ಗಂಧದ ಗುಡಿ ಸಿನಿಮಾ ನೋಡಿ ಪುನೀತ್ ಆಶಯವನ್ನು ಜೀವಂತವಾಗಿರಿಸಿ : ಅಮಿತ್ ಮಿಶ್ರಾ ಮನವಿ

ಬೆಂಗಳೂರು, ಅಕ್ಟೋಬರ್ 27; ಪುನೀತ್ ರಾಜ್‌ ಕುಮಾರ್‌ ಕನಸಿನ ಕೂಸು ಗಂಧದ ಗುಡಿ ಬಿಡುಗಡೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಸಿನಿಮಾದ ಕ್ರೇಜ್‌ ದೇಶಾದ್ಯಂತ ಗಮನ ಸೆಳೆದಿದೆ. ಲಕ್ಷಾಂತರ ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ ನಡೆದಿದ್ದು, ವಿವಿಧ ಭಾಷೆಗಳ ದಿಗ್ಗಜ ನಟರೇ ಬಂದು ಅಪ್ಪು ಸಿನಿಮಾಗೆ ಶುಭ ಹಾರೈಸಿದ್ದಾರೆ. ಇದೀಗ ಆ ಸಾಲಿಗೆ ಖ್ಯಾತ ಕ್ರಿಕೆಟಿಗ ಅಮಿತ್ ಮಿಶ್ರಾ ಕೂಡ ಸೇರಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಿಶ್ರಾ," ಪುನೀತ್ ಭಾಯ್ ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲಿ ನೆಲೆಸಿದ್ದಾರೆ. ಅವರು ನನ್ನ ಸಹೋದರ, ಅತ್ಯುತ್ತಮ ಗೆಳೆಯ ಹಾಗೂ ಪ್ರತಿಯೊಂದು ವಿಷಯದಲ್ಲಿ ಬೆಂಬಲಿಸುವ ವ್ಯಕ್ತಿ. ದಯವಿಟ್ಟು ಅಕ್ಟೋಬರ್ 28ರಿಂದ ಬಿಡುಗಡೆಯಾಗಿರುವ ಗಂಧದಗುಡಿ ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ. ಈ ಮೂಲಕ ಅವರ ಪರಂಪರೆಯನ್ನು ಮುಂದುವರಿಯಲಿ. ಅಶ್ವಿನಿ ಪುನೀತ್ ರಾಜ್‌ ಕುಮಾರ್‌ಗೆ ಶುಭಾಶಯ ತಿಳಿಸಿದ್ದಾರೆ.

Cricketer Amit Mishra Request fans to watch Puneeth Rajkumar Last cinema Gandhadagudi

ಇನ್ನು ರಾಜ್ಯ ಸರಕಾರ ಗಂಧದ ಗುಡಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಹೀಗಾಗಿ ಟಿಕೆಟ್ ಬೆಲೆ ಬಹಳ ಕಡಿಮೆ ಇರಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಗಂಧದಗುಡಿ ಬಿಡುಗಡೆ ಹಿನ್ನೆಲೆ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಕಟೌಟ್‍ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಗಂಧದಗುಡಿ ಸಿನಿಮಾದ ಅವಧಿ 1 ಗಂಟೆ 37 ನಿಮಿಷ ಇದೆ. ಬುಕ್​ ಮೈ ಶೋ ನಲ್ಲಿ ಟಿಕೆಟ್ ಬುಕ್‍ ಮಾಡಬಹುದು. ಕರುನಾಡಿನ ವನ್ಯಜೀವಿ, ಪ್ರಕೃತಿ ಸಂಪತ್ತು, ಕಾಡು, ಗುಡ್ಡ-ಬೆಟ್ಟವನ್ನು ಗಂಧದಗುಡಿಯಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಪುನೀತ್ ರಾಜ್‍ಕುಮಾರ್ ಅವರಿಗೆ ಅಮೋಘವರ್ಷ ಅವರು ಸಾಥ್ ನೀಡಿದ್ದಾರೆ.

ಟಿಕೆಟ್ ಸೋಲ್ಟ್‌ ಔಟ್

ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಆರಂಭವಾದ ಬೆನ್ನಲ್ಲೇ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಆಗಿವೆ. ಈ ವಿಚಾರವನ್ನು ಪಿಆರ್‌ಕೆ ಪ್ರೊಡಕ್ಷನ್‌ ಮತ್ತು ಪಿಆರ್‌ಕೆ ಆಡಿಯೋ ಸಂಸ್ಥೆ ಸಾಮಾಜಿಕ ಜಾಲಾತಾಣದ ಮೂಲಕ ಟಿಕೆಟ್‌ ಸೋಲ್ಡ್‌ ಔಟ್ ಆಗಿರುವ ಮಾಹಿತಿ ಹಂಚಿಕೊಂಡಿದ್ದಾರೆ.

30 ಹಳ್ಳಿಗಳ ಮಕ್ಕಳಿಗೆ ಫ್ರೀ ಶೋ

ನವೆಂಬರ್ ಒಂದರಂದು ಬಳ್ಳಾರಿ ತಾಲೂಕಿನ ಸುಮಾರು 30 ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಿದ್ದಾರೆ. ಅಪ್ಪು ಅಭಿಮಾನಿ ಬಳಗದ ಎಲ್ಲಾ ಸದಸ್ಯರು ತಮ್ಮ ಸ್ವಂತ ಹಣದಿಂದ ಚಿತ್ರಮಂದಿರವನ್ನು ಬುಕ್ ಮಾಡಿದ್ದು, ಸುಮಾರು ಮೂವತ್ತು ಹಳ್ಳಿಗಳ ಸರ್ಕಾರಿ ಶಾಲಾ ಮಕ್ಕಳಿಗೆ ಟಿಕೆಟ್ ಬುಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+