

ಫ್ಯಾನ್ಸ್‌ಗೆ ಹಣ ಕೊಟ್ಟು ಹರಾಜಿನಲ್ಲಿ ಕೂರಿಸಿದ್ರು ನಿಮಗಿಂತ ಒಳ್ಳೆ ತಂಡ ಕಟ್ತಾರೆ: ಆರ್‌ಸಿಬಿ ವಿರುದ್ಧ ದೊಡ್ಡ ಗಣೇಶ್ ಕಿಡಿ

2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡದ ಮಾಡಿಕೊಂಡ ಎಡವಟ್ಟಿಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೌಲಿಂಗ್ ಪಡೆ ಬಲಿಷ್ಠವಾಗಿಸಿಕೊಳ್ಳಬೇಕಿದ್ದ ತಂಡ ಮತ್ತೆ ಎಡವಿದೆ. ವನಿಂದು ಹಸರಂಗ ಅವರನ್ನು ಕೈಬಿಟ್ಟ ಬಳಿಕ ತಂಡದಲ್ಲಿ ಉತ್ತಮ ಸ್ಪಿನ್ನರ್ ಕೊರತೆ ಎದುರಾಗಿದೆ.

ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಕರ್ನಾಟಕದ ಸ್ಪಿನ್ನರ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್‌ರನ್ನು ಕೂಡ ಆರ್ ಸಿಬಿ ಖರೀದಿ ಮಾಡದೇ ಇರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕರ್ನಾಟಕದ ಆಟಗಾರರ ಬಗ್ಗೆ ಆರ್‌ಸಿಬಿ ನಿರ್ಲಕ್ಷ್ಯ ಮುಂದುವರೆದಿದೆ.

Dodda Ganesh Expresses Dissatisfaction with RCBs IPL Auction Strategy

ಇದನ್ನೆಲ್ಲಾ ಕಂಡ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಕೂಡ ಆರ್‌ಸಿಬಿ ಉತ್ತಮ ಬೌಲರ್ ಗಳನ್ನು ಆಯ್ಕೆ ಮಾಡುವಲ್ಲಿ ಎಡವಿದೆ ಎಂದು ಹೇಳಿದ್ದಾರೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರಿಗೆ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡಿಲ್ಲ ಎಂದಿದ್ದಾರೆ.

ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ವನಿಂದು ಹಸರಂಗ ಅವರಂತಹ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಉತ್ತಮ ವೇಗಿ ಮತ್ತು ಸ್ಪಿನ್ನರ್ ತಂಡಕ್ಕೆ ಬರಬೇಕಿತ್ತು, ಆದರೆ ಈಗ ಆರ್‌ಸಿಬಿ ತಂಡದಲ್ಲಿ ಸ್ಪಿನ್ನರ್ ಕೊರತೆ ಇದೆ ಎಂದಿದ್ದಾರೆ.

ಅಭಿಮಾನಿಗಳನ್ನು ಹರಾಜಿಗೆ ಬಿಡಿ

ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮತ್ತು ಭಾರತ ತಂಡದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಮ್ಯಾನೇಜ್‌ಮೆಂಟ್‌ಗಿಂತ ಅಭಿಮಾನಿಗಳೇ ಉತ್ತಮ ತಂಡ ಕಟ್ಟುತ್ತಾರೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, "ಆರ್‌ಸಿಬಿ ಅಭಿಮಾನಿಗಳಿಗೆ ಪರ್ಸ್‌ನಿಂದ ಅರ್ಧದಷ್ಟು ಹಣವನ್ನು ಕೊಟ್ಟು ಹರಾಜು ಟೇಬಲ್‌ನಲ್ಲಿ ಅವರನ್ನು ಬಿಡಿ. ನಿಮಗೆ ಸವಾಲು ಹಾಕುತ್ತೇನೆ, ನಮ್ಮ ಅಭಿಮಾನಿಗಳು ಎಲ್ಲಾ ಪರಿಸ್ಥಿತಿಗಳಿಗೆ ಹೆಚ್ಚು ಸಮತೋಲಿತ ತಂಡವನ್ನು ಆಯ್ಕೆ ಮಾಡುತ್ತಾರೆ ಮತ್ತು ಪರ್ಸ್‌ನಲ್ಲಿ ಸ್ವಲ್ಪ ಹಣವನ್ನು ಕೂಡ ಉಳಿಸಿಕೊಡುತ್ತಾರೆ. ಇಂತಹ ತಂಡವು ಅಂತಹ ಪ್ರಾಥಮಿಕ ತಪ್ಪುಗಳನ್ನು ಮಾಡಬಹುದು ಎಂದು ನಂಬಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಯಶ್ ದಯಾಳ್ ಬಗ್ಗೆ ಹೇಳಿದ್ದೇನು?

ಯಾವುದೇ ಬೌಲರ್ ಕೆಟ್ಟ ದಿನವನ್ನು ಹೊಂದಬಹುದು. ಯಶ್ ದಯಾಳ್ ಅವರಿಗೂ ಒಂದು ಕೆಟ್ಟ ಓವರ್ ಇತ್ತು. ಅವರು ಇನ್ನೂ ಉತ್ತಮ ಬೌಲರ್ ಆಗಿದ್ದಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಆತನಿಗೆ 5 ಕೋಟಿ ಖರ್ಚು ಮಾಡಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಆರ್‌ಸಿಬಿ ಅಲ್ಜಾರಿ ಜೋಸೆಫ್‌ಗೆ 11.5 ಕೋಟಿ ಏಕೆ ಪಾವತಿಸುತ್ತದೆ ಭಾರತೀಯ ಬೌಲರ್ ಹರ್ಷಲ್ ಪಟೇಲ್ ಅವರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

Dodda Ganesh criticizes RCB's IPL auction strategy, suggesting fans could make better choices; proposes giving them a stake in team decisions and purse management for a more balanced and cost-effective selection.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+