ಭಾರತ ಟೆಸ್ಟ್ ಕ್ರಿಕೆಟ್‌ಗೆ ಹೊಸ ನಾಯಕ, ಉಪನಾಯಕ.. ಬಿಸಿಸಿಐ ಮಹತ್ವದ ಮಾಹಿತಿ
India's Test Cricket New Captain: ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಬಳಿಕ ಈ ಮಾದರಿಗೆ ನಾಯಕ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿದ್ದು, ಇದೀಗ ಇದಕ್ಕೆ ಉತ್ತರ ಲಭ್ಯವಾಗಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಂತಾರಾಷ್ಟ್ರೀಯ ಟಿ-20 ಬಳಿಕ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೆ ಟೆಸ್ಟ್ ಕ್ರಿಕೆಟ್ ನಾಯಕನ ಸ್ಥಾನಕ್ಕೆ ಎರಡು ಹೆಸರುಗಳು ಜೋರಾಗಿ ಕೇಳಿಬಂದಿದ್ದವು. ಇದೀಗ ಈ ಕುರಿತು ಬಿಸಿಸಿಐ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭ ಆಗಲಿದೆ. ಈ ಹಿನ್ನೆಲೆ ಮೇ 24ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದ ನೂತನ ಟೆಸ್ಟ್ ನಾಯಕನನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಟೆಸ್ಟ್ ನಾಯಕನ ಸ್ಥಾನವನ್ನು ಶುಭಮನ್ ಗಿಲ್ ತುಂಬಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಜೊತೆಗೆ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಹೆಸರುಗಳು ಸಹ ಮುಂಚೂಣಿಯಲ್ಲಿದ್ದವು.
2022ರಲ್ಲಿ ವಿರಾಟ್ ಕೊಹ್ಲಿ ಅವರ ನಂತರ ರೋಹಿತ್ ಶರ್ಮಾ ಭಾರತದ ಟೆಸ್ಟ್ ನಾಯಕರಾದರು. 24 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 12 ಪಂದ್ಯಗಳಲ್ಲಿ ಜಯಗಳಿಸಿದ ನಂತರ, ಅವರು ಟೆಸ್ಟ್ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದರು. ಬಳಿಕ ವಿರಾಟ್ ಕೊಹ್ಲಿ ಸಹ ಇದೇ ಹಾದಿ ಹಿಡಿದು ನಿವೃತ್ತಿ ಘೋಷಣೆ ಮಾಡಿ ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟರು.
ಇನ್ನು ಮುಂದಿನ ತಿಂಗಳಿನಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೇ 24ರಂದು ಹೊಸ ನಾಯಕನನ್ನು ಬಿಸಿಸಿಐ ಘೋಷಣೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಡುವೆಯೇ ಯಾರು ನಾಯಕ ಆದರೆ ಸೂಕ್ತ ಎಂದು ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ಧಾರೆ.
ಭಾರತ-ಇಂಗ್ಲೆಂಡ್ ನಡುವನ ಟೆಸ್ಟ್ ಸರಣಿಗೆ ಶುಭ್‌ಮನ್ ಗಿಲ್ ಅವರನ್ನೇ ನಾಯಕ ಮಾಡಬೇಕೆನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್, ಟೆಸ್ಟ್ ಕ್ರಿಕೆಟ್‌ಗೆ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನನ್ನಾಗಿ ಮಾಡುವುದು ಸೂಕ್ತ. ಉಪನಾಯಕ ಶುಭ್‌ಮನ್ ಗಿಲ್ ಆಗಬೇಕು. ಯಾಕೆಂದ್ರೆ ಅವರು ಇನ್ನೂ ಅನುಭವವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ. ಒಂದು ವೇಳೆ ಬುಮ್ರಾ ಫಿಟ್‌ನೆಸ್‌ನಲ್ಲಿ ನಿಮಗೆ ಸಮಸ್ಯೆಯಿದ್ದರೆ, ಕೆಎಲ್ ರಾಹುಲ್‌ನನ್ನು ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಶುಭ್‌ಮನ್ ಗಿಲ್ ನಾಯಕನಾದರೆ, ರಿಷಭ್ ಪಂತ್ ಉಪನಾಯಕನಾಗುವ ಸಾಧ್ಯತೆಯಿದೆ. ಇನ್ನು ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ ಜೂನ್ 20ರಂದು ಆರಂಭ ಆಗಲಿದೆ.












Click it and Unblock the Notifications