ಬೆಂಗಳೂರು ತಂಡ ಮಾರಾಟ ಬಗ್ಗೆ, 2026 ಐಪಿಎಲ್‌ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಅಂತಾ... Bengaluru Team RCB
ಆರ್‌ಸಿಬಿ ಬೆಂಗಳೂರು ತಂಡದ ಪರವಾಗಿ 7,00,00,000 ಕನ್ನಡಿಗರು ಸದಾ ನಿಲ್ಲುತ್ತಾರೆ, ಬೆಂಗಳೂರು ತಂಡ ಗೆಲ್ಲಬೇಕು ಅಂತಾ ಹರಕೆ ಹೊತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಆಸೆ ಕೂಡ 2025ರ ಐಪಿಎಲ್ ಟೂರ್ನಿಯಲ್ಲಿ ಈಡೇರಿತ್ತು. ಹೀಗಾಗಿ ಆರ್‌ಸಿಬಿ ಬೆಂಗಳೂರು ತಂಡದ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಮುಂದಿನ ಐಪಿಎಲ್ ಟೂರ್ನಿ ಸಾಕಷ್ಟು ಗಮನ ಸೆಳೆದು ಕೋಟಿ ಕೋಟಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಬೆಂಗಳೂರು ತಂಡ ಮಾರಾಟ, 2026 ಐಪಿಎಲ್‌ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಅಂತಾ...
ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಆರ್‌ಸಿಬಿ, ಆರ್‌ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ರೀತಿ ಬೆಂಗಳೂರು ತಂಡ ಅಬ್ಬರಿಸಿ 2025ರ ಸಾಲಿನ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ವಿರಾಟ್ ಕೊಹ್ಲಿ ಫ್ಯಾನ್ಸ್ ಮಾತ್ರವಲ್ಲ ಇಡೀ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ಬೆಂಗಳೂರು ತಂಡ ಆರ್‌ಸಿಬಿ ಗೆದ್ದು ಬೀಗಿದ್ದು ಭಾರಿ ದೊಡ್ಡ ಖುಷಿ ಕೂಡ ನೀಡಿತ್ತು. ಅಲ್ಲದೆ ರಸ್ತೆ ರಸ್ತೆಗಳಲ್ಲೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡುತ್ತಾ ಪ್ರಪಂಚದ ಗಮನ ಸೆಳೆದಿದ್ದರು. ಈ ಮೂಲಕ ತಮ್ಮ ಖುಷಿ ಹಂಚಿಕೊಂಡರು, ಆದರೆ ಇದೀಗ ದಿಢೀರ್ ಆಘಾತಕಾರಿ ಸುದ್ದಿ ಹೊರಬಿದ್ದು ಭಯ ಹುಟ್ಟಿಸಿದೆ...

ಬೆಂಗಳೂರು ತಂಡ ಮಾರಾಟದ ಬಗ್ಗೆ...
ಐಪಿಎಲ್ ಅಂದ್ರೆ ಸಾಕು ಕೋಟಿ, ಕೋಟಿ ರೂಪಾಯಿ ಅನ್ನೋದನ್ನ ಕೇಳಿ ನಿಮಗೂ ಸಾಕಾಗಿ ಹೋಗಿದೆ ಅನಿಸುತ್ತೆ. ಏನಪ್ಪಾ ಕೋಟಿ ರೂಪಾಯಿಗೆ ಬೆಲೆಯೇ ಇಲ್ವಾ? ಅಂತಾ ಕೂಡ ನಿಮ್ಮ ಮನಸ್ಸಲ್ಲಿ ಬಂದೇ ಬಂದಿರುತ್ತೆ. ಆದರೆ ಆಟಗಾರರನ್ನು ಖರೀದಿ ಮಾಡಲು, 10 ಕೋಟಿ & 20 ಕೋಟಿ ಅಂತಾ ಸುರಿಯುವ ಐಪಿಎಲ್ ತಂಡಗಳ ಮಾಲೀಕರು ಅಷ್ಟೇ ಹಣವನ್ನು ದುಡಿಯುತ್ತಾರೆ. ಹೀಗಿದ್ದಾಗ ಸಾವಿರಾರು ಕೋಟಿ ರೂಪಾಯಿಗೆ ಬೆಲೆ ಬಾಳುವ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಮಾಡಲು ದಿಢೀರ್ ನಿರ್ಧಾರ?
ಬೆಂಗಳೂರು ಬಿಟ್ಟು ಹೋಗಲಿದ್ದಾರಾ ವಿರಾಟ್...
ಹೌದು, ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆಗಲಿದೆ ಅನ್ನೋ ಸುದ್ದಿ ಇದೀಗ ಭಾರಿ ದೊಡ್ಡದಾಗಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ದಿಢೀರ್ ಆರ್‌ಸಿಬಿ ತಂಡದ ಬಗ್ಗೆ ಪೋಸ್ಟ್ ಒಂದನ್ನ ಮಾಡಿದ್ದು ಬಿರುಗಾಳಿ ಎಬ್ಬಿಸಿದೆ. ಇಂತಹ ಸಮಯದಲ್ಲೇ ಮತ್ತೊಂದು ಸುದ್ದಿ ಕೂಡ ಹಬ್ಬಿದ್ದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆಗುವ ಜೊತೆಯಲ್ಲೇ ಈಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಹೃದಯ ನಿಂತು ಹೋಗುವ ಸುದ್ದಿ ಓಡಾಡ್ತಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟವಾಗುವುದು ನಿಜವೇ ಆಗಿದ್ದರೆ, ಆಗ 2026 ಐಪಿಎಲ್‌ಗೆ ಬೆಂಗಳೂರು ಬಿಟ್ಟು ದೆಹಲಿಗೆ ವಿರಾಟ್ ಕೊಹ್ಲಿ ಹೋಗಲಿದ್ದಾರೆ ಅಂತಾ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯು ಹಬ್ಬಿ, ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ, ಹೀಗಾಗಿ ಇದನ್ನು ಗಾಳಿ ಸುದ್ದಿ ಎನ್ನಲಾಗುತ್ತಿದೆ...












Click it and Unblock the Notifications