Breaking News: ಗಂಗೂಲಿ ಸ್ಥಾನಕ್ಕೆ ಬಿನ್ನಿ, ಬಿಸಿಸಿಐಗೆ ಹೊಸ ಬಾಸ್?
ಮುಂಬೈ, ಅ.7: ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಕರ್ನಾಟಕದ ರೋಜರ್ ಬಿನ್ನಿ ಮುಂಚೂಣಿಯಲ್ಲಿದ್ದಾರೆ ಎಂಬ ಸುದ್ದಿ ಬಂದಿದೆ. ಬಿಸಿಸಿಐ ಮುಂದಿನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಸ್ಥಾನಕ್ಕೆ ಭಾರತದ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ರೋಜರ್ ಬಿನ್ನಿ ಆಯ್ಕೆ ಬಹುತೇಕ ಖಚಿತ ಎಂದು ಎಎನ್ಐ ವರದಿ ಮಾಡಿದೆ.
ಬಿಸಿಸಿಐ ಆಡಳಿತ ಮಂಡಳಿ ಬದಲಾವಣೆಗೆ ನಾಮಪತ್ರ ಸಲ್ಲಿಕೆ ಅ.11 ಹಾಗೂ 12ರಂದು ನಡೆಯಲಿದ್ದು, ಶೀಘ್ರವೇ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಲಿದೆ. ಬಿಸಿಸಿಐನ ಎಲ್ಲಾ ಹುದ್ದೆಗಳಿಗೆ ಮರು ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
Former India cricketer Roger Binny frontrunner to replace Sourav Ganguly as next BCCI President, official decision to be taken soon: Sources
— ANI (@ANI) October 7, 2022
(file photos) pic.twitter.com/iOE52UYxCt
ನಾಮಪತ್ರಗಳ ವಿವರ:
ಅಭ್ಯರ್ಥಿಗಳು ಅಕ್ಟೋಬರ್ 11 ಮತ್ತು 12 ರಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕು, ಅದರ ನಂತರ ಅಕ್ಟೋಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಅ.14 ರ ವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು.

ಇಬ್ಬರಿಗಿಂತ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದರೆ, ಅಕ್ಟೋಬರ್ 18 ರಂದು ಮತದಾನ ನಡೆಯಲಿದೆ. ಮೂಲಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧ್ಯಕ್ಷರಾಗುವ ರೇಸ್‌ನಲ್ಲಿ ಇಲ್ಲ, ಆದರೆ ಅವರು ಅದೇ ಹುದ್ದೆಗೆ ಅಂದರೆ ಕಾರ್ಯದರ್ಶಿಗೆ ಮತ್ತೆ ಸ್ಪರ್ಧಿಸಲಿದ್ದಾರೆ.












Click it and Unblock the Notifications