ಐಸಿಸಿ ವಿಶ್ವಕಪ್: ಶ್ರೀಲಂಕಾ ಸೋಲಿಗೆ ಹೊರಗಿನವರ ಪಿತೂರಿಯೇ ಕಾರಣವಂತೆ! ಭಾರತದ ವಿರುದ್ಧ ಪರೋಕ್ಷವಾಗಿ ವಿಷ ಕಾರಿದ ಲಂಕಾ ಮಾಜಿ ಆಟಗಾರ

ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಅದ್ರಲ್ಲೂ ಭಾರತ ತಂಡ ಅಬ್ಬರಿಸಿದ್ದು ಹಲವು ದೇಶಗಳಿಗೆ ಖುಷಿಯನ್ನ ಕೊಟ್ಟಿದ್ದರೆ, ಕೆಲವು ದೇಶಗಳಿಗೆ ಹೊಟ್ಟೆ ಉರಿ ತಂದಿದೆ. ಈ ಪೈಕಿ ಶ್ರೀಲಂಕಾ ಇದೆಯಲ್ಲ, ಇವರಿಗೆ ಭಾರತ ಕ್ರಿಕೆಟ್ ತಂಡದ ವಿರುದ್ಧ ಸಿಕ್ಕಾಪಟ್ಟೆ ಹೊಟ್ಟೆ ಉರಿ ಇರುವಂತೆ ಕಾಣ್ತಿದೆ. ಹೀನಾಯವಾಗಿ ಸೋತು ಮನೆಗೆ ಹೋದರೂ, ಭಾರತದ ಬಗ್ಗೆ ಆರೋಪ ಮಾಡುವುದನ್ನು ನಿಲ್ಲಿಸಿಲ್ಲ ಶ್ರೀಲಂಕಾ.

ವಿಶ್ವಕಪ್ ಕ್ರಿಕೆಟ್ 2023 ಶುರುವಾಗುವುದಕ್ಕೂ ಮೊದಲು ಶ್ರೀಲಂಕಾ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿತ್ತು. ಆದ್ರೆ ನೋಡ ನೋಡುತ್ತಲೇ, ಶ್ರೀಲಂಕಾ ತಂಡ ಹೀನಾಯವಾಗಿ ಪ್ರದರ್ಶನ ನೀಡಿ ಕುಸಿದು ಬಿತ್ತು. ಅದ್ರಲ್ಲೂ ಭಾರತದ ವಿರುದ್ಧ ಸೋತು ಹೋದ ಪಂದ್ಯ ಇಡೀ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಗಳ ಪೈಕಿ ಒಂದು ಎಂಬ ಕುಖ್ಯಾತಿ ಪಡೆದಿದೆ. ಇಷ್ಟೆಲ್ಲಾ ಪೆಟ್ಟನ್ನು ತಿಂದು ಮನೆಗೆ ಹೋಗಿರುವ ಲಂಕನ್ನರು ಮಾತ್ರ ಭಾರತದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ!

sri-lankan-chief-selector

ವಿಷ ಕಾರಿದ ಮಾಜಿ ಆಟಗಾರ?

ಹೌದು ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನ ನೀಡುತ್ತಾ ಟೂರ್ನಿಯಿಂದ ಹೊರಗೆ ಬಿದ್ದಿರುವ ಶ್ರೀಲಂಕಾ ತಂಡ ತವರಿಗೆ ಮರಳಿದೆ. ಅದರಲ್ಲೂ, ನಿನ್ನೆಯೂ ಸೋಲಿನ ಆಘಾತ ಎದುರಿಸಿ ಮನೆಗೆ ಹೋಗಿದೆ. ಹೀಗಿದ್ದಾಗ ಲಂಕಾ ಹೀನಾಯ ಪ್ರದರ್ಶನಕ್ಕೆ, ತಂಡದ ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ ಏನ್ ಹೇಳಿದ್ದಾರೆ ಗೊತ್ತಾ? ಪ್ರಮೋದಯ ವಿಕ್ರಮಸಿಂಘೆ ತಮ್ಮ ಆರೋಪದ ಮೂಲಕ ಭಾರತದ ವಿರುದ್ಧ ಪರೋಕ್ಷವಾಗಿ ವಿಷವನ್ನು ಕಾರಿದ್ದು ಹೇಗೆ ಗೊತ್ತಾ?

ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗ...

ಶ್ರೀಲಂಕಾ ತಂಡದ ಕ್ರಿಕೆಟ್‌ಗೆ ದೊಡ್ಡ ಇತಿಹಾಸ ಇದೆ. ಅದರಲ್ಲೂ ಘಟಾನುಘಟಿ ದೇಶಗಳನ್ನೇ ಲಂಕಾ ಟೀಂ ಸೋಲಿಸಿ ನೀರು ಕುಡಿಸಿದ ಇತಿಹಾಸವೂ ಇದೆ. ಆದರೂ ಇಂಥ ತಂಡ ಈಗ ಇಷ್ಟು ಹೀನಾಯ ಪ್ರದರ್ಶನ ನೀಡಿದೆ. 1996ರಲ್ಲಿ, ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದ್ದ ಶ್ರೀಲಂಕಾ 2023ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ನಿನ್ನೆ ಪಂದ್ಯದಲ್ಲೂ ಟಾಸ್ ಸೋತು & ಪಂದ್ಯವನ್ನೂ ಸೋತು ಮನೆಗೆ ಹೋಗಿದೆ. ಹೀಗಿದ್ದಾಗಲೇ ಶ್ರೀಲಂಕಾ ತಂಡದ ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ, ಲಂಕಾ ಸೋಲಿಗೆ 'ಬಾಹ್ಯ ಪಿತೂರಿ'ಯೇ ಕಾರಣ ಎಂದು ದೂರಿದ್ದಾರೆ.

sri-lankan-chief-selector

2 ದಿನ ಸಮಯ ಕೊಡಿ ಅಂತಿದ್ದಾರೆ!

ಹಾಗೇ ತನ್ನ ಮಾತನ್ನು ಮುಂದುವರಿಸಿರುವ ಪ್ರಮೋದಯ ವಿಕ್ರಮಸಿಂಘೆ, ನನಗೆ 2 ದಿನದ ಸಮಯ ಕೊಡಿ ಎಲ್ಲವನ್ನ ಬಹಿರಂಗಪಡಿಸುತ್ತೇನೆ. ಇದು ಹೊರಗಿನ ಪಿತೂರಿಯ ಫಲಿತಾಂಶ ಆಗಿದೆ. ಇದು ದುಃಖದ ವಿಚಾರ ಹಾಗೂ ನಾನೇ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಹೊರತ್ತೇನೆ ಅಂತಾ ಹೇಳಿದ್ದಾರೆ. ಆದ್ರೆ ಹಿಂಗೆ ಬಾಯಿಗೆ ಬಂದಂತೆ ಲಂಕಾ ತಂಡದ ಮಾಜಿ ಆಟಗಾರ ಕಂ ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಮಾತನಾಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಈಗ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಇದನ್ನೆಲ್ಲಾ ನೋಡುತ್ತಿದ್ದರೆ ಶ್ರೀಲಂಕಾ ತಂಡ ಹೀನಾಯವಾಗಿ ಸೋತು, ಸೋತು ನೆಮ್ಮದಿ ಕಳೆದುಕೊಂಡಂತೆ ಕಾಣುತ್ತಿದೆ. ಹೀಗಾಗಿಯೇ ತನ್ನ ಸೋಲಿನ ಹೊಣೆಯನ್ನು ಬೇರೆಯವರ ಮೇಲೆ ಹಾಕಲು ಯತ್ನಿಸುತ್ತಿದೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಇಂತಹ ಆರೋಪಗಳಿಗೆ ಬೆಲೆ ಇರುವುದಿಲ್ಲ, ಬರೀ ಸಾಕ್ಷಿಗೆ ಮಾತ್ರ ಬೆಲೆ. ಇದೇ ಕಾರಣಕ್ಕೆ ಶ್ರೀಲಂಕಾ ಆಯ್ಕೆಗಾರನ ಮಾತಿನ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಭಾರತೀಯ ಅಭಿಮಾನಿಗಳು ಹಾಗೂ ಜಗತ್ತಿನ ಹಲವು ದೇಶಗಳ ಕ್ರಿಕೆಟ್ ಫ್ಯಾನ್ಸ್ ಈ ಮಾತನ್ನ ಖಂಡಿಸುತ್ತಿದ್ದಾರೆ. ಆದ್ರೆ ಇದೆಲ್ಲಾ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+