Asian Games 2026: ಪಾಕಿಸ್ತಾನವನ್ನ 19 ರನ್‌ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ

ಜಪಾನ್‌ನ ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನವನ್ನ 19 ರನ್‌ಗಳಿಂದ ಬಗ್ಗುಬಡಿದ ಭಾರತೀಯ ಪುರುಷರ ಕ್ರಿಕೆಟ್ ತಂಡ ಚಿನ್ನದ ಪದಕವನ್ನ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವು ಯಾವುದೇ ಹ್ಯಾಂಡ್‌ ಶೇಕ್‌ ಇಲ್ಲದೆ, ಸ್ವಲ್ಪ ವಿಳಂಬವಾದರೂ ಕೂಡ ಪದಕ ಪ್ರದಾನ ಸಮಾರಂಭದೊಂದಿಗೆ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು.

ರಾಜಕೀಯ ಉದ್ವಿಗ್ನತೆಗಳ ನಡುವೆ ನಡೆದ ಈ ಏಷ್ಯನ್ ಗೇಮ್ಸ್ ಕ್ರಿಕೆಟ್ ಭಾರತ ಮತ್ತು ಪಾಕಿಸ್ತಾನ ತಂಡದ ಕ್ರೀಡಾಭಿಮಾನಿಗಳಿಗೆ ಒಳ್ಳೆಯ ರೋಚಕತೆ ಒದಗಿಸಿತು.

Asian Games 2026 India Beats Pakistan by 19 Runs to Clinch Cricket Gold Medal Amid High Tension

ಟೀಮ್ ಇಂಡಿಯಾದ ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ನಿಗದಿತ 20 ಓವರ್‌‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್‌ಗಳ ಬೃಹತ್ ಮೊತ್ತವನ್ನ ಕಲೆಹಾಕಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಒಟ್ಟು 61 ರನ್ ಸಿಡಿಸಿ ಔಟಾದರು.

ಇನ್ನೊಂದೆಡೆ, ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಅಜೇಯ 4 ಸಿಕ್ಸರ್ ಜೊತೆಗೆ 51 ರನ್ ಹಾಗೂ ಶಿವಂ ದುಬೆ 27 ರನ್ ಗಳಿಸುವ ಮೂಲಕ ತಂಡದ ರನ್‌ ಅನ್ನ 200ರ ಗಡಿ ದಾಟಿಸಿದರು. ಮೈದಾನದಲ್ಲಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಕೂಡ ಭಾರತಕ್ಕೆ ವರದಾನವಾಯಿತು.

ವ್ಯರ್ಥವಾಯ್ತು ಹಸನ್ ನವಾಜ್ ಏಕಾಂಗಿ ಹೋರಾಟ

ಭಾರತ ನೀಡಿದ 212 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಯುವ ಆಟಗಾರ ಹಸನ್ ನವಾಜ್ ಅವರ ಏಕಾಂಗಿ ಹೋರಾಟವು ಗೆಲುವು ತಂದುಕೊಡಲು ವಿಫಲವಾಯಿತು. ಒಂದು ಹಂತದಲ್ಲಿ ಪಾಕಿಸ್ತಾನ ತಂಡ 126 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆದರೆ, ಛಲ ಬಿಡದ ಹಸನ್ ನವಾಜ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 51 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 96 ರನ್ ಹೊಡೆದರು. ಅಂತಿಮ ಓವರ್‌ನಲ್ಲಿ 33 ರನ್‌ಗಳ ಅವಶ್ಯಕತೆಯಿದ್ದಾಗ ಕೊನೆಯ ಎಸೆತದಲ್ಲಿ ಸಿಕ್ಸ್‌ ಅಥವಾ ಫೋರ್‌ ಭಾರಿಸಲು ಹೋಗಿ ಅವರು ಔಟಾದರು. ಪರಿಣಾಮವಾಗಿ ಪಾಕಿಸ್ತಾನ 192/6 ರನ್ ಗಳಿಸಿ ಕೇವಲ 19 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಯಾವುದೇ ಹಸ್ತಲಾಘವವಿಲ್ಲ, ಪದಕ ಪ್ರದಾನ ವಿಳಂಬ

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯ ಛಾಯೆ ಈ ಫೈನಲ್ ಪಂದ್ಯದ ಮೇಲೂ ಹೆಚ್ಚಿತ್ತು. ಪಂದ್ಯದ ಆರಂಭಕ್ಕೂ ಮುನ್ನ ಹಾಗೂ ಮುಕ್ತಾಯದ ಬಳಿಕ ಎರಡೂ ತಂಡಗಳ ನಾಯಕರು ಹಾಗೂ ಆಟಗಾರರು ಪರಸ್ಪರ ಹ್ಯಾಂಡ್‌ ಶೇಕ್‌ ಮಾಡಲಿಲ್ಲ.

ಅಲ್ಲದೆ, ಪದಕ ಪ್ರದಾನ ಸಮಾರಂಭವು ನಿಗದಿತ ಸಮಯಕ್ಕಿಂತ ಸಾಕಷ್ಟು ವಿಳಂಬವಾಯಿತು. ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಕೇವಲ ಭಾರತೀಯ ಆಟಗಾರರಿಗೆ ಮಾತ್ರ ಚಿನ್ನದ ಪದಕಗಳನ್ನ ಪ್ರದಾನ ಮಾಡಿದರು. ಪಾಕಿಸ್ತಾನಕ್ಕೆ ಬೆಳ್ಳಿ ಹಾಗೂ ಶ್ರೀಲಂಕಾಕ್ಕೆ ಕಂಚಿನ ಪದಕವನ್ನಾ ತಂಡಗಳಿಗೆ ಏಷ್ಯನ್ ಗೇಮ್ಸ್ ಅಧಿಕಾರಿಗಳು ಪದಕ ವಿತರಿಸಿದ್ದು ಅಚ್ಚರಿಗೆ ಕಾರಣವಾಯಿತು.

ಪಾಕ್ ವಿರುದ್ಧ ಭಾರತಕ್ಕೆ ಸತತ 7ನೇ ಜಯ

ಕಂಚಿನ ಪದಕಕ್ಕಾಗಿ ನಡೆದ ಮೂರನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನ 63 ರನ್‌ಗಳಿಂದ ಮಣಿಸಿದ ಶ್ರೀಲಂಕಾ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಇದು ಸತತ ಏಳನೇ ಜಯವಾಗಿದೆ. ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳಿಗೆ ಜಪಾನ್‌ನ ಬೇಸ್‌ಬಾಲ್ ಮೈದಾನದಲ್ಲಿ ನಡೆದ ಈ ಐತಿಹಾಸಿಕ ಪಂದ್ಯವು ಕ್ರಿಕೆಟ್‌ನ ನಿಜವಾದ ಮಜಾವನ್ನ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+