ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಕ್ರಿಕೆಟ್ ಅಂಗಳದಲ್ಲಿ ಕಾಫಿನಾಡು ಯುವಕನ ಕಮಾಲ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 25: ಅಮೆರಿಕದ ಕ್ರಿಕೆಟ್ ಅಂಗಳದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಅಪ್ಪಟ ಮಲೆನಾಡು ಭಾಗದ ಯುವಕ ನೋಸ್ತುಶ್ ತನ್ನ ಮಿಂಚಿನ ಆಟದ ಮೂಲಕ ಸಂಚಲನ ಮೂಡಿಸುತ್ತಿದ್ದಾನೆ.

ಕ್ರಿಕೆಟ್ ಇವತ್ತಿನ ಯುವಕರ ನೆಚ್ಚಿನ ಆಟಗಳಲ್ಲಿ ಒಂದಾಗಿದ್ದು, ಬಹಳಷ್ಟು ಮಂದಿ ನಮ್ಮ ಮಕ್ಕಳು ಫೇಮಸ್ ಕ್ರಿಕೆಟರ್ಸ್ ಆಗಬೇಕು ಎಂಬ ಹಂಬಲವನ್ನು ಹೊಂದಿರುವ ಕಾಲವಿದು. ಅದೇ ರೀತಿ ಯುವಕರು ಅಷ್ಟೇ ಒಮ್ಮೆ ರಾಜ್ಯ, ಅಂತರಾಷ್ಟ್ರೀಯ ತಂಡಕ್ಕೆ ಆಡಬೇಕು ಅಂತಾ ವರ್ಷಗಟ್ಟಲೇ ಮೈದಾನದಲ್ಲಿ ಬೆವರಿಳಿಸುತ್ತಲೇ ಇರುತ್ತಾರೆ. ಇಂತಹ ಯುವಕರ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಯುವಕನೊಬ್ಬ ಸೇರ್ಪಡೆಗೊಂಡು ಆ ಸಾಧನೆಯನ್ನು ಮಾಡಿದ್ದಾನೆ, ಅದು ದೂರದ ಅಮೆರಿಕದಲ್ಲಿ .

 ಭಾರತದ ಪರ ಆಡುವ ಹಂಬಲ ಅಮೆರಿಕವರೆಗೆ

ಭಾರತದ ಪರ ಆಡುವ ಹಂಬಲ ಅಮೆರಿಕವರೆಗೆ

ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ನೋಸ್ತುಶ್, ಪ್ರದೀಪ್ ಕೆಂಜಿಗೆ ಮತ್ತು ಶೃತಿ ಕೀರ್ತಿ ದಂಪತಿಯ ಪುತ್ರನಾಗಿದ್ದು, ತನ್ನ ವಿದ್ಯಾಭ್ಯಾಸದ ಜೊತೆ ಜೊತೆಗೆ ಕ್ರಿಕೆಟ್ ಅನ್ನು ಸಹ ಪ್ರೀತಿಸುತ್ತಾ ಅದರಲ್ಲಿ ಸಾಧಿಸಲು ಬೇಕಾದ ಪ್ರಯತ್ನ ಮಾಡುತ್ತಲೇ ಸಾಗಿದ್ದಾನೆ. ಈಗ ಅಮೆರಿಕ ಕ್ರಿಕೆಟ್ ತಂಡದ ಸದಸ್ಯನಾಗಿದ್ದಾನೆ. ಭಾರತ ತಂಡದಲ್ಲಿ ಆಡುವ ಹಂಬಲದೊಂದಿಗೆ ಕ್ರಿಕೆಟ್ ಅಂಗಳಕ್ಕೆ ಬಂದ ಹುಡುಗ ಅವಕಾಶಗಳ ಕೊರತೆಯಿಂದ ಅಮೆರಿಕ ತಂಡಕ್ಕೆ ಆಡುವ ಮೂಲಕ ಕಾಫಿನಾಡಿಗೆ ಕೀರ್ತಿ ತಂದಿದ್ದಾನೆ.

 ನಿರಂತರ ಅಭ್ಯಾಸದಿಂದ ಸಾಧನೆ

ನಿರಂತರ ಅಭ್ಯಾಸದಿಂದ ಸಾಧನೆ

ಎಸ್‍ಎಸ್‍ಎಲ್‌ಸಿವರೆಗೆ ಊಟಿಯಲ್ಲಿ ಅಭ್ಯಾಸ ಮಾಡಿರುವ ನೋಸ್ತುಶ್, ಜಿಲ್ಲಾ ಮಟ್ಟದ ಪಂದ್ಯಗಳನ್ನು ಆಡುತ್ತಾ ಬಳಿಕ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿದ್ದಾನೆ. 17 ವರ್ಷದ ವಯೋಮಾನದವರ ತಂಡದಲ್ಲಿ ಹಾಗೂ 19 ವರ್ಷ ವಯೋಮಾನದವರ ತಂಡದಲ್ಲಿ ಬೆಂಗಳೂರಿನ ಅಂಗಳದಲ್ಲಿಯೂ ಆಟವಾಡಿರುವ ಇವರು, ಬೇರೆ ಬೇರೆ ಕ್ಲಬ್ ಪರ ಆಡುವಾಗ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆಯೂ ಸಹ ಕ್ರಿಕೆಟ್ ಆಡಿರುವುದು ಹೆಮ್ಮೆಯ ವಿಷಯ.

 ತವರಲ್ಲಿ ಅಂತರಾಷ್ಟ್ರೀಯ ಪಂದ್ಯ ಆಡುವ ಹಂಬಲ

ತವರಲ್ಲಿ ಅಂತರಾಷ್ಟ್ರೀಯ ಪಂದ್ಯ ಆಡುವ ಹಂಬಲ

ಬಾಲ್ಯದಿಂದಲೂ ಕ್ರಿಕಟ್ ಅನ್ನು ಉಸಿರಾಗಿ ಸ್ವೀಕರಿಸಿರುವ ನೋಸ್ತುಶ್, ಈಗಾಗಲೇ ಅಮೆರಿಕ ಪರವಾಗಿ 60ಕ್ಕೂ ಹೆಚ್ಚು ಪಂದ್ಯಗಳನ್ನು ವಿವಿಧ ದೇಶಗಳ ವಿರುದ್ಧ ಆಡಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಅಮೆರಿಕ ತಂಡ ಭಾಗವಹಿಸಲು ಮುಂದಿನ ಜುಲೈನಲ್ಲಿ ಕ್ವಾಲಿಫೈಯರ್ ಪಂದ್ಯಗಳನ್ನು ಆಡುತ್ತಿದೆ. ಇಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಭಾಗವಹಿಸಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಹಂಬಲವನ್ನು ನೋಸ್ತುಶ್ ಹೊಂದಿದ್ದು, ಈ ನಿಟ್ಟಿನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

 ತವರು ನೆಲದ ಬಿರುಬಿಸಿಲಿನಲ್ಲಿ ಅಭ್ಯಾಸ

ತವರು ನೆಲದ ಬಿರುಬಿಸಿಲಿನಲ್ಲಿ ಅಭ್ಯಾಸ

ಯುಎಇನಲ್ಲಿ ನಿರಂತರ ಪಂದ್ಯಗಳನ್ನು ಆಡಿ ಸದ್ಯ ತವರಿಗೆ ಬಂದಿರುವ ನೋಸ್ತುಶ್, ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಬಿರುಬಿಸಿಲಿನಲ್ಲಿ ತನ್ನ ಸ್ನೇಹಿತರ ಜೊತೆಗೆ ಅಭ್ಯಾಸ ಮಾಡಿದರು. ಈ ವೇಳೆ ಯುವಕರಿಗೆ ಕೆಲ ಕ್ರಿಕೆಟ್ ಟಿಪ್ಸ್‍ಗಳನ್ನು ಸಹ ನೀಡುತ್ತಾ, ರೆಸ್ಟ್ ಮಾಡುವ ಮೂಡ್‍ನಲ್ಲಿ ತವರಿಗೆ ಬಂದರೂ ಇಲ್ಲೂ ಸಹ ಬ್ಯಾಟ್ ಹಿಡಿದು, ಬೌಲ್ ಮಾಡುತ್ತಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾದರು.

 ಸ್ಪೀನ್ ಬೌಲಿಂಗ್ ಜೊತೆ ಬ್ಯಾಟಿಂಗ್ ಅಸ್ತ್ರ

ಸ್ಪೀನ್ ಬೌಲಿಂಗ್ ಜೊತೆ ಬ್ಯಾಟಿಂಗ್ ಅಸ್ತ್ರ

ನೋಸ್ತುಶ್ ಅಮೆರಿಕ ತಂಡದ ಸ್ಪಿನ್ ಬೌಲಿಂಗ್ ಅಸ್ತ್ರದ ಜೊತೆಗೆ ಬ್ಯಾಟಿಂಗ್ ಆಡುವ ಮೂಲಕ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಈವರೆಗೆ ಯುಎಇ ತಂಡಕ್ಕೆ 60 ಪಂದ್ಯಗಳನ್ನಾಡಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಒಮ್ಮೆ ಪಡೆದಿರುವ ಇವರು ಬೌಲಿಂಗ್‌ನಲ್ಲಿ ಕಮಾಲ್ ಮಾಡುವ ಜೊತೆಗೆ ಉತ್ತಮ ಫಿಲ್ಡರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

 ಜರ್ಸಿ ಮೇಲೆ ತನ್ನೂರ ಹೆಸರು

ಜರ್ಸಿ ಮೇಲೆ ತನ್ನೂರ ಹೆಸರು

ಕಳೆದ ಹಲವು ವರ್ಷಗಳಿಂದ ಅಮೆರಿಕಾ ಕ್ರಿಕೆಟ್ ತಂಡಕ್ಕೆ ಆಡುತ್ತಿರುವ ನೋಸ್ತುಶ್, ತನ್ನೂರಿನ ಹೆಸರನ್ನು ಅಮೆರಿಕದ ಉದ್ದಗಲಕ್ಕೂ ಪಸರಿಸಿದ್ದಾರೆ. ತನ್ನೂರಿನ ಪ್ರೀತಿಯಿಂದ ಹಾಗೂ ಹುಟ್ಟೂರಿನ ಋಣ ತೀರಿಸುವ ಸಲುವಾಗಿ ತನ್ನ ಹೆಸರಿನ ಮುಂದೆ ತನ್ನೂರು ಕೆಂಜಿಗೆ ಹೆರಿಟ್ಟುಕೊಂಡಿರುವ ಇವರು ತಾವು ಆಡುವಾಗ ಧರಿಸುವ ಜರ್ಸಿಯ ಮೇಲೂ ಸಹ ಕೆಂಜಿಗೆ ಎಂದು ಹಾಕಿಕೊಳ್ಳುವ ಮೂಲಕ ತನ್ನೂರಿನ ಹೆಸರನ್ನು ಜಗತ್ತಿನೆಲ್ಲೆಡೆ ಪಸರಿಸುತ್ತಿದ್ದಾರೆ.

Recommended Video

BCCI ಕಾಂಟ್ರಾಕ್ಟ್ ನಲ್ಲಿ ರಾಹುಲ್ ಪಂತ್ ಗೆ ಬಂಪರ್ ಆದ್ರೆ ಪೂಜಾರಾ ರಹಾನೆಗೆ ಹಿಂಬಡ್ತಿ | Oneindia Kannada

English summary
Nosthush, a young man from Mudigere Taluk in Chikkamagaluru district, is playing for the US team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X