Get Updates
Get notified of breaking news, exclusive insights, and must-see stories!

GT vs CSK IPL 2023 Final: ಪಂದ್ಯಕ್ಕೂ ಮುನ್ನವೇ ಫಲಿತಾಂಶ ಪ್ರಕಟ! ಸಿಎಸ್‌ಕೆ ರನ್ನರ್ ಅಪ್‌?

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಫೈನಲ್ ಪಂದ್ಯ ಮಳೆಯ ಕಾರಣದಿಂದ ಭಾನುವಾರ ರದ್ದಾಗಿದ್ದು, ಸೋಮವಾರಕ್ಕೆ ಮುಂದೂಡಲಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತಮುತ್ತ ಭಾನುವಾರ ಸಂಜೆ ಭಾರಿ ಮಳೆ ಸುರಿದ ಕಾರಣ, ಟಾಸ್ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಮೀಸಲು ದಿನ ನಿಗದಿ ಮಾಡಿರುವ ಕಾರಣ ಸೋಮವಾರ ಫೈನಲ್ ಪಂದ್ಯ ನಡೆಯಲಿದೆ. ಭಾನುವಾರ ಸಂಜೆ ಮಳೆಯ ಸಮಯದಲ್ಲಿ ಅಹಮದಾಬಾದ್ ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ "ಸಿಎಸ್‌ಕೆ ರನ್ನರ್ ಅಪ್‌" ಎನ್ನುವ ಸಾಲುಗಳು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

CSK vs GT IPL Final 2023

ಪಂದ್ಯವೇ ನಡೆದಿಲ್ಲ ಆಗಲೇ ಫಲಿತಾಂಶ ಪ್ರಕಟಿಸಿದ್ದಾರಲ್ಲ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ರೀತಿಯ ಸಾಲುಗಳು ಬಂದಿದ್ದಾರೂ ಯಾಕೆ? ಎನ್ನುವ ಪ್ರಶ್ನೆಗಳು ಸದ್ಯ ಅಭಿಮಾನಿಗಳನ್ನು ಬಿಟ್ಟೂ ಬಿಡದೆ ಕಾಡುತ್ತಿದೆ.

ಸಿಎಸ್‌ಕೆ ರನ್ನರ್ ಅಪ್ ಎಂದು ದೊಡ್ಡ ಪರದೆಯ ಮೇಲೆ ಪ್ರಕಟಿಸಿರುವ ಫೋಟೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಸಂದೇಶ ನೋಡಿ ಗುಜರಾತ್ ಟೈಟಾನ್ಸ್ ತಂಡದ ಅಭಿಮಾನಿಗಳು ಥ್ರಿಲ್ ಆಗಿದ್ದರೆ, ಸಿಎಸ್‌ಕೆ ತಂಡದ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಭಾರಿ ಕುತೂಹಲ ಕೆರಳಿಸಿರುವ ಫೈನಲ್ ಪಂದ್ಯ

ಐಪಿಎಲ್ 2023ರ ಫೈನಲ್ ಪಂದ್ಯ ಸದ್ಯ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಪಂದ್ಯಾವಳಿಯಲ್ಲಿ ಮೊದಲಿನಿಂದಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿತು, ಸಿಎಸ್‌ಕೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

CSK vs GT IPL Final 2023

ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಗೆಲುವು ಕಂಡ ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಒಂದು ವೇಳೆ ಗುಜರಾತ್ ಟೈಟಾನ್ಸ್ ಕಪ್ ಗೆದ್ದರೆ, ತಂಡವೊಂದು ಆಡಿದ ಮೊದಲ ಎರಡೂ ಆವೃತ್ತಿಗಳಲ್ಲಿ ಕಪ್ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.

ಧೋನಿಗಾಗಿ ಕಪ್ ಗೆಲ್ಲಬೇಕು ಸಿಎಸ್‌ಕೆ

ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿದೆ. ಗೆಲುವಿನ ಮೂಲಕ ಅವರು ಕ್ರಿಕೆಟ್ ವೃತ್ತಿ ಬದುಕಿಗೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೊಣಕಾಲು ನೋವಿನಿಂದ ಬಳಲುತ್ತಿದ್ದರೂ ತಂಡವನ್ನು ಫೈನಲ್‌ವರೆಗೆ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಐಪಿಎಲ್‌ನಲ್ಲಿ 250ನೇ ಪಂದ್ಯವನ್ನಾಡಲು ಅವರು ಸಜ್ಜಾಗಿದ್ದಾರೆ. ಒಟ್ಟು 10 ಬಾರಿ ಅವರು ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದು, ಈ ಸಾಧನೆ ಮಾಡಿದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಇದುವರೆಗೂ ಯಾವೊಬ್ಬ ಆಟಗಾರ ಕೂಡ 250 ಐಪಿಎಲ್ ಪಂದ್ಯಗಳನ್ನು ಆಡಿಲ್ಲ. ಧೋನಿ ಕೊನೆಯ ಐಪಿಎಲ್ ಎಂದೇ ನಂಬಿರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಬೇಕು ಎಂದು ಪ್ರಾರ್ಥನೆ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಧೋನಿಯನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ. ಗುಜರಾತ್ ಟೈಟಾನ್ಸ್ ಮತ್ತು ಸಿಎಸ್‌ಕೆ ಈವರೆಗೆ 4 ಬಾರಿ ಮುಖಾಮುಖಿಯಾಗಿದ್ದು, 3 ಬಾರಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದ್ದು, ಒಂದು ಬಾರಿ ಸಿಎಸ್‌ಕೆ ಗೆದ್ದಿದೆ, ಅಹಮದಾಬಾದ್‌ನಲ್ಲಿ ಸಿಎಸ್‌ಕೆ ಈವರೆಗೂ ಒಂದೂ ಪಂದ್ಯವನ್ನು ಗೆದ್ದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+