IPL 2024: ಐಪಿಎಲ್‌ನಲ್ಲಿ ಮತ್ತೆ ಎದ್ದಿದೆ ಅಂಪೈರಿಂಗ್ ಬಗ್ಗೆ ಪ್ರಶ್ನೆ? ಸಂಜು ಸ್ಯಾಮ್ಸನ್‌ಗೆ ಔಟ್ ನೀಡಿದ್ದು ಏಕೆ?
ಐಪಿಎಲ್ ಸದ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಈ ಮಧ್ಯೆ ಟೂರ್ನಿಯಲ್ಲಿ ಅಂಪೈರ್ ತೀರ್ಮಾನ ಸರಿಯಾಗಿಲ್ಲ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಆರ್‌ಸಿಬಿ ಅಭಿಮಾನಿಗಳು ಮರೆಯಬೇಕೆಂದರೂ ಮರೆಯಲಾಗದ ಕ್ಷಣವದು. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಫೈಟ್ ನಡೆಸಿದ್ದವು. ಆಗ ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಎಸೆದ ಚೆಂಡು, ಫುಲ್ ಟಾಸ್ ಆಗಿ ವಿರಾಟ್ ಸೊಂಟದ ಮೇಲೆ ಇತ್ತು ಎಂದು ವಾದ. ಆದರೆ ಥರ್ಡ್ ಅಂಪೈರ್ ಇಲ್ಲ ಇದು ಸೊಂಟಕ್ಕಿಂತ ಕೆಳಗಿತ್ತು ಎಂದು ತೀರ್ಪು ನೀಡಿದರು. ಅಲ್ಲಿಂದ ಆರ್‌ಸಿಬಿ ಅಭಿಮಾನಿಗಳ ಕೋಪ ನೆತ್ತಿಗೇರಿತು. ಸಾಮಾಜಿಕ ತಾಣದಲ್ಲಿ ಬಾಯಿಗೆ ಬಂದಹಾಗೆ ಮಾತನಾಡಲು ಆರಂಭಿಸಿದರು.

ಸಂಜು ಔಟ್ ವಿವಾದವೇಕೆ?
ಇದೇ ರೀತಿ ಸನ್ನಿವೇಶ ಹಲವು ಬಾರಿ ಪ್ರಸಕ್ತ ಐಪಿಎಲ್‌ನಲ್ಲಿ ನಡೆದಿದೆ. ಹೀಗಾಗಿ ಐಪಿಎಲ್‌ನಲ್ಲಿ ಅಂಪೈರ್ ನಿರ್ಣಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸಂಜು ಭರ್ಜರಿ ಲಯದಲ್ಲಿ ಕಾಣಿಸಿಕೊಂಡಿದ್ದರು.
ಸಂಜು ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿದ್ದರು. ಅಲ್ಲದೆ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ವಿಶ್ವಾಸವನ್ನು ಹೊಂದಿದ್ದರು. ಆದರೆ ಥರ್ಡ್ ಅಂಪೈರ್ ನಿರ್ಣಯ ಸಂಜುಗೆ ಮುಳವಾಯಿತು. ಮುಕೇಶ್ ಕುಮಾರ್ ಎಸೆತವನ್ನು ಸಂಜು ಲಾಂಗ್ ಆನ್ ಬೌಂಡರಿ ಮೇಲಿನಿಂದ ಸಿಕ್ಸರ್ ಬಾರಿಸಲು ಮುಂದಾಗಿದ್ದರು. ಆದರೆ ಅಲ್ಲಿದ್ದ ಶಾಯ್ ಹೋಪ್ ಹಿಡಿದ ಕ್ಯಾಚ್‌ಗೆ ಬಲಿಯಾದರು. ಇದನ್ನು ಆನ್ ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು.

ತ್ವರಿತ ನಿರ್ಧಾರ
ಥರ್ಡ್ ಅಂಪೈರ್ ಒಂದೇ ಆಂಗಲ್‌ನಿಂದ ನೋಡಿ ಔಟ್ ಎಂದು ನೀಡಿದರು. ಆದರೆ, ಸಂಜು ಸ್ಯಾಮ್ಸನ್ ರಿವ್ಯೂ ಕೊಡಬೇಕಿತ್ತು ಎನ್ನುತ್ತಾರೆ ಅಭಿಮಾನಿಗಳು. ಆಗ ರಿವ್ಯೂ ಆಗದೇ ಇದ್ದಿದ್ದರೆ ಮತ್ತೆ ಮತ್ತೆ ಚೆಕ್ ಮಾಡ್ತಿದ್ರು. ಕೇವಲ ಒಂದು ನಿಮಿಷದಲ್ಲಿ ಸಂಜು ವಿಕೆಟ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ವೈಡ್ ಬಾಲ್‌ಗಳ ವಿಮರ್ಶೆಯನ್ನು ಕನಿಷ್ಠ 3 ರಿಂದ 5 ನಿಮಿಷಗಳವರೆಗೆ ಪರಿಶೀಲಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಸಂಜುಗೆ ದಂಡ
ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದರಿಂದಾಗಿ ಸಂಜುಗೆ ಪಂದ್ಯ ಶುಲ್ಕದ ಶೇ.30ರಷ್ಟು ದಂಡ ವಿಧಿಸಲಾಗಿದೆ. ಸಂಜು ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ್ದಾರೆ. ಸಂಜು ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಮ್ಯಾಚ್ ರೆಫರಿಯ ತೀರ್ಮಾನವೇ ಅಂತಿಮ.
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಬಗ್ಗೆ ಸಾಕಷ್ಟು ವಿವಾದವಿತ್ತು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಥರ್ಡ್ ಅಂಪೈರ್ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಪಂದ್ಯದ ವೇಳೆ ದೆಹಲಿ ಪರ ಮುಖೇಶ್ ಕುಮಾರ್ 16ನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಈ ಓವರ್ ನಲ್ಲಿ ಸಂಜು ಔಟಾದರು.












Click it and Unblock the Notifications