India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asia Cup 2022: ಆಗಸ್ಟ್ 8ರಂದು ಭಾರತ ತಂಡದ ಆಟಗಾರರ ಪಟ್ಟಿ ಬಿಡುಗಡೆ ಸಾಧ್ಯತೆ

|
Google Oneindia Kannada News

ಬಹುನೀರೀಕ್ಷಿತ ಏಷ್ಯಾಕಪ್ 2022 ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಏಷ್ಯಾದ ಪ್ರಮುಖ ಆರು ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ, ಈಗಾಗಲೇ ಹಲವು ದೇಶಗಳು ಏಷ್ಯಾಕಪ್‌ಗೆ ತಂಡವನ್ನು ಹೆಸರಿಸಿವೆ. ಆದರೆ ಭಾರತ ತಂಡದ ಆಟಗಾರರ ಪಟ್ಟಿ ಮಾತ್ರ ಇನ್ನೂ ಅಂತಿಮವಾಗಿಲ್ಲ. ಬಿಸಿಸಿಐ ಸೋಮವಾರ ಆಟಗಾರರ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಗೆ ತೆರಳಲು 15 ಸದಸ್ಯರ ತಂಡವನ್ನು ಆಗಸ್ಟ್ 8ರಂದು ಬಿಸಿಸಿಐ ಘೋಷಣೆ ಮಾಡುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಬಹುತೇಕ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಏಷ್ಯಾಕಪ್‌ನಲ್ಲಿ ಭಾಗವಹಿಸುವ ತಂಡದಲ್ಲಿ ಸ್ಥಾನ ಪಡೆಯಲು ಕಾಯುತ್ತಿದ್ದಾರೆ. ಆದರೆ ಯಾವೆಲ್ಲಾ ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕಲಿದೆ ಎನ್ನುವುದು ಅಧಿಕೃತ ಘೋಷಣೆಯ ನಂತರವಷ್ಟೇ ತಿಳಿಯಲಿದೆ.

ಪಾಕಿಸ್ತಾನದ ಇಮ್ರಾನ್ ಖಾನ್‌ಗೆ ಫಂಡಿಂಗ್ ಮಾಡಿದ ರೋಮಿತಾ ಶೆಟ್ಟಿ ಯಾರು?ಪಾಕಿಸ್ತಾನದ ಇಮ್ರಾನ್ ಖಾನ್‌ಗೆ ಫಂಡಿಂಗ್ ಮಾಡಿದ ರೋಮಿತಾ ಶೆಟ್ಟಿ ಯಾರು?

ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಸರಣಿಯಲ್ಲಿ ಉತ್ತಮವಾಗಿ ಆಡಿದ ಆಟಗಾರರೇ ಬಹುತೇಕ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ತಂಡದಲ್ಲಿ ಅನುಭವಿಗಳು ಮತ್ತು ಹೊಸ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

 ಆರಂಭಿಕ ಜೋಡಿ ರೋಹಿತ್-ರಾಹುಲ್

ಆರಂಭಿಕ ಜೋಡಿ ರೋಹಿತ್-ರಾಹುಲ್

ಭಾರತ ತಂಡಕ್ಕೆ ಕೆ.ಎಲ್‌.ರಾಹುಲ್ ವಾಪಸಾಗುವುದು ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಜೊತೆ ಕನ್ನಡಿಗ ಕೆ.ಎಲ್‌.ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ನಂತರದ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಹೂಡಾ ನಡುವೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಇಬ್ಬರಲ್ಲಿ ಒಬ್ಬರು ಮಾತ್ರ ಏಷ್ಯಾ ಕಪ್‌ಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ದೊರೆತ ಸೀಮಿತ ಅವಕಾಶಗಳಲ್ಲೇ ದೀಪಕ್ ಹೂಡಾ ಉತ್ತಮ ಸಾಧನೆ ಮಾಡಿದ್ದು, ಆಯ್ಕೆ ಸಮಿತಿ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ನೋಡಬೇಕಿದೆ.

ಫಿನಿಶರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ನಂತರದ ಸ್ಥಾನದಲ್ಲಿದ್ದರೆ, ದಿನೇಶ್ ಕಾರ್ತಿಕ್ ಕೂಡ ಅವಕಾಶ ಪಡೆಯುವ ಸಾಧ್ಯತೆ ಇದೆ.

 ಸ್ಪಿನ್ ವಿಭಾಗದಲ್ಲಿ ಆಯ್ಕೆಗಾಗಿ ಪೈಪೋಟಿ

ಸ್ಪಿನ್ ವಿಭಾಗದಲ್ಲಿ ಆಯ್ಕೆಗಾಗಿ ಪೈಪೋಟಿ

ಬ್ಯಾಟರ್‍‌, ಆಲ್‌ ರೌಂಡರ್ ವಿಭಾಗದಲ್ಲಿ ಆಯ್ಕೆಯಲ್ಲಿ ಅಷ್ಟೊಂದು ಗೊಂದಲ ಇಲ್ಲದಿದ್ದರೂ, ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಮಾತ್ರ ಭಾರಿ ಪೈಪೋಟಿ ಇದೆ. ಆಲ್‌ ರೌಂಡರ್ ರವೀಂದ್ರ ಜಡೇಜಾ ಆಯ್ಕೆ ಖಚಿತವಾಗಿದ್ದು, ಇತ್ತೀಚಿನ ಟಿ20 ಪಂದ್ಯಗಳಲ್ಲಿ ಮಿಂಚಿರುವ ಯುಜ್ವೇಂದ್ರ ಚಹಾಲ್ ಕೂಡ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಯುಎಇಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯುತ್ತಿರುವುದರಿಂದ ತಂಡಕ್ಕೆ ಮತ್ತೊಬ್ಬ ಸ್ಪಿನ್ನರ್ ಅಗತ್ಯವಿದ್ದು, ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್ ನಡುವೆ ಆಯ್ಕೆಗಾಗಿ ಪೈಪೋಟಿ ನಡೆಯಲಿದೆ.

 ಭಾರತದ ವೇಗದ ಬೌಲಿಂಗ್ ವಿಭಾಗ

ಭಾರತದ ವೇಗದ ಬೌಲಿಂಗ್ ವಿಭಾಗ

ಭಾರತದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಆಯ್ಕೆ ಖಚಿತವಾಗಿದೆ. ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ ಕೂಡ ಅರ್ಹತೆಯ ಆಧಾರದ ಮೇಲೆ ‍ತಂಡ ಸೇರಲಿದ್ದಾರೆ ಎನ್ನಲಾಗಿದೆ.

ಆದರೆ ಇನ್ನೊಬ್ಬ ವೇಗಿಯ ಸ್ಥಾನಕ್ಕೆ ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡ ಸೇರುವ ಅವಕಾಶವಿದೆ. ಲೆಕ್ಕಾಚಾರಗಳ ಪ್ರಕಾರ ಎಡಗೈ ವೇಗಿಗೆ ಆಯ್ಕೆ ಸಮಿತಿ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

 ಫಾರ್ಮ್ ಕಂಡುಕೊಳ್ಳಬೇಕಿದೆ ವಿರಾಟ್ ಕೊಹ್ಲಿ

ಫಾರ್ಮ್ ಕಂಡುಕೊಳ್ಳಬೇಕಿದೆ ವಿರಾಟ್ ಕೊಹ್ಲಿ

ವಿರಾಟ್‌ ಕೊಹ್ಲಿ ಫಾರ್ಮ್ ಸದ್ಯ ಆಯ್ಕೆದಾರರ ಸಮಿತಿಗೆ ದೊಡ್ಡ ತಲೆನೋವಾಗಿದೆ. ಆದರೂ ಅನುಭವಿ ವಿರಾಟ್‌ ಕೊಹ್ಲಿಗೆ ಅವಕಾಶ ನೀಡುವುದು ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಗೊಂಡಿದ್ದರು. ಆದರೆ, ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಅವರು ಗುಣಮುಖರಾಗುವ ವಿಶ್ವಾಸವಿದೆ.

2022ರ ಏಷ್ಯಾಕಪ್‌ಗೆ ಭಾರತದ ಸಂಭಾವ್ಯ 15 ಮಂದಿಯ ತಂಡ ಹೀಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್/ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಯುಜುವೇಂದ್ರ ಚಹಾಲ್, ರವಿಚಂದ್ರನ್ ಅಶ್ವಿನ್/ಅಕ್ಸರ್ ಪಟೇಲ್.

English summary
Asia Cup 2022 with the multi-team tournament set to start in UAE from August 27. The BCCI is likely to name the 15-man squad on Monday. The list starts with the opening duo of Rohit Sharma and KL Rahul while Virat Kohli and Suryakumar Yadav will follow them in the batting order. Know Who will likely Get Chance for play at big stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X