KL Rahul: ಕನ್ನಡಿಗ ಕೆಎಲ್ ರಾಹುಲ್‌ಗೆ ದೊಡ್ಡ ಹೊಣೆ ನೀಡಲು ಸಿದ್ಧತೆ
Kannadiga KL Rahul: ಈಗಾಗಲೇ ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆಯೇನೋ ಮಗಿದಿದೆ. ಇದೀಗ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಿಷ್ಠಗೊಳಿಸುವತ್ತ ಚಿತ್ತ ನೆಟ್ಟಿವೆ. ಹಾಗೆಯೇ ಆ ಟೀಂ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲು ಪ್ಲಾನ್ ನಡೆಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇನ್ನೂ ಈ ವರ್ಷ ಬಲಿಷ್ಠ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದಾಗಿದ್ದು, ಅಬ್ಬರದ ಬ್ಯಾಟ್ ಬೀಸಿದ ಕನ್ನಡಿಗ ಕೆಎಲ್ ರಾಹುಲ್‌ಗೆ ಇದೀಗ ದಡ್ಡ ಜವಾಬ್ದಾರಿ ವಹಿಸಲು ಪ್ಲಾನ್ ಮಾಡಿಕೊಂಡಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಡಿಸಿಯಲ್ಲಿ ಮಹತ್ವದ ಬದಲಾವಣೆ: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದು, 18ನೇ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಕ್ಷರ್ ಪಟೇಲ್ಗೆ ಬಿಗ್ ಶಾಕ್ ಎದುರಾಗಿದೆ. ಮುಂದಿನ ಬಾರಿಯ 2026ರ ಐಪಿಎಲ್‌ನಿಂದ ಕನ್ನಡಿಗರ ಕೆಎಲ್ ರಾಹುಲ್‌ಗೆ ನಾಯಕನ ಪಟ್ಟ ಕಟ್ಟಲು ಸಕಲ ತಯಾರಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಈ ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಕ್ಷರ್ ಪಾಟೇಲ್ ನಾಯಕತ್ವ ಸ್ಥಾನ ನೀಡಿತ್ತು. 6 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡಿರುವ ಉಪನಾಯಕ ಅಕ್ಷರ್ ಪಟೇಲ್ಗೆ ಈ ಸ್ಥಾನ ನೀಡಲಾಗಿತ್ತು. ಆದರೆ, ಇದೀಗ ಮುಂದಿನ ಸೀಸನ್‌ನಿಂದ ಅವರನ್ನು ನಾಯಕನ ಸ್ಥಾನದಿಂದ ಕೆಳೆಗಿಳಿಸಿ ಆ ಸ್ಥಾನಕ್ಕೆ ಕೆಎಲ್ ರಾಹುಲ್ ತರಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಈ ಹಿಂದಿನ ಆವೃತಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ಅಕ್ಷರ್ ಪಟೆಲ್ ನಾಯಕತ್ವದ ಡಿಸಿ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಕೊನೆಯಲ್ಲಿ ಎಡವಿ 5ನೇ ಸ್ಥಾನದಲ್ಲಿ ಉಳಿದುಕೊಳ್ಳುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿತು. ನಾಯಕ ಅಕ್ಷರ್ ಪಟೇಲ್ ಎಲ್ಲಾ ಪಂದ್ಯಗಳಲ್ಲೂ ಕೂಡ ಉತ್ತಮವಾಗಿ ಬೌಲಿಂಗ್ ದಾಳಿ ಹಾಗೂ ಅಬ್ಬರದ ಬ್ಯಾಟಿಂಗ್ ಅನ್ನಯ ಸಹ ಮಾಡಿದರು. ಆದರೂ, ತಂಡ ಕೊನೇ ಹಂತದಲ್ಲಿ ಸೋಲನುಭವಿಸಿ ಹೊರಬಿದ್ದಿತು.
ಅಕ್ಷರ್ ಪಟೇಲ್ ಉತ್ತಮ ಅನುಭವಿ ಆಟಗಾರನೂ ಸಹ ಆಗಿದ್ದಾರೆ. ಆದರೆ, ಯಾರನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎನ್ನುವ ನಿರ್ಧಾರದಲ್ಲಿ ಎಲ್ಲೋ ಒಂದು ಕಡೆ ಹಿಂದೆ ಉಳಿದರು. ಆದ್ದರಿಂದ ಮುಂದಿನ ಬಾರಿಯ ಐಪಿಎಲ್‌ಗೆ ಮತ್ತೊಬ್ಬ ಅನುಭವಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡಲು ಪ್ಲಾನ್ ಮಾಡಿಕೊಂಡಿದೆ. ಇವರು ಈ ಬಾರಿಯ ಸೀಸನ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎದುರಾಳಿ ಬೌಲರ್‌ಗಳಿಗೆ ಬೆವರಳಿಸಿದ್ದಾರೆ.
ರಾಹುಲ್‌ಗೆ ದೊಡ್ಡ ಜವಾಬ್ದಾರಿ: ಹೇಳಬೇಕೆಂದ್ರೆ ಅನುಭವದ ವಿಚಾರಕ್ಕೆ ಬಂದರೆ, ಕೆಎಲ್ ರಾಹುಲ್ ಅವರು ಕಳೆದ ಬಾರಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಬೇಕಿತ್ತು. ನಾಯಕತ್ವ ನೀಡುವ ಉದ್ದೇಶದಿಂದಲೇ ಕಳೆದ ಸೀಸನ್‌ನಲ್ಲಿ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿ ಮಾಡಿತ್ತು.
ರಾಹುಲ್‌ಗೆ ನಾಯಕನ ಪಟ್ಟ ಕೈತಪ್ಪಿದ್ದೇಕೆ?: ರಿಷಭ್ ಪಂತ್ ತಂಡ ತೊರೆದ ಕಾರಣ, ನಾಯಕತ್ವ ಸ್ಥಾನ ತುಂಬಲಿಕ್ಕಾಗಿಯೇ ರಾಹುಲ್ ಅವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿ ಮಾಡಿತ್ತು. ಇನ್ನೂ ಐಪಿಎಲ್ಗೂ ಕೆಲ ತಿಂಗಳ ಹಿಂದೆಯಷ್ಟೇ ಮಗುವಿಗೆ ತಂದೆಯಾದ ರಾಹುಲ್ ಆರಂಭಿಕ ಕೆಲ ಪಂದ್ಯದಿಂದ ಹೊರಗುಳಿದರು. ಇದೇ ಕಾರಣದಿಂದ ಡಿಸಿ ಆಫರ್ ನಿರಾಕರಿಸಿದ್ದರಾಹುಲ್, ಸಾಮಾನ್ಯ ಆಟಗಾರನಾಗಿ ಆಡುವುದಾಗಿ ತಿಳಿಸಿದ್ದರು.
ಕನ್ನಡಿಗ ಕೆ.ಎಲ್.ರಾಹುಲ್‌ಗೆ ನಾಯಕನಾಗಿ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಮುನ್ನಡೆಸಿದ ಅನುಭವ ಅವರಿಗಿದೆ. ಐಪಿಎಲ್ನಲ್ಲಿ ಒಟ್ಟು 64 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರುವ ಅವರು 32 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. ಅದೇನೆ ಇರಲಿ, ಇದೀಗ ಕೆಎಲ್ ರಾಹುಲ್ ಅವರಿಗೆ ನಾಯಕ ಪಟ್ಟ ಕಟ್ಟಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಫ್ರಾಂಚೈಸಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications