T20 World Cup: ಮ್ಯಾಚ್ ಫಿನಿಶರ್, ವಿಕೆಟ್ ಕೀಪರ್ ಸ್ಲಾಟ್‌ಗೆ ಕರ್ಚಿಫ್ ಹಾಕುತ್ತಿರುವ ಆರ್‌ಸಿಬಿಯ ಸ್ಟಾರ್ ಪ್ಲೇಯರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ಹಿರಿಯ ಆಟಗಾರ ತನ್ನನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸಿ ಎನ್ನುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ, ತಂಡದ ಮ್ಯಾಚ್ ಫಿನಿಶರ್ ಎಲ್ಲರೂ ಹುಬ್ಬೇರುವಂತೆ ಬ್ಯಾಟ್ ಮಾಡಿದ್ದಾರೆ.
ಯುವಕರ ಆಟ ಎಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್‌ನಲ್ಲಿ 38 ವರ್ಷದ ಅನುಭವಿ ಆಟಗಾರ ಸಹ ಅಬ್ಬರಿಸಬಹುದು ಎಂದು ಸಾಬೀತು ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಆಡುವ ಈ ಸ್ಟಾರ್ ಪ್ಲೇಯರ್ ಆರ್‌ಸಿಬಿ ತಂಡದ ಆಪತ್ಭಾಂದವ. ಇವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಇವರಿಗೆ ಪ್ರೀತಿಯಿಂದ ಡಿಕೆ ಬಾಸ್ ಎಂದೆ ಕರೆಯುವುದು. ಅವರೇ ಆರ್‌ಸಿಬಿ ತಂಡದ ಫಿನಿಶರ್ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿರುವ ದಿನೇಶ್ ಕಾರ್ತಿಕ್..

ಡಿಕೆ 2.O
ದಿನೇಶ್ ಕಾರ್ತಿಕ್ ಇದೇ ತಮ್ಮ ಕೊನೆಯ ಐಪಿಎಲ್ ಎಂಬ ಸೂಚನೆಯನ್ನು ನೀಡಿದ್ದಾರೆ. ಆದರೆ, ತಮ್ಮಲ್ಲಿರುವ ಬ್ಯಾಟಿಂಗ್ ಸ್ಕಿಲ್ ಇನ್ನು ಮಾಸಿಲ್ಲ ಎಂದು ತೋರಿಸುತ್ತಿದ್ದಾರೆ. ಇವರು ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಆರ್‌ಸಿಬಿ ತಂಡಕ್ಕೆ ಆಧಾರವಾಗಿದ್ದಾರೆ. ಇವರ ಬ್ಯಾಟಿಂಗ್ ಕಂಡು ರೋಹಿತ್ ಶರ್ಮಾ ಸಹ ಫಿದಾ ಆಗಿದ್ದಾರೆ.
ಮುಂಬೈನ ವಾಂಖೇಡೆ ಅಂಗಳದಲ್ಲಿ ದಿನೇಶ್ ಆತಿಥೇಯ ತಂಡದ ವಿರುದ್ಧ ಕ್ಲಾಸಿಕ್ ಆಟವನ್ನು ಆಡಿದರು. ಇವರು ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸೇರಿದಂತೆ ಅಜೇಯ 53 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾಗಿದ್ದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲೂ ಇಂತಹದ್ದೇ ಆಟವನ್ನು ಆಡಿದರು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 288 ರನ್‌ಗಳ ಗುರಿಯನ್ನು ಹಿಂಬಾಲಿಸಿದಾಗ, ದಿನೇಶ್ ಬ್ಯಾಟಿಂಗ್ ನೋಡಿದ ಫ್ಯಾನ್ಸ್ ಫುಲ್ ಖುಷ್.. ಈ ಪಂದ್ಯದಲ್ಲಿ ಡಿಕೆ ಕೇವಲ 35 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿದಂತೆ 83 ರನ್ ಸಿಡಿಸಿ ಅಬ್ಬರಿಸಿದರು. ಇವರ ಶಾಟ್ ಸೆಲೆಕ್ಷನ್ ಹಾಗೂ ಬೌಲರ್‌ಗಳಿಗೆ ಇವರು ದಂಡಿಸುವ ರೀತಿಯನ್ನು ಕಂಡು ವಿರಾಟ್ ಕೊಹ್ಲಿ ಚಪ್ಪಾಳಿ ತಟ್ಟಿದ್ದರು.
ಐಪಿಎಲ್‌ನಲ್ಲಿ ಹೇಗಿದೆ ಅಬ್ಬರ
ಇಷ್ಟೇ ಏಕೆ ಈ ಋತುವಿನಲ್ಲಿ ದಿನೇಶ್ ಕಾರ್ತಿಕ್ ಡಿಫ್ರೆಂಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಾರಿಸುವ ಹೊಡೆತಗಳಿಗೆ ಕಾಮೆಂಟ್ರಿ ಮಾಡುವವರು ಸಹ ಯಾವ ಶಾಟ್ ಎಂದು ಹೇಳ ಬೇಕು ಎಂದು ಕನ್ಫ್ಯೂಸ್ ಆಗ್ತಾ ಇದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ದಿನೇಶ್ ಆಡಿರುವ ಏಳು ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ 205.45ರ ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಸಿಡಿಸಿದ್ದಾರೆ. ಇದರಲ್ಲಿ 16 ಬೌಂಡರಿ, 18 ಸಿಕ್ಸರ್ ಸೇರಿವೆ.

ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿರುವುದರಿಂದ, ಇಶಾಂತ್ ಶರ್ಮಾ, ಕೆ.ಎಲ್ ರಾಹುಲ್, ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಅವರ ಟಿ20 ವಿಶ್ವಕಪ್ ಸ್ಥಾನದ ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳವಾರ ಭಾರತದ ತಂಡದ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಭೇಟಿ ಮಾಡಿದ್ದಾರೆ ಎಂಬ ವರದಿಗಳು ಬಂದಿವೆ. ಈ ಸಮಯದಲ್ಲಿ ಮ್ಯಾಚ್ ಫಿನಿಶರ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇದೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರಿಂಕು ಸಿಂಗ್ ಹಾಗೂ ಶಿವಂ ದುಬೆ ಈ ಜವಾಬ್ದಾರಿ ಹೊರಲು ನಾವು ರೆಡಿ ಎಂದು ಹೇಳುತ್ತಿದ್ದಾರೆ. ಆರ್‌ಸಿಬಿ ಪ್ಲೇಯರ್ ಫಾರ್ಮ್ ನೋಡಿದರೆ ಈ ಆಟಗಾರರಿಗೂ ಹೆದರಿಕೆ ಶುರುವಾಗಿದೆ.












Click it and Unblock the Notifications