Ranji Trophy: ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್; ದಾಖಲೆ ಬರೆದ ಹರಿಯಾಣ ವೇಗಿ
ಹರಿಯಾಣದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಇತಿಹಾಸ ಬರೆದಿದ್ದಾರೆ. ರಣಜಿ ಟ್ರೋಫಿ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದರು. ರಣಜಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಲಾಹ್ಲಿಯಲ್ಲಿ ನಡೆದ ಪಂದ್ಯದ ಮೂರನೇ ದಿನದಂದು ಕೇರಳದ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಹರಿಯಾಣ ವೇಗಿ ಅನ್ಶುಲ್ ಇರಿಹಾಸ ಇತಿಹಾಸ ನಿರ್ಮಿಸಿದರು. 19ನೇ ಪಂದ್ಯದಲ್ಲಿ 50 ವಿಕೆಟ್ ಪಡೆದು ಕಾಂಬೋಜ್ 10 ವಿಕೆಟ್ ಪಡೆದು ಸಾಧನೆಯನ್ನು ವಿಶೇಷವಾಗಿಸಿದರು.
ಗುರುವಾರ ಸಂಜೆ ಆಟದ ಮುಕ್ತಾಯದ ವೇಳೆಗೆ ಎಂಟು ವಿಕೆಟ್ ಪಡೆದಿದ್ದರು. ಶುಕ್ರವಾರ ಬೆಳಗ್ಗೆ ಮೊದಲ ಓವರ್ ನಲ್ಲೇ ಮತ್ತೊಂದು ವಿಕೆಟ್ ಪಡೆದು, 9 ವಿಕೆಟ್ ಪಡೆದರು. ಶೌನ್ ರೋಜರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಮೈಲಿಗಲ್ಲು 10 ನೇ ವಿಕೆಟ್ ಅನ್ನು ಪೂರ್ಣಗೊಳಿಸಿದರು. ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳಿಗೆ ಆಲೌಟ್ ಆಗಿದೆ. ಕಾಂಬೋಜ್ 30.1 ಓವರ್ ಗಳಲ್ಲಿ 49 ರನ್ ನೀಡಿ ಎಲ್ಲಾ 10 ವಿಕೆಟ್ ಪಡೆದರು.

ಪ್ರೇಮಾಂಗ್ಸು ಮೋಹನ್ ಚಟರ್ಜಿ ಮತ್ತು ಪ್ರದೀಪ್ ಸುಂದರಂ ಮಾತ್ರ ರಣಜಿ ಟ್ರೋಫಿ ಪಂದ್ಯಗಳಲ್ಲಿ ಎಲ್ಲಾ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈಗ ಅನ್ಶುಲ್ ಕಾಂಬೋಜ್ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
1956-57ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಬಂಗಾಳದ ಪರವಾಗಿ ಮೋಹನ್ ಚಟರ್ಜಿ ಈ ಸಾಧನೆ ಮಾಡಿದ ಮೊದಲ ಬೌಲರ್ ಆಗಿದ್ದರೆ, ಪ್ರದೀಪ್ ಸುಂದರಂ 1985-86 ರ ಆವೃತ್ತಿಯಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಅನ್ಶುಲ್ ಕಾಂಬೋಜ್ ಲೆಜೆಂಡರಿ ಲೆಗ್-ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ, ಸುಭಾಷ್ ಗುಪ್ತೆ ಮತ್ತು ದೇಬಾಸಿಸ್ ಮೊಹಾಂತಿ ಅವರ ಸಾಲಿಗೆ ಸೇರ್ಪಡೆಯಾದರು. 10 ವಿಕೆಟ್ ಪಡೆದ ಆರನೇ ಭಾರತೀಯ ಬೌಲರ್ ಆಗಿದ್ದಾರೆ.












Click it and Unblock the Notifications