1,000 ಕೋಟಿ ಒಡೆಯ ಸಚಿನ್, ಧೋನಿ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಎಂಟ್ರಿ... India vs Pakistan
1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗಿದ್ದರೆ, ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ದೇವರು ಅಂತಾ ಕರೆಸಿಕೊಂಡಿದ್ದರು. ವಿರಾಟ್ ಕೊಹ್ಲಿ & ಸಚಿನ್ ತೆಂಡೂಲ್ಕರ್ ಅವರ ಆಸ್ತಿ ಲೆಕ್ಕ ನೋಡಿದರೆ ಇಬ್ಬರದ್ದೂ ಹತ್ತಿರ ಹತ್ತಿರ ಸಮನಾದ ಆಸ್ತಿ ಇದೆ. ಇಂತಹ ಸಮಯದಲ್ಲೇ ಭಾರತ & ಪಾಕಿಸ್ತಾನ ನಡುವೆ ಘೋರ ಯುದ್ಧ ಕೂಡ ಆರಂಭವಾಗಿ, ಭಾರತ ಮಾತೆಯ ವೀರ ಯೋಧರು ತಮ್ಮ ಪ್ರಾಣ ಲೆಕ್ಕಿಸದೆ ಹೋರಾಟವನ್ನ ನಡೆಸುತ್ತಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ಒಡೆಯ ಸಚಿನ್, ಧೋನಿ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಎಂಟ್ರಿ...
1,000 ಕೋಟಿ ಅನ್ನೋದಕ್ಕೆ ಕ್ರಿಕೆಟ್ ಅಖಾಡದಲ್ಲಿ ಲೆಕ್ಕನೇ ಇಲ್ಲ ಎನ್ನಬಹುದು, ಯಾಕಂದ್ರೆ ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರ ಕೂಡ ಕೋಟಿ ಕೋಟಿ ರೂಪಾಯಿ ಬಹುಮಾನದ ರೂಪದಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಹಾಗೇ ಜಾಹೀರಾತು ಮೂಲಕ ಕೂಡ ಹಣದ ಹೊಳೆಯೇ ಹರಿಯುತ್ತದೆ. ಹೀಗಿದ್ದರೂ ಭಾರತೀಯ ಸೇನೆಯಲ್ಲಿ ವಿಶೇಷ ಸ್ಥಾನಮಾನವನ್ನ ಪಡೆದಿದ್ದಾರೆ ಭಾರತೀಯ ಕ್ರಿಕೆಟ್ ಆಟಗಾರರು. ಇದೀಗ ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಶುರು ಮಾಡಿರುವ ಬೆನ್ನಲ್ಲೇ ಅವರೆಲ್ಲಾ ಯುದ್ಧಕ್ಕೆ ಎಂಟ್ರಿ ಕೊಡುತ್ತಾರೆ ಅಂತಾ...

ಸಚಿನ್ & ಧೋನಿ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ...
ಹೌದು, ಭಾರತ ಕ್ರಿಕೆಟ್‌ಗೆ 100 ವರ್ಷ ಮೀರಿದ ಇತಿಹಾಸ ಇದೆ. ಆಂಗ್ಲರನ್ನು ಸೋಲಿಸಿ & ನಮ್ಮ ಶಕ್ತಿ ತೋರಿಸಿದ ಉದಾಹರಣೆ ಇತಿಹಾಸದಲ್ಲೂ ಇವೆ. ಹೀಗಿದ್ದಾಗ ಭಾರತೀಯ ಕ್ರಿಕೆಟ್ ಆಟಗಾರರು ಬಹುದೊಡ್ಡ ಸಾಧನೆಯನ್ನೂ ಮಾಡಿದ್ದಾರೆ. ಇಂತಿಪ್ಪ ಕ್ರಿಕೆಟ್ ಆಟಗಾರರು ನಮ್ಮ ಸೇನೆ ಅಂದ್ರೆ ಭಾರತೀಯ ಸೇನೆಯಲ್ಲೂ ಉತ್ತಮ ಸ್ಥಾನಮಾನ ಪಡೆದಿದ್ದಾರೆ. ಈ ಪೈಕಿ ಈಗ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಲೆಜೆಂಡ್ ಕಪಿಲ್ ದೇವ್ ಅವರು ಕೂಡ ಭಾರತೀಯ ಸೇನೆಯಲ್ಲಿ ಸ್ಥಾನ ಪಡೆದಿದ್ದಾರೆ. ಅವರೆಲ್ಲಾ ಇದೀಗ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಬರ್ತಾರಾ?
ಗಡಿಯಲ್ಲಿ ಕ್ರಿಕೆಟ್ ಆಟಗಾರರ ಯುದ್ಧ?
ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಅವ್ರು ಭಾರತೀಯ ಸೇನೆಯಲ್ಲಿ ಇರುವುದರಿಂದ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಕೂಡ ಜೋರಾಗಿದೆ. ಆದರೆ, ಇದಕ್ಕೆ ಉತ್ತರ ಏನಂದ್ರೆ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆ ಸೇವೆಯಲ್ಲಿ ಇದ್ದಾರೆ ನಿಜ, ಆದ್ರೆ ಭಾರತೀಯ ಕ್ರಿಕೆಟಿಗರು ಪ್ರಾದೇಶಿಕ ಸೇನೆ ಭಾಗವಾಗಿದ್ದಾರೆ ಎನ್ನಬಹುದು.
ಇದರ ಅರ್ಥ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆಯಲ್ಲಿ ಇರುವುದು ಸ್ವಯಂ ಸೇವಕ ನಾಗರಿಕರಿಗೆ ತರಬೇತಿ ನೀಡಲು ಮತ್ತು ತುರ್ತು ಪರಿಸ್ಥಿತಿಗೆ ಅವರನ್ನ ಸಿದ್ಧರಾಗುವಂತೆ ಮಾಡಲು. ಹೀಗಾಗಿ ಕ್ರಿಕೆಟ್ ಆಟಗಾರರು ಸೇನೆಯಲ್ಲಿ ಇದ್ದರೂ ಗಡಿಗೆ ಬಂದು ಯುದ್ಧ ಮಾಡುವ ಅನಿವಾರ್ಯತೆ ಇರುವುದಿಲ್ಲ ಎನ್ನಲಾಗಿದೆ. ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೇ ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಭಾರತೀಯ ಸೇನೆಯಲ್ಲಿ ಸ್ಥಾನ ಪಡೆದಿದ್ದರು.












Click it and Unblock the Notifications