Arshad Nadeem: ಚಿನ್ನ ಗೆದ್ದ ಅರ್ಷದ್ ನದೀಮ್‌ಗೆ ಎಮ್ಮೆ ಉಡುಗೊರೆ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‌ಗೆ ತವರಿನಲ್ಲಿಅದ್ದೂರಿ ಸ್ವಾಗತ ಸಿಕ್ಕಿದೆ. 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡ ಪದಕ ಗೆದ್ದ ಬಳಿಕ, ಪಾಕಿಸ್ತಾನ ಯಾವುದೇ ಪದಕ ಗೆದ್ದಿರಲಿಲ್ಲ, ಮತ್ತು ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಿಕ್ಕಿದೆ. ಪಾಕಿಸ್ತಾನಕ್ಕೆ ಹೆಮ್ಮೆ ತಂದುಕೊಟ್ಟ ಅರ್ಷದ್ ನದೀಮ್‌ಗೆ ಸಾಕಷ್ಟು ಬಹುಮಾನ, ಉಡುಗೊರೆಗಳು ಸಿಗುತ್ತಿವೆ.
ಎಲ್ಲಾ ದುಬಾರಿ ಉಡುಗೊರೆಗಳ ನಡುವೆ ಅರ್ಷದ್ ನದೀಮ್‌ಗೆ ಮಾವನ ಕಡೆಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ಅಥ್ಲಿಟ್‌ಗೆ ಎಮ್ಮೆಯೊಂದು ಉಡುಗೊರೆಯಾಗಲಿ ಸಿಕ್ಕಿದೆ. ಅರ್ಷದ್ ಅವರ ಮಾವ ಮುಹಮ್ಮದ್ ನವಾಝ್ ನದೀಮ್‌ರ ಹಳ್ಳಿಯಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ನಮ್ಮ ಗ್ರಾಮದಲ್ಲಿ ಅತ್ಯಂತ ಮೌಲ್ಯಯುತ ಮತ್ತು ಗೌರವ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ.

ನದೀಮ್‌ಗೆ ಕೂಡ ಸಂತೋಷ
ಅರ್ಷದ್ ನದೀಮ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರೂ ಅವರು ತಮ್ಮ ಮೂಲವನ್ನು ಮರೆತಿಲ್ಲ. ಯಶಸ್ಸಿನ ಹೊರತಾಗಿಯೂ, ಅವನ ಮನೆ ಇನ್ನೂ ಅವನ ಹಳ್ಳಿಯಾಗಿ ಉಳಿದಿದೆ ಮತ್ತು ಅವನು ಇನ್ನೂ ತನ್ನ ಹೆತ್ತವರು ಮತ್ತು ಸಹೋದರರೊಂದಿಗೆ ವಾಸಿಸುತ್ತಾನೆ ಎಂದು ನವಾಜ್ ಹೇಳಿದ್ದಾರೆ.
ತನ್ನ ಕಿರಿಯ ಪುತ್ರಿ ಆಯೇಷಾ ಆರು ವರ್ಷಗಳ ಹಿಂದೆ ಅರ್ಷದ್ ನದೀಮ್‌ರನ್ನು ಮದುವೆಯಾಗಿದ್ದಾಳೆ. ದಂಪತಿಗೆ ಇಬ್ಬರು ಗಂಡು ಮತ್ತು ಒಬ್ಬ ಮಗಳು ಇದ್ದಾರೆ ಎಂದು ನವಾಜ್ ಮಾಹಿತಿ ನೀಡಿದ್ದಾರೆ. ತನ್ನ ಮಗಳನ್ನು ನದೀಮ್‌ಗೆ ಮದುವೆ ಮಾಡುವ ವೇಳೆಯಲ್ಲಿ ಅವರಿನ್ನೂ ಹೆಸರು ಮಾಡಿರಲಿಲ್ಲ, ಆದರೆ ಏನಾದರೂ ಸಾಧಿಸಬೇಕು ಎನ್ನುವ ಹಠ ಅವರಲ್ಲಿತ್ತು. ಅದಕ್ಕಾಗಿ ಅವರು ಹಳ್ಳಿಯ ಹೊಲಗಳಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ನದೀಮ್ ಅವರ ಇಂದಿನ ಸಾಧನೆಯ ಹಿಂದೆ ಅವರ ಗ್ರಾಮದ ಪಾತ್ರ ದೊಡ್ಡದು. ಪಂಜಾಬ್‌ನ ಖನೇವಾಲ್‌ನ ಗ್ರಾಮದ ನದೀಮ್‌ಗೆ ತರಬೇತಿ ನೀಡಲು ಮತ್ತು ಸ್ಪರ್ಧೆಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಸಾಕಷ್ಟು ಕಷ್ಟವಿತ್ತು, ಗ್ರಾಮಸ್ಥರು ಮತ್ತು ಸಂಬಂಧಿಕರು ಹಣವನ್ನು ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದರು ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 92.97 ಮೀಟರ್ ಎಸೆಯುವ ಮೂಲಕ ಹೊಸ ದಾಖಲೆ ಬರೆದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರು. ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ.












Click it and Unblock the Notifications