Vinesh Phogat: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ; ಮಹತ್ವದ ಅಪ್‌ಡೇಟ್ ಕೊಟ್ಟ ಸಿಎಎಸ್
100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಒಲಿಂಪಿಕ್‌ನಿಂದಲೇ ಅನರ್ಹಗೊಂಡಿರುವ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಪದಕದ ಆಸೆ ಇನ್ನೂ ಜೀವಂತವಾಗಿದೆ. ಒಲಂಪಿಕ್ ಫೈನಲ್‌ನಿಂದ ಅನರ್ಹತೆ ನಿರ್ಣಯದ ವಿರುದ್ಧ ವಿನೇಶ್ ಫೋಗಟ್ ಅವರ ಮೇಲ್ಮನವಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಕ್ರೀಡಾ ನ್ಯಾಯಮಂಡಳಿ ಆಗಸ್ಟ್ 11ಕ್ಕೆ ಮುಂದೂಡಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಸಿಎಎಸ್‌ನ ತಾತ್ಕಾಲಿಕ ವಿಭಾಗವು ಗಡುವನ್ನು ಆಗಸ್ಟ್ 11 ರಂದು ಸಂಜೆ 6 ಗಂಟೆಯವರೆಗೆ ವಿಸ್ತರಣೆ ಮಾಡಿದೆ. ಡಾ ಅನ್ನಾಬೆಲ್ಲೆ ಬೆನೆಟ್, ವಿನೇಶ್ ಫೋಗಾಟ್ vs ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಇಂಟರ್ನ್ಯಾಷನಲ್ ಒಲಂಪಿಕ್ ಸಮಿತಿಯ ಪ್ರಕರಣದಲ್ಲಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ವಿವರವಾದ ಆದೇಶವನ್ನು ನಂತರದಲ್ಲಿ ನೀಡಲಾಗುವುದು ಎಂದು ಹೇಳಿದೆ.

ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ವಿಚಾರಣೆಯ ಸಂದರ್ಭದಲ್ಲಿ ಸಿಎಎಸ್ ಆಡ್ ಹಾಕ್ ವಿಭಾಗದ ಮುಂದೆ ವಿನೇಶ್ ಅವರ ಪರವಾಗಿ ವಾದ ಮಾಡಲು ನಿಯೋಜನೆ ಮಾಡಲಾಗಿದೆ.
ಬೆಳ್ಳಿ ಪದಕ ನೀಡಲು ಮನವಿ
ವಿನೇಶ್ ಫೋಗಟ್ ಅನರ್ಹಗೊಂಡಾಗ, ಅವರು ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ವಿನಂತಿಸಿದರು, ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿರುವ ಕಾರಣ ಬೆಳ್ಳಿ ಪದಕ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈಗ ವಿನೇಶ್ ಫೋಗಟ್‌ಗೆ ಕ್ಯೂಬಾದ ಕುಸ್ತಿಪಟುದೊಂದಿಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆ ಎಂದು ನಿರ್ಧರಿಸಲು ಈಗ ಕ್ರೀಡೆಯ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಗೆ ನಿರ್ಣಯಕ್ಕೆ ಬಿಟಲಾಗಿಗಿದೆ. ಸಿಎಎಸ್ ಎಂದರೆ 1984 ರಲ್ಲಿ ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾ ವಿವಾದಗಳನ್ನು ಪರಿಹರಿಸಲು ಮಧ್ಯಸ್ಥಗಾರರು ಅಥವಾ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತದೆ.
ವಿನೇಶ್ ಫೋಗಟ್‌ಗೆ ಭಾರಿ ಬೆಂಬಲ
ಇನ್ನು ವಿನೇಶ್ ಫೋಗಟ್ ಅವರಿಗೆ ಅನ್ಯಾಯವಾಗಿದ್ದು ಅವರಿಗೆ ಬೆಳ್ಳಿ ಪದಕ ನೀಡಲೇಬೇಕು ಎಂದು ಭಾರತೀಯ ಕ್ರೀಡಾಭಿಮಾನಿಗಳ ಒತ್ತಾಯ ಮಾಡುತ್ತಿದ್ದಾರೆ. ಲಕ್ಷಾಂತರ ಕ್ರೀಡಾಭಿಮಾನಿಗಳು ವಿನೇಶ್ ಫೋಗಟ್ ಅವರಿಗೆ ಬೆಂಬಲ ನೀಡಿ ಎಕ್ಸ್‌ನಲ್ಲಿ ಪೋಸ್ಟ್‌ಗಳ್ನು ಹಂಚಿಕೊಂಡಿದ್ದಾರೆ.












Click it and Unblock the Notifications