WPL Auction: ಆಲ್‌ರೌಂಡರ್ ದೀಪ್ತಿ ಶರ್ಮಾ ಹೊಸ ಇತಿಹಾಸ, 3,00,00,000 ರೂಪಾಯಿ ಭರ್ಜರಿ ಆಫರ್...
ಮಹಿಳಾ ಕ್ರಿಕೆಟ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಕೋಟಿ ಕೋಟಿ ರೂಪಾಯಿ ಈಗ ನೀರಿನಂತೆ ಹರಿದು ಹೋಗುತ್ತಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡ 2025 ಏಕದಿನ ವಿಶ್ವಕಪ್ ಗೆದ್ದ ನಂತರ, ಮಹಿಳಾ ಕ್ರಿಕೆಟ್ ತಂಡಕ್ಕೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ ಎಂಬುದು ಇಡೀ ಜಗತ್ತಿಗೆ ಮನವರಿಕೆ ಆಗಿದೆ. ಇದೇ ಸಂಭ್ರಮದಲ್ಲಿ ಮಹಿಳಾ ಪ್ರಿಮಿಯರ್ ಲೀಗ್ ಕೂಡ ಬಂದಿದ್ದು, ಇಂದು ನಡೆದ ಹರಾಜು ಪ್ರಕ್ರಿಯೆ ಹೊಸ ಇತಿಹಾಸ ನಿರ್ಮಾಣ ಮಾಡಿಬಿಟ್ಟಿದೆ. ಅದರಲ್ಲೂ ಆಲ್‌ರೌಂಡರ್ ದೀಪ್ತಿ ಶರ್ಮಾ ಹೊಸ ಇತಿಹಾಸ, 3,00,00,000 ರೂಪಾಯಿ ಭರ್ಜರಿ ಆಫರ್...
ಐಪಿಎಲ್ ಆರಂಭವಾದ ನಂತರ ಭಾರತೀಯ ಕ್ರಿಕೆಟ್ ಲೋಕದ ದಿಕ್ಕೇ ಬದಲಾಗಿ ಹೋಗಿದ್ದು, ಈ ರೀತಿ ಕ್ರಿಕೆಟ್ ಜಗತ್ತಿಗೆ ಹೊಸ ತಿರುವು ಸಿಕ್ಕಂತೆ ಆಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಸೌಂಡ್ ಮಾಡುತ್ತಿದ್ದು, ಜಾಗತಿಕವಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ಮೀರಿಸುವ ಮತ್ತೊಂದು ಟೋರ್ನಿ ಹುಟ್ಟಿ ಬರುವುದು ಅಸಾಧ್ಯ ಎಂಬ ಮಾತು ಕೂಡ ಕೇಳಿ ಬರುತ್ತಲೇ ಇರುತ್ತದೆ. ಹೀಗಿದ್ದಾಗ ಕೆಲವು ವರ್ಷಗಳ ಹಿಂದೆ ಮಹಿಳಾ ಕ್ರಿಕೆಟ್ ಆಟಗಾರರಿಗೆ ಅಂತಾ ಆರಂಭವಾದ ಮಹಿಳಾ ಪ್ರಿಮಿಯರ್ ಲೀಗ್ ಇದೀಗ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿದೆ. ಈ ಬಾರಿ ಆಲ್‌ರೌಂಡರ್ ದೀಪ್ತಿ ಶರ್ಮಾ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದ್ದಾರೆ.

ಆಲ್‌ರೌಂಡರ್ ದೀಪ್ತಿ ಹೊಸ ಇತಿಹಾಸ!
ಯಾರೂ ಊಹೆ ಮಾಡಲು ಆಗದ ರೀತಿಯಲ್ಲಿ ಈ ಬಾರಿಯ ಮಹಿಳಾ ಪ್ರಿಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಯಿತು. ಮಹಿಳಾ ಆಟಗಾರರಿಗೆ ಕೋಟಿ ಕೋಟಿ ರೂಪಾಯಿ ಹಣ ಸುರಿದು ತಮ್ಮ, ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲು ಹಲವು ತಂಡಗಳ ಮಾಲೀಕರು ಮುಗಿಬಿದ್ದರು. ಈ ಪೈಕಿ ಭಾರಿ ಗಮನ ಸೆಳೆದಿದ್ದು ಆಲ್‌ರೌಂಡರ್ ದೀಪ್ತಿ ಶರ್ಮಾ, ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ದೀಪ್ತಿ ಶರ್ಮಾ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲು ದೊಡ್ಡ ಬಿಡ್ ಮಾಡಿತ್ತು. ಹೀಗಿದ್ದಾಗ ಅಂತಿಮವಾಗಿ ಯುಪಿ ವಾರಿಯರ್ಸ್ ತಂಡ RTM ಬಳಸಿ 3.2 ಕೋಟಿ ರೂಪಾಯಿಗೆ ದೀಪ್ತಿ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹಾಗೇ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕೂಡ ಉತ್ತಮ ತಂಡ ಕಟ್ಟಲು, ಭಾರಿ ಜೋರಾಗಿ ಬಿಡ್ ಮಾಡಿತ್ತು.
ಮಹಿಳಾ ಆಟಗಾರರಿಗೆ ಪ್ರೋತ್ಸಾಹ
ಒಟ್ನಲ್ಲಿ ಮಹಿಳಾ ಪ್ರಿಮಿಯರ್ ಲೀಗ್ ಮತ್ತೊಮ್ಮೆ ಭಾರತದ ಕ್ರಿಕೆಟ್ ಜಗತ್ತಿನ ಶಕ್ತಿಯನ್ನು ಜಗತ್ತಿಗೆ ತಿಳಿಸಿದೆ. ನೋಡ ನೋಡುತ್ತಲೇ ಮಹಿಳಾ ಪ್ರಿಮಿಯರ್ ಲೀಗ್ ಕೂಡ ಶಕ್ತಿಶಾಲಿ ಟೂರ್ನಿಯಾಗುತ್ತಾ ದಾಪುಗಾಲು ಇಡುತ್ತಿದೆ. ಈ ಲೀಗ್ ಇನ್ನಷ್ಟು ಎತ್ತರಕ್ಕೆ ಹೋಗಲಿ ಅಂತಾ ಅಭಿಮಾನಿಗಳು ಕೂಡ ಈಗ ಹಾರೈಸುತ್ತಿದ್ದಾರೆ. ಅಲ್ಲದೆ ಮಹಿಳಾ ಆಟಗಾರರಿಗೆ ಕೂಡ ಈ ಮೂಲಕ ಪ್ರೋತ್ಸಾಹ ಸಿಗುತ್ತಿದೆ. ವಿಶ್ವಕಪ್ ಗೆದ್ದ ನಂತರ ಮತ್ತೊಮ್ಮೆ ಮಹಿಳಾ ಕ್ರಿಕೆಟ್ ತಂಡ ಸ್ಟೇಡಿಯಂ ಪ್ರವೇಶ ಮಾಡಿ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬದ ಸಂಭ್ರಮ ತರಲು ಸಜ್ಜಾಗಿದೆ.












Click it and Unblock the Notifications