Dinesh Karthik: ಗ್ಲೌಸ್ ಬಿಚ್ಚಿದ ಆರ್‌ಸಿಬಿಯ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್‌ಗಳಲ್ಲಿ ಒಬ್ಬ ದಿನೇಶ್ ಕಾರ್ತಿಕ್. ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನವನ್ನು ಪಡೆದ ಪ್ಲೇಯರ್. ಅದೆಷ್ಟೋ ಸೋಲುವ ಪಂದ್ಯಗಳಲ್ಲಿ ಗೆಲುವಿನ ದೀಪ ಬೆಳಗಿಸಿದ ಸ್ಟಾರ್ ಬ್ಯಾಟರ್. ವಿಕೆಟ್ ಕೀಪರ್ ಆಗಿ ಹಾಗೂ ಮಿಡ್ಲ್ ಆರ್ಡರ್ ಬ್ಯಾಟರ್ ಆಗಿ ಮಿಂಚಿದ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ.
ಐಪಿಎಲ್ 2024ರ ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಕೊನೆಯದ್ದಾಗಿತ್ತು. ಇದನ್ನು ಅವರೇ ಹೇಳಿಕೊಂಡಿದ್ದರು. ಆದರೆ ದಿನೇಶ್, ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಮಾಡುತ್ತಿದ್ದನ್ನು ಗಮನಿಸಿದರೆ ಹೀಗೆ ಹೇಳಲು ಸಾಧ್ಯವೇ ಇರಲಿಲ್ಲ. ತಮ್ಮ ವಿಭಿನ್ನ ಶೈಲಿಯ ಬ್ಯಾಟ್‌ನಿಂದ ರನ್ ವೇಗಕ್ಕೆ ಚುರುಕು ಮುಟ್ಟಿಸುತ್ತಿದ್ದ ಆರ್‌ಸಿಬಿಯ ಸ್ಟಾರ್ ಪ್ಲೇಯರ್ ದಿನೇಶ್ ಕಾರ್ತಿಕ್, ಈಗ ಗ್ಲೌಸ್ ಬಿಚ್ಚಿಡುವ ನಿರ್ಧಾರವನ್ನು ಮಾಡಿದ್ದಾರೆ.

ಐಪಿಎಲ್ 2024ರ ಎಲಿಮಿನೇಟರ್ ಪಂದ್ಯವೇ ದಿನೇಶ್ ಕಾರ್ತಿಕ್ ಅವರಿಗೆ ಕೊನೆಯ ಪಂದ್ಯವಾಗಿತ್ತು. ಇದನ್ನು ಸದುಪಯೋಗ ಮಾಡಿಕೊಂಡು ಆರ್‌ಸಿಬಿಗೆ ಚಾಂಪಿಯನ್ ಪಟ್ಟ ತೊಡಿಸುವ ದಿನೇಶ್ ಕಾರ್ತಿಕ್ ಅವರ ಆಸೆ ಫಲಿಸಲಿಲ್ಲ. ಎಲಿಮಿನೇಟರ್ ಪಂದ್ಯದಲ್ಲೂ ರಾಜಸ್ಥಾನ ವಿರುದ್ಧ ದಿನೇಶ್ ಸ್ಥಿರ ಪ್ರದರ್ಶನ ನೀಡಿದರು. ದಿನೇಶ್ ಮಹತ್ವದ ಪಂದ್ಯದಲ್ಲಿ ದೊಡ್ಡ ಸಾಧನೆ ಮಾಡಲು ಆಗಲಿಲ್ಲ. 11 ರನ್ ಬಾರಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ಐಪಿಎಲ್ 2024ರಲ್ಲಿ ದಿನೇಶ್ ಪ್ರದರ್ಶನ
ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್‌ನಲ್ಲೂ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದ್ದರು. ಅದರಲ್ಲೂ ಇವರು ಬ್ಯಾಟ್ ಮಾಡಲು ಡೆತ್ ಓವರ್‌ನಲ್ಲಿ ಬಂದರೆ ರನ್ ಮಳೆ. ದಿನೇಶ್ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ 187.35ರ ಸರಾಸರಿಯಲ್ಲಿ 326 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳಿ ಸೇರಿವೆ. ಅಲ್ಲದೆ 27 ಬೌಂಡರಿ, 22 ಸಿಕ್ಸರ್ ಸೇರಿವೆ.

ಆರ್‌ಸಿಬಿ ಪರ ದಿನೇಶ್ ಪ್ರದರ್ಶನ
ಆರ್‌ಸಿಬಿ ತಂಡದ ಪರ ದಿನೇಶ್ ಕಾರ್ತಿಕ್ 2015ರಲ್ಲಿ ಮೊದಲ ಬಾರಿಗೆ ಆಡಿದ್ದರು. ಆ ಋತುವಿನಲ್ಲಿ ಅವರು ಆಡಿದ 16 ಪಂದ್ಯಗಳಲ್ಲಿ 141 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಆಗ ಆರ್‌ಸಿಬಿ ಇವರನ್ನು ಕೈ ಬಿಟ್ಟಿತು. ನಂತರ ಬೇರೆ ಬೇರೆ ತಂಡಗಳ ಪರ ಆಡಿದ ದಿನೇಶ್ ಕಾರ್ತಿಕ್ ನಂತರ ಕೆಕೆಆರ್ ತಂಡ ಸೇರಿದರು. 2022ರ ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ತಂಡ ಇವರನ್ನು ಕೈ ಬಿಟ್ಟಿತು. ಹರಾಜಿನಲ್ಲಿ ಆರ್‌ಸಿಬಿ 5.5 ಕೋಟಿ ನೀಡಿ ಇವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿತು.












Click it and Unblock the Notifications