Congress Manifesto 2023: ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ ರೀತಿಯ ಹೃದ್ರೋಗ ಆಸ್ಪತ್ರೆ

ಬೆಂಗಳೂರು ಮೇ 2: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಮಾತ್ರ ಬಾಕಿ ಇದ್ದು ಇಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಖಾಸಗಿ ಹೋಟೆಲ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕ ಬಿಡುಗಡೆ ಮಾಡಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಭಾಗಿಯಾಗಿದ್ದರು.

2023 ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಲವಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಭರವಸೆ ನೀಡಿದೆ. ಹಾಗಾದರೆ ರಾಜ್ಯದ ಜನತೆಗೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯಾವೆಲ್ಲಾ ಭರವಸೆಗಳನ್ನು ನೀಡಿದೆ. ಪ್ರಣಾಳಿಕೆಯಲ್ಲಿ ಏನಿದೆ ನೋಡೋಣ.

Congress Manifesto 2023: What are the promises made by Congress on education and health?

ಆರೋಗ್ಯ: ಸೇವೆಗಳು

* ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಖಾಲಿ ಹುದ್ದೆಗಳ ಭರ್ತಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

* ರಾಷ್ಟ್ರೀಯ ಸ್ವಾಸ್ಥ್ಯ ಜಮಾ ಯೋಜನೆಯಡಿಯಲ್ಲಿ ಹಮಾಲೆಗಳು, ಮೀನುಗಾರರು, ನೇಕಾರ ಸಮುದಾಯ, ಕಟ್ಟಡ ಕಾರ್ಮಿಕರು, ಮನೆಗೆಲದವರು ಹಾಗೂ ಇತರ ಅಸಂಘಟಿತ ಕ್ಷೇತ್ರಗಳಿಗೆ ವಿಸ್ತರಣೆ ಪ್ರತಿ ಜಿಲ್ಲೆಯಲ್ಲಿ ಮತ್ತು ನಗರಗಳಲ್ಲಿ ಖಾಸಗಿ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಸಜ್ಜಿತ ವೃದ್ಧಾಶ್ರಮಗಳ ಸ್ಥಾಪನೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ.

* ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ ರೀತಿಯ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಮಾದರಿಯ ಮನೋರೋಗ ಮತ್ತು ಮಿದುಳು ಚಿಕಿತ್ಸಾ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

* ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಮೇಲ್ದರ್ಜೆಗೇರಿಸಿ ಹೆರಿಗೆ ವಾರ್ಡ್‌, ಮಿನಿ ಶಸ್ತ್ರಚಿಕಿತ್ಸಾ ಕೊಠಡಿ ಸಹಿತ 20 ಹಾಸಿಗೆಗಳು ಇರುವಂತೆ ನೋಡಿಕೊಳ್ಳುವುದು ಪ್ರತಿ ತಾಲೂಕು ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸುವುದು ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಉಚಿತ ಡಯಾಲಿಸಿಸ್

Congress Manifesto 2023: What are the promises made by Congress on education and health?

* ಪ್ರತಿ 100 ಕಿ.ಮೀ.ಗೆ ಒಂದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ವಸಜ್ಜಿತ ಕ್ರೋಮಾ ಕೇಂದ್ರ ಸ್ಥಾಪನೆ

* ಡಾ. ಪುನೀತ್ ರಾಜಕುಮಾರ್ ಹೃದಯ ಆರೋಗ್ಯ ಯೋಜನೆ - ವೈದ್ಯರು, ಆಸ್ಪತ್ರೆಗಳು, ಡಿಫ್ರಿಲೇಟರ್ (ಎ.ಇ.ಡಿ) ಗಳನ್ನು ಕೊಂಡುಕೊಳ್ಳಲು ಸಹಾಯ ಧನ ಯೋಜನೆ,

ಇನ್ನೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶಿಕ್ಷಣ ಕಾಂಗ್ರೆಸ್ ಹೆಚ್ಚಿನ ಮಹತ್ವವನ್ನು ನೀಡಿದೆ. ರಾಜ್ಯದ ಜನತೆಗೆ ಏನೆಲ್ಲಾ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.

ಶಿಕ್ಷಣ ಸೇವೆಗಳು

* ಸರಕಾರಿ ಮತ್ತು ಅನುದಾನಿತ ಶಾಲೆ/ಕಾಲೇಜುಗಳಲ್ಲಿನ, ಖಾಲಿ ಇರುವ ಎಲ್ಲಾ ಶಿಕ್ಷಕರ ಮತ್ತು ಬೋಧಕೇತರರ ಹುದ್ದೆಗಳಿಗೆ ಒಂದು ವರ್ಷದೊಳಗೆ ನೇಮಕಾತಿ

* ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ

* ಭಾಜಪ ಸರಕಾರ ಪಠ್ಯಪುಸ್ತಕಗಳ ವಿಷಯಗಳನ್ನು ವಿಕೃತಗೊಳಿಸಿತ್ತು. ಅದನ್ನು ಸರಿಪಡಿಸಿ ಕುವೆಂಪು, ಬಸವಣ್ಣ, ಆದಿಕವಿ ಪಂಪ ಮತ್ತು ಸಾಂವಿಧಾನಿಕ ನಿರ್ದೇಶನವಾದ ವೈಜ್ಞಾನಿಕ ಮನೋಭಾವವನ್ನು ಮರ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕ್ರಮ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಂಘಟನೆಗಳ ನಿರ್ವಹಣೆಯಲ್ಲಿರುವ, 2012ಕ್ಕಿಂತ ಮೊದಲು ಆರಂಭಿಸಿದ ಪಿಯು ತನಕದ ಶಿಕ್ಷಣ ಸಂಸ್ಥೆಗಳನ್ನು ಅನುದಾನ ವ್ಯಾಪ್ತಿಗೆ ತರುವುದು

* ರಾಜ್ಯದ ಎಲ್ಲಾ ಬಗೆಯ ಸ್ಥಾಲರ್‌ ಶಿಪ್‌ಗಳನ್ನು ಒಂದೇ ವ್ಯವಸ್ಥೆಯಡಿಯಲ್ಲಿ ತಂದು ಎಲ್ಲಾ ವಿದ್ಯಾರ್ಥಿಗಳಿಗೂ ಕಾಲಮಿತಿಯೊಳಗೆ ವಿದ್ಯಾರ್ಥಿವೇತನ ವಿತರಿಸಲು ರೂ 2,000 ಮೂಲನಿಧಿಯೊಂದಿಗೆ ಕರ್ನಾಟಕ ರಾಜ್ಯ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪನೆ

* ಆರ್‌ಪಿಇ ಅಡಿಯಲ್ಲಿ ಶಾಲೆಗಳ ಪ್ರವೇಶಾತಿಗೆ ಇರುವ ಆದಾಯ ಮಿತಿಯನ್ನು ರೂ ರೂ.1 ಲಕ್ಷಕ್ಕೆ ಹೆಚ್ಚಳ ಅನುದಾನರಹಿತ ಕರ್ದು, ತುಳು ಮತ್ತು ಇತರ ಭಾಷಾ ಶಾಲೆಗಳ ಸಹಿತ ಎಲ್ಲಾ ಶಾಲೆಗಳ ಕನ್ನಡ ಶಿಕ್ಷಕರ ನೇಮಕ

* ವರ್ಷಕ್ಕೆ 2,500 ಪರಕಾರೀ ಶಾಲೆಗಳನ್ನು ಪ್ಯಾರ್ಟ್ ಶಾಲೆಗಳಾಗಿ ಉನ್ನತೀಕರಣ

* 6ನೇ ತರಗತಿಯಿಂದ 12ನೇ ತರಗುವರೆಗೆ ಸರಕಾರಿ ಶಾಲೆಗಳಲ್ಲಿ ಓದಿ ಸ್ಪರ್ಧಾತ್ಮಕ ಪರ ಗಳ ಮೂಲಕ ಎಂಇಜಿಎಫ್ / ಐಎಂ / ಐಐಎಂ) ಎಂಜನಿಯರಿಂಗ್ ಪ್ರವೇಶ ಪಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಶೇ.10ರಷ್ಟು ಮಂದಿಗೆ ಪ್ರತಿಭೆಯ ಆಧಾರದ ಮೇಲೆ ಶುಲ್ಕ ಪಾವತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+