Ind VS Aus: ಮಳೆ ಭಯದಲ್ಲಿ ಆಸ್ಟ್ರೇಲಿಯಾ vs ಭಾರತ ಪಂದ್ಯ!
ಭಾರತದ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ 208 ರನ್ ಗಳಿಸಿದ್ದರೂ ಗೆಲ್ಲಲು ಆಗಲಿಲ್ಲ ಆಸ್ಟ್ರೇಲಿಯಾ ತಂಡ. ಹೀಗಾಗಿ 2ನೇ ಟಿ20 ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸ್ತಿದೆ ಆಸಿಸ್ ತಂಡ. ಭಾರತ ಕೂಡ ಆಸ್ಟ್ರೇಲಿಯಾಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಹೀಗೆ ಇಷ್ಟೆಲ್ಲಾ ತಯಾರಿ ನಡುವೆ ಮಳೆ ಮಾತ್ರ ಭಯ ಹುಟ್ಟಿಸುತ್ತಿದೆ. ಹಾಗಾದರೆ ಇಂದಿನ ಪಂದ್ಯ ಮಳೆಗೆ ಬಲಿಯಾಗಿ ಹೋಗುತ್ತಾ? ಬನ್ನಿ ತಿಳಿಯೋಣ.
ಅಂದಹಾಗೆ ಆಸ್ಟ್ರೇಲಿಯಾದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ, 209 ರನ್ ರೋಚಕ ಚೇಸ್‌ನಲ್ಲಿ ಜಯ ದಾಖಲಿಸಿತ್ತು. ಈಗ 2ನೇ ಟಿ20 ಮ್ಯಾಚ್ ತಿರುವನಂತಪುರಂನಲ್ಲಿ ನಡೆಯಲಿದ್ದು, ಎರಡೂ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿವೆ. ಆದ್ರೆ ಈ ತಯಾರಿ ಮಧ್ಯೆ ಮಳೆ ಕಾಟ ತಲೆನೋವು ತರಿಸಿದೆ. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರಿ ಮಳೆಯಾಗಿ ದಕ್ಷಿಣ ಭಾರತಕ್ಕೆ ಮಳೆರಾಯನ ಸಿಂಚನವಾಗಿದೆ. ಆದರೆ ಇದು ಮ್ಯಾಚ್‌ಗು ದೊಡ್ಡ ಅಡ್ಡಿ ಉಂಟುಮಾಡುವ ಆಂತಕ ಹುಟ್ಟಿಸಿದೆ.

ಮಳೆಯಲ್ಲೂ ಸಾಗಿದೆ ಭರ್ಜರಿ ತಯಾರಿ!
ಒಟ್ಟು 5 ಟಿ20 ಪಂದ್ಯಗಳ ಸರಣಿ ಪೈಕಿ ಆಸ್ಟ್ರೇಲಿಯಾದ ವಿರುದ್ಧ ಈಗಾಗಲೇ ಭಾರತ ಮೊದಲ ಪಂದ್ಯ ಗೆದ್ದಿದೆ. 2ನೇ ಪಂದ್ಯಕ್ಕೆ ಕ್ಷಣಗಣನೆ ಜೊತೆಗೆ ಮಳೆ ಆತಂಕ ಕೂಡ ಆವರಿಸಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದ್ದು, ಅಕಸ್ಮಾತ್ ಮಳೆ ಒಂದಷ್ಟು ಬ್ರೇಕ್‌ನ ಕೊಟ್ಟರೂ ಪಂದ್ಯ ಶುರು ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಿರುವನಂತಪುರಂ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಇನ್ನ ಮೊದಲನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆದಿತ್ತು. ಆದ್ರೆ ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಸಿಕ್ಕಿರಲಿಲ್ಲ.
ಏನು ಹೇಳುತ್ತೆ ಹವಾಮಾನ ಮುನ್ಸೂಚನೆ?
ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಕೇರಳದ ತಿರುವನಂತಪುರಂನಲ್ಲಿ ಶೇ. 55ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುವ 2 ದಿನಗಳ ಹಿಂದೆ ಮಳೆಯಾಗಿದೆ ಹೀಗಿದ್ದಾಗ ಪಂದ್ಯ ನಡೆಯುವ ದಿನ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಆದ್ರೂ ಪಂದ್ಯಕ್ಕಾಗಿ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಈ ಮೂಲಕ, ಭಾರತ 5 ಟಿ20 ಪಂದ್ಯಗಳ ಸರಣಿಯಲ್ಲಿ ತನ್ನ ಗೆಲುವಿನ ಅಂತರವನ್ನು 2-0ಗೆ ಹೆಚ್ಚಿಸಿಕೊಳ್ಳಲು ಸಜ್ಜಾಗಿದೆ.
ಆಸ್ಟ್ರೇಲಿಯಾಗೆ ದೊಡ್ಡ ಸವಾಲು!
ಭಾರತದ ವಿರುದ್ಧ ಮೊದಲ ಪಂದ್ಯದಲ್ಲಿ 208 ರನ್ ಗಳಿಸಿದರೂ ಗೆಲ್ಲಲು ಆಗಿಲ್ಲ ಆಸ್ಟ್ರೇಲಿಯಾ ತಂಡ. ಹೀಗಾಗಿಯೇ 2ನೇ ಟಿ20 ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸುತ್ತಿದೆ ಆಸಿಸ್ ಪಡೆ. ಹೀಗಾಗಿ ಎರಡೂ ತಂಡಗಳ ನಡುವೆ ಇಂದು ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದ್ದು, ಮಳೆರಾಯ ಒಂದಷ್ಟು ಬಿಡುವು ನೀಡಿದರೆ ಮತ್ತೊಂದು ಅತ್ಯುತ್ತಮ ಪಂದ್ಯವನ್ನು ಭಾರತ ಮತ್ತು ಭಾರತೀಯರು ಕಣ್ತುಂಬಿಕೊಳ್ಳಬಹುದು. ಭಾರತಕ್ಕೆ ಯುವ ಪಡೆಯ ಬಲ ಇದ್ದು, ಆಸ್ಟ್ರೇಲಿಯಾ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ.

ಒಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಭರ್ಜರಿ ಪಂದ್ಯಕ್ಕೆ ಭರ್ಜರಿ ತಯಾರಿಯು ಸಾಗಿದೆ. ಆದರೆ ವರುಣನ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಚಿಂತೆಯು ಶುರುವಾಗಿದೆ. ಒಂದು ಕಡೆ ಇದು ಭಾರತಕ್ಕೆ ಸೇಡಿನ ಸರಣಿಯಾಗಿದ್ದರೆ ಆಸ್ಟ್ರೇಲಿಯಾಗೆ ಈ ಸರಣಿ ಮರ್ಯಾದಿ ಉಳಿಸಿಕೊಳ್ಳಲು ಇರುವ ವೇದಿಕೆ. ಹೀಗಾಗಿ ಭರ್ಜರಿ ಪೈಪೋಟಿಯನ್ನು ಕ್ರಿಕೆಟ್ ಜಗತ್ತು ನಿರೀಕ್ಷೆ ಮಾಡುತ್ತಿದೆ. ಅಕಸ್ಮಾತ್ ಆಸಿಸ್ ಟೀಂ ಈ ಸರಣಿ ಸೋತಿದ್ದೆ ಆದ್ರೆ ಕ್ರಿಕೆಟ್ ವಿಶ್ವಕಪ್ ಗೆದ್ದ ಕೆಲವೇ ದಿನದಲ್ಲಿ ಭಾರಿ ಅವಮಾನ ಎದುರಿಸಿದಂತೆ ಆಗುತ್ತೆ. ಇಲ್ಲ ಈ ಸರಣಿ ಗೆದ್ದು ಬೀಗಿದರೆ ಭಾರತಕ್ಕೆ ಸಾಲು ಸಾಲು ಸೋಲುಗಳ ಆಘಾತ ಎದುರಾಗಲಿದೆ.












Click it and Unblock the Notifications