Asia Cup 2022: ಭಾರತ-ಪಾಕಿಸ್ತಾನ ಟಿಕೆಟ್ ದರ ಬ್ಲಾಕ್‌ನಲ್ಲಿ ಲಕ್ಷ ರೂ.

ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಟಿಕೆಟ್ ಪಡೆಯಲು ಕ್ರಿಕೆಟ್ ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ. ಟಿಕೆಟ್‌ಗಾಗಿ ಲಕ್ಷಾಂತರ ರುಪಾಯಿ ಸುರಿಯಲು ಕೂಡ ಸಿದ್ಧರಾಗಿದ್ದಾರೆ.

ಆಗಸ್ಟ್ 15ರಂದು ಭಾರತ-ಪಾಕಿಸ್ತಾನ ಪಂದ್ಯದ ಮೊದಲ ಬ್ಯಾಚ್ ಟಿಕೆಟ್‌ಗಳು ಮೂರು ಗಂಟೆಗಳ ಒಳಗೆ ಮಾರಾಟವಾಗಿವೆ. ಮೊದಲ ಬ್ಯಾಚ್‌ನಲ್ಲಿ ಟಿಕೆಟ್ ಖರೀದಿಸಲು ಅವಕಾಶ ಪಡೆದವರೇ ಅದೃಷ್ಟವಂತರು ಎನ್ನುವಂತೆ ನೋಡಲಾಗುತ್ತಿದೆ.

ಆನ್‌ಲೈನ್ ಸರತಿ ಸಾಲಿನಲ್ಲಿ ನಾಲ್ಕು ಗಂಟೆಗಳ ನಂತರ ಪ್ರೀಮಿಯಂ ಟಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ದುಬೈ ನಿವಾಸಿ ವಿಶಾಲ್ ಸಿಂಗ್ ಹೇಳಿದ್ದಾರೆ. ಅವರು ಈ ಟಿಕೆಟ್‌ಗಾಗಿ 1200 ದಿರ್ಹಮ್‌ (26,111 ರುಪಾಯಿ) ಗಳಿಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. "ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ದುಬೈನಲ್ಲಿ ಅಪರೂಪಕ್ಕೆ ನಡೆಯುತ್ತವೆ. ನಾನು ಈ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ" ಎಂದು ಅವರು ಹೇಳಿದರು.

ಮೊದಲ ಬ್ಯಾಚ್‌ನ ಮಾರಾಟ ಆಗಸ್ಟ್ 15 ರಂದು ಪ್ರಾರಂಭವಾಗಿದ್ದು, ಟಿಕೆಟ್ ಪಡೆಯಲು ಬಹಳ ಸಮಯ ಕಾಯಬೇಕಾಯಿತು. ದುಬೈ ನಿವಾಸಿ ಮುಸ್ತಫಾ ಟಿಕೆಟ್ ಪಡೆದ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದರು, ಆದರೆ ಟಿಕೆಟ್ ಖರೀದಿಸಲು, ಅವರು ಎಂಟು ಗಂಟೆಗಳ ಕಾಲ ಲಾಗ್ ಇನ್ ಆಗಬೇಕಾಯಿತು!

 ಟಿಕೆಟ್ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳು

ಟಿಕೆಟ್ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳು

ಭಾರತೀಯ ಪ್ರಜೆ ಮತ್ತು ಶಾರ್ಜಾ ನಿವಾಸಿ ಸಾದ್ ಟಿಕೆಟ್ ಪಡೆಯಲು ಹಲವು ಕಂಪ್ಯೂಟರ್‌ಗಳಿಂದ ಟಿಕೆಟ್ ಪೋರ್ಟಲ್‌ಗೆ ಲಾಗ್ ಇನ್ ಆಗಿದ್ದೆ ಎಂದು ಹೇಳಿದ್ದಾರೆ.

"ನಾನು ಬೆಳಿಗ್ಗೆ 8 ಗಂಟೆಯಿಂದ ಸೈಟ್‌ನಲ್ಲಿ ಸರದಿಯಲ್ಲಿ ನಿಂತಿದ್ದೇನೆ. ಟಿಕೆಟ್ ಮಾರಾಟದ ಕುರಿತು ಅಪ್‌ಡೇಟ್ ನೋಡಿದೆ ಮತ್ತು ಒಂದೇ ಬಾರಿಗೆ ನಾಲ್ಕು ಕಂಪ್ಯೂಟರ್‌ಗಳಲ್ಲಿ ವೆಬ್‌ಸೈಟ್ ಅನ್ನು ತೆರೆದಿದ್ದೇನೆ. 20 ನಿಮಿಷಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಲು ನಾನು ಯಶಸ್ವಿಯಾಗಿದ್ದೇನೆ." ಟಿಕೆಟ್ ಪಡೆಯಲು ಸುಮಾರು 1000 ದಿರ್ಹಮ್ (21 ಸಾವಿರ ರುಪಾಯಿ) ಖರ್ಚು ಮಾಡಿದೆ ಎಂದು ಹೇಳಿದರು. ಅದು ಮೂರು ಪಂದ್ಯಗಳ ಬಂಡಲ್‌ ಟಿಕೆಟ್‌ ಆಗಿದೆ.

 ಕಳೆದ ಬಾರಿ ವಿಫಲವಾಗಿದ್ದ ಸಾದ್

ಕಳೆದ ಬಾರಿ ವಿಫಲವಾಗಿದ್ದ ಸಾದ್

ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಸಾದ್‌ ಸಾಕಷ್ಟು ಪ್ರಯತ್ನ ಪಟ್ಟಿದ್ದರು ಆದರೆ ವಿಫಲವಾಗಿತ್ತು. ಇದರಿಂದ ಸಾಕಷ್ಟು ನಿರಾಸೆ ಆಗಿತ್ತು ಎನ್ನುತ್ತಾರೆ. ಆದರೆ ಈ ಬಾರಿ ಟಿಕೆಟ್ ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದರು.

"ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಹೋಗುತ್ತೇನೆ. ಇನ್ನೆರಡು ಪಂದ್ಯಗಳಿಗೆ ಹೋಗಲು ಸಾಧ್ಯವಿಲ್ಲ. ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ನೀಡುತ್ತೇನೆ. ಸಾದ್ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತಿರುವುದು ಇದೇ ಮೊದಲು." ಎನ್ನುತ್ತಾರೆ ಸಾದ್

 ಮುಗಿಲು ಮುಟ್ಟಿದ ಟಿಕೆಟ್ ದರ

ಮುಗಿಲು ಮುಟ್ಟಿದ ಟಿಕೆಟ್ ದರ

ಟಿಕೆಟ್ ಪಡೆದ ಕೆಲವರು ಆನ್‌ಲೈನ್ ಮತ್ತು ಫೇಸ್‌ಬುಕ್ ಮೂಲಕ ಟಿಕೆಟ್ ಮರು ಮಾರಾಟ ಮಾಡಲು ಮುಂದಾಗಿದ್ದಾರೆ. 250 ದಿರ್ಹಮ್‌ (5,439 ರುಪಾಯಿ) ಬೆಲೆಯ ಟಿಕೆಟ್‌ಗೆ 2500 ದಿರ್ಹಮ್‌ (54,399 ರುಪಾಯಿ) ಬೆಲೆ ನಿಗದಿ ಮಾಡಲಾಗಿದೆ.

ಪ್ರೀಮಿಯಮ್ ಟಿಕೆಟ್‌ ದರ 2,500 ದಿರ್ಹಮ್‌ (54,399 ರುಪಾಯಿ) ಆ ಟಿಕೆಟ್‌ ಮರು ಮಾರಾಟಕ್ಕಾಗಿ 5,500 ದಿರ್ಹಮ್ (1,19,678 ರುಪಾಯಿ) ಬೆಲೆ ಹಾಕಲಾಗಿದೆ. ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದೇ ಅಪರೂಪ, ಹಾಗಿದ್ದಾಗ ಪಂದಗು ನೋಡಲು ಟಿಕೆಟ್‌ಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಅಭಿಮಾನಿಗಳು ಇದ್ದಾರೆ. ಇದನ್ನೇ ಕೆಲವು ಬಂಡವಾಳವಾಗಿಸಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

 ಮರುಮಾರಾಟ ಮಾಡುವುದು ಕಾನೂನುಬಾಹಿರ

ಮರುಮಾರಾಟ ಮಾಡುವುದು ಕಾನೂನುಬಾಹಿರ

ಏಷ್ಯಾ ಕಪ್ ಟಿಕೆಟಿಂಗ್ ಪಾಲುದಾರ ಪ್ಲಾಟಿನಂ ಲಿಸ್ಟ್ ಟಿಕೆಟ್‌ಗಳನ್ನು ಮರುಮಾರಾಟ ಮಾಡುವುದು ಕಾನೂನುಬಾಹಿರ ಮತ್ತು ಅಂತಹ ಟಿಕೆಟ್‌ಗಳು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ಎಚ್ಚರಿಸಿದೆ. ಮರುಮಾರಾಟದಲ್ಲಿ ಪಡೆದ ಟಿಕೆಟ್‌ಗಳು ಪ್ರವೇಶಕ್ಕಾಗಿ ಮಾನ್ಯವಾಗಿರುವುದಿಲ್ಲ ಅಥವಾ ರದ್ದುಗೊಳ್ಳುವ ಸಾಧ್ಯತೆಯಿರುವುದರಿಂದ ಗ್ರಾಹಕರು ಅನಧಿಕೃತ ವೆಬ್‌ಸೈಟ್‌ಗಳು ಅಥವಾ ಆನ್‌ಲೈನ್ ಮಾರಾಟ ಸೈಟ್‌ಗಳಲ್ಲಿ ಟಿಕೆಟ್ ಖರೀದಿಸದಂತೆ ಸೂಚನೆ ನೀಡಿದೆ.

ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್‌ನ ಭಾರತ-ಪಾಕಿಸ್ತಾನ ಪಂದ್ಯದ ಎರಡನೇ ಬ್ಯಾಚ್‌ನ ಟಿಕೆಟ್‌ಗಳು ಬುಧವಾರ (ಆಗಸ್ಟ್ 17) ಮಾರಾಟವಾಗಿವೆ, ಆದರೆ ಟಿಕೆಟ್ ಖರೀದಿಸಲು ಹೊಸ ಷರತ್ತು ಸೇರಿಸಲಾಗಿದೆ. ಆಯೋಜಕರ ಪ್ರಕಾರ, ಭಾರತ-ಪಾಕಿಸ್ತಾನ ಟಿಕೆಟ್‌ಗಳು ಈಗ ಪ್ಯಾಕೇಜ್‌ಗಳಲ್ಲಿ ಮಾತ್ರ ಲಭ್ಯವಿರುತ್ತವೆ.

ಟಿಕೆಟ್ ಮಾರಾಟವು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಇರುತ್ತದೆ. ಇದರರ್ಥ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು ಮತ್ತು ಗಂಟೆಗಳ ಕಾಲ ಲಾಗ್ ಇನ್ ಆಗಿರಬೇಕು. ಐದು ಲಕ್ಷಕ್ಕೂ ಹೆಚ್ಚಿನ ಜನ ಆನ್‌ಲೈನ್‌ನಲ್ಲಿ ಟಿಕೆಟ್‌ಗಾಗಿ ಕಾದಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+