ದೇವದತ್ ಪಡಿಕ್ಕಲ್ ಐತಿಹಾಸಿಕ ಸಾಧನೆ.. ರಾಹುಲ್ ದ್ರಾವಿಡ್ ಅವರ 27 ವರ್ಷಗಳ ಹಳೆಯ ದಾಖಲೆ ಉಡೀಸ್

Devdutt Padikkal: ಕೊಲಂಬೋದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ಎಡಗೈ ಬ್ಯಾಟರ್, ಕನ್ನಡಿಗ ದೇವದತ್ ಪಡಿಕ್ಕಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮತ್ತೊಂದು ಭರ್ಜರಿ ಶತಕ ಸಿಡಿಸಿದ್ದಾರೆ. ಇದೇ ವೇಳೆ ಅವರು ಹಲವು ಐತಿಹಾಸಿಕ ದಾಖಲೆಗಳನ್ನು ಕೂಡ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅತ್ಯುತ್ತಮ ಫಾರ್ಮ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರು, ಶ್ರಿಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು 193 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿ ಭಾರತ ತಂಡಕ್ಕೆ ಆಸರೆಯಾದರು. ಈ ಅದ್ಭುತ ಪ್ರದರ್ಶನದ ಮೂಲಕ ಅವರು ಕ್ರಿಕೆಟ್ ಇತಿಹಾಸದಲ್ಲಿ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Devdutt Padikkal Hits 117 Breaks Rahul Dravid s 27-Year-Old Record Know Complete statistics detail

ದ್ರಾವಿಡ್ ಅವರ 27 ವರ್ಷಗಳ ದಾಖಲೆ ಉಡೀಸ್

ವಿದೇಶಿ ನೆಲದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ರನ್‌ಗಳ ಸಾರ್ವಕಾಲಿಕ ದಾಖಲೆಯನ್ನು ಪಡಿಕ್ಕಲ್ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ 27 ವರ್ಷಗಳ ಹಳೆಯ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ದ್ರಾವಿಡ್ ಅವರು 1998-99ರ ನ್ಯೂಜಿಲೆಂಡ್ ಪ್ರವಾಸದ ಸರಣಿಯಲ್ಲಿ 321 ರನ್ ಗಳಿಸಿದ್ದರು.

ಇದೀಗ ಪ್ರಸ್ತುತ ಸರಣಿಯಲ್ಲಿ ಈಗಾಗಲೇ ಎರಡು ಶತಕಗಳ ನೆರವಿನಿಂದ 328 ರನ್ ಕಲೆಹಾಕಿರುವ ದೇವದತ್ ಪಡಿಕ್ಕಲ್ ಅವರು ರಾವುಲ್ ದ್ರಾವಿಡ್ ದಾಖಲೆಯನ್ನು ಹಿಂದಿಕ್ಕಿ ಗಮನ ಸೆಳೆದಿದ್ದಾರೆ. ಇದೇ ವೇಳೆ ಇದರ ಜೊತೆಗೆ ಪಡಿಕ್ಕಲ್ ಅವರು ಇನ್ನೂ ಹಲವು ಅಪರೂಪದ ಸಾಧನೆಗಳನ್ನು ಮಾಡಿದ್ದಾರೆ.

ಐತಿಹಾಸಿಕ ದಾಖಲೆ ಮಾಡಿದ ದೇವದತ್ ಪಡಿಕ್ಕಲ್

ಶ್ರೀಲಂಕಾ ನೆಲದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಬಾರಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ (307 ರನ್) ಹೆಸರಲ್ಲಿದ್ದ ದಾಖಲೆ ಈಗ ಕನ್ನಡಿಗ ಪಡಿಕ್ಕಲ್ ಪಾಲಾಗಿದೆ. ಅಲ್ಲದೆ ಶ್ರೀಲಂಕಾದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಎರಡು ಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಅಪರೂಪದ ಮೈಲಿಗಲ್ಲನ್ನೂ ಸ್ಥಾಪಿಸಿದ್ದಾರೆ.

ವಿಶೇಷ ಪಟ್ಟಿಗೆ ಸೇರಿದ ಕನ್ನಡಿಗ ದೇವ್

ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಭಾರತದ 7ನೇ ಬ್ಯಾಟರ್ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಈ ಮೊದಲು ವಿನೋದ್ ಕಾಂಬ್ಳಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದರ್ ಸೆಹ್ವಾಗ್, ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಮಾತ್ರ ಈ ಸಾಧನೆ ಮಾಡಿದ್ದರು.

ವಿಶೇಷ ಸಾಧನೆ ಮಾಡಿದವರ ಪಟ್ಟಿಯಲ್ಲಿ ಪಡಿಕ್ಕಲ್

* ವಿನೋದ್ ಕಾಂಬ್ಳಿ

* ಮೊಹಮ್ಮದ್ ಅಜರುದ್ದೀನ್

* ಸಚಿನ್ ತೆಂಡೂಲ್ಕರ್

* ವೀರೇಂದರ್ ಸೆಹ್ವಾಗ್

* ಶಿಖರ್ ಧವನ್

* ಚೇತೇಶ್ವರ್ ಪೂಜಾರ

* ದೇವದತ್ ಪಡಿಕ್ಕಲ್

ಶ್ರೀಲಂಕಾ ವಿರುದ್ಧದ ಪಂದ್ಯದ ಪ್ರಸ್ತುತ ಸ್ಥಿತಿ

ಪಡಿಕ್ಕಲ್ ಅವರ ಶತಕ (117) ಮತ್ತು ನಾಯಕ ಶುಭ್‍ಮನ್ ಗಿಲ್ ಅವರ ಅರ್ಧಶತಕದ (50) ಬಲದಿಂದ ಭಾರತ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (45) ಮತ್ತು ರವೀಂದ್ರ ಜಡೇಜಾ (43) ಉಪಯುಕ್ತ ರನ್ ಕೊಡುಗೆ ನೀಡಿದರು. ದಿನದಾಟದ ಅಂತ್ಯಕ್ಕೆ ಧ್ರುವ್ ಜುರೆಲ್ (7) ಮತ್ತು ಸಾರಾಂಶ್ ಜೈನ್ (7) ಕ್ರೀಸ್‌ನಲ್ಲಿದ್ದಾರೆ. ಒಟ್ಟಿನಲ್ಲಿ ಗಮನ ಸೆಳೆದಿದ್ದು ಮಾತ್ರ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಆಕರ್ಷಕ ಶತಕ ಸಿಡಿಸಿ ಅಪರೂಪದ ದಾಖಲೆಗಳನ್ನು ಮಾಡಿದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+