Bengaluru Bulls: ತೆಲುಗು ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ
ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಚೆನ್ನೈನ ಜವಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಬೆಂಗಳೂರು ಬುಲ್ಸ್ ಗೆದ್ದು ಬೀಗಿತು.
ತೆಲುಗು ಟೈಟನ್ಸ್ ವಿರುದ್ಧ ಪಂದ್ಯದಲ್ಲಿ 33-31 ಅಂಕಗಳಿಂದ ಪಂದ್ಯವನ್ನು ಗೆದ್ದ ಬೆಂಗಳೂರು ಬುಲ್ಸ್ ಆ ಆವೃತ್ತಿಯ ಮೂರನೇ ಗೆಲುವು ಸಾಧಿಸಿತು. ಆರಂಭದಿಂದ ಕೂಡ ಉಭಯ ತಂಡಗಳು ಗೆಲುವಿಗಾಗಿ ರೋಚಕ ಸೆಣೆಸಾಟ ನಡೆಸಿದವು.

ಆರಂಭದ ಕ್ಷಣಗಳಿಂದ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿತು. ಮಧ್ಯಂತರದ ವೇಳೆಗೆ ಬುಲ್ಸ್ 16-12 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯಾರ್ಧದಲ್ಲಿ ಹೋರಾಟ ಕೊಟ್ಟ ತೆಲುಗು ಟೈಟನ್ಸ್ ಸ್ಕೋರ್ ಸಮಬಲಗೊಳಿಸಲು ಹೋರಾಡಿತು.
ಖಂಡೋಲಾ, ಭರತ್ ಮಿಂಚಿನ ದಾಳಿ
ಬುಲ್ಸ್ ಪರ ಮಿಂಚಿದ ವಿಕಾಶ್ ಖಂಡೋಲಾ, ಭರತ್ ಮತ್ತು ನೀರಜ್ ನರ್‍ವಾಲ್ ಅತ್ಯುತ್ತಮ ದಾಳಿ ಸಂಘಟಿಸಿದರು. ಆರಂಭದಿಂದಲೂ ಭರತ್ ಉತ್ತಮ ಪ್ರದರ್ಶನ ನೀಡಿದರು. ಭರತ್ 6 ರೈಡಿಂಗ್ ಅಂಕಗಳನ್ನು ಪಡೆದರೆ, ವಿಖಾಶ್ ಖಂಡೋಲಾ ಮತ್ತು ನೀರಜ್ ನರ್‍ವಾಲ್ ತಲಾ 5 ಅಂಕ ಪಡೆದು ಮಿಂಚಿದರು.
ಸುರ್ಜಿತ್ ಸಿಂಗ್ ಅಮೋಘ ರಕ್ಷಣಾ ಕೋಟೆ ಕಟ್ಟುವ ಮೂಲಕ ತೆಲುವು ಟೈಟನ್ಸ್ ಆಟಗಾರರನ್ನು ಕಟ್ಟಿ ಹಾಕಿದರು. ಡಿಫೆಂಡಿಂಗ್‌ನಲ್ಲಿ ಬರೋಬ್ಬರಿ 7 ಅಂಕಗಳನ್ನು ಪಡೆದು ಗಮನ ಸೆಳೆದರು.
ತೆಲುಗು ಟೈಟನ್ಸ್ ತಂಡದ ನಾಯಕ ಪವನ್ ಶೆರಾವತ್ ರೈಡಿಂಗ್‌ನಲ್ಲಿ ಮಿಂಚಿದರೂ ತಮ್ಮ ತಂಡದ ಸೋಲು ತಪ್ಪಿಸಲು ಆಗಲಿಲ್ಲ. ಅವರು ರೈಡಿಂಗ್‌ನಲ್ಲಿ ಬರೋಬ್ಬರಿ 13 ಅಂಕಗಳನ್ನು ಪಡೆದರು. ಆದರೆ ಡಿಫೆಂಡಿಂಗ್‌ನಲ್ಲಿ ಎಡವಿದ್ದು ತೆಲುಗು ಟೈಟನ್ಸ್ ಸೋಲಿಗೆ ಕಾರಣವಾಯಿತು.
ಪಾಯಿಂಟ್ ಪಟ್ಟಿ ಹೇಗಿದೆ?
ಪ್ರೋ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಪುಣೇರಿ ಪಲ್ತಾನ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 6 ಪಂದ್ಯಗಳನ್ನಾಡಿರುವ ಪಲ್ತಾನ್ 5 ಪಂದ್ಯಗಳನ್ನು ಗೆದ್ದು, ಒಂದು ಪಂದ್ಯದಲ್ಲಿ ಸೋತಿದ್ದು 26 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಜೈಪುರ ಪಿಂಕ್ ಪ್ಯಾಂಥರ್ಸ್ 2ನೇ ಸ್ಥಾನದಲ್ಲಿದ್ದರೆ, ಗುಜರಾತ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಬುಲ್ಸ್ ತಂಡ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಸದ್ಯ 7ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಬುಲ್ಸ್ ಗೆದ್ದಿದ್ದು 19 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿತ ಕಂಡಿದೆ.












Click it and Unblock the Notifications