Hardik Pandya: ದಿಶಾ ಪಟಾನಿ ಬಾಯ್‌ಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯಾ ಪತ್ನಿಯ ಡೇಟಿಂಗ್?
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿಗಳು ದಟ್ಟವಾಗುತ್ತಿದೆ. ಇಬ್ಬರೂ ಕೂಡ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ವರದಿಗಳ ನಡುವೆ, ನತಾಶಾ ಸ್ಟಾಂಕೋವಿಕ್ ಫಿಟ್ನೆಸ್ ಟ್ರೈನರ್ ಜೊತೆ ಕಾಣಿಸಿಕೊಂಡಿದ್ದಾರೆ.
ವಿಚ್ಛೇದನ ವದಂತಿಗಳ ಬೆನ್ನಲ್ಲೇ ನತಾಶಾ ಸ್ಟಾಂಕೋವಿಕ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಗಳನ್ನು ಹಂಚಿಕೊಂಡಿದ್ದು, ಮತ್ತಷ್ಟು ಊಹಾಪೋಗಳಿಗೆ ಕಾರಣವಾಗಿದೆ. ಕುರಿಮರಿಯೊಂದಿಗೆ ಏಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಜೀಸಸ್ ಬಿಳಿ ನಿಲುವಂಗಿಯನ್ನು ಧರಿಸಿ ಕುರಿಮರಿಯನ್ನು ಹಿಂಬಾಲಿಸಿದ್ದಾರೆ. ವೈಯಕ್ತಿಕ ಗೊಂದಲದ ಸಮಯದಲ್ಲಿ ಅವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಊಹಿಸಲಾಗಿದೆ.

ಶನಿವಾರ "ಯಾರೋ ಬೀದಿಗಿಳಿಯಲಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಟ್ರಾಫಿಕ್ ಸಿಗ್ನಲ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇನ್ನೂ ಮೂರು ಸ್ಟೋರಿಗಳನ್ನು ಹಂಚಿಕೊಂಡರು, ಅವುಗಳಲ್ಲಿ ಎರಡು ಅವರು ವ್ಯಾಯಾಮ ಮಾಡುವುದನ್ನು ತೋರಿಸುತ್ತವೆ, ಮತ್ತು ಇನ್ನೊಂದು ಅವರು ಕ್ಯಾಮೆರಾದತ್ತ ನೋಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ದಿಶಾ ಪಟಾಣಿ ಮಾಜಿ ಗೆಳೆಯನ ಜೊತೆ ಡೇಟಿಂಗ್?
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮಾಜಿ ಗೆಳೆಯ, ಫಿಟ್‌ನೆಸ್ ಟ್ರೈನರ್ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನತಾಶಾ ಸ್ಟಾಂಕೋವಿಕ್ ಅಚ್ಚರಿ ಮೂಡಿಸಿದ್ದಾರೆ. ಈ ಜೋಡಿ ಕಾಫಿ ಡೇಟ್‌ಗಾಗಿ ಕಾರಿನಿಂದ ಹೊಗುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಪಾಪರಾಜಿಗಳು ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದಾಗ ಧನ್ಯವಾದಗಳು ಎಂದಷ್ಟೇ ಉತ್ತರ ನೀಡಿದ್ದಾರೆ.
ವದಂತಿ ಶುರುವಾಗಿದ್ದೇಗೆ?
ನತಾಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಾರ್ದಿಕ್ ಪಾಂಡ್ಯ ಅವರ ಉಪನಾಮವನ್ನು ತೆಗೆದುಹಾಕಿದ್ದಾರೆ ಎಂದು ಸಬ್‌ರೆಡಿಟ್ ಬೋಲಿಬ್ಲಿಂಡ್ಸ್ ಗಾಸಿಪ್‌ನಲ್ಲಿನ ಪೋಸ್ಟ್ ಗಮನಸೆಳೆದಾಗ ಈ ವದಂತಿ ಆರಂಭವಾಯಿತು. ಪಾಂಡ್ಯ ಹುಟ್ಟುಹಬ್ಬದಂದು ನತಾಶಾ ಶುಭ ಹಾರೈಸಿಲ್ಲ ಎನ್ನುವುದು ಇದಕ್ಕೆ ಮತ್ತಷ್ಟು ಬಲ ತುಂಬಿತು.
ಹಾರ್ದಿಕ್ ಪಾಂಡ್ಯ ತನ್ನ ಸಂಪತ್ತಿನ 70% ಭಾಗವನ್ನು ನತಾಶಾ ಅವರಿಗೆ ನೀಡಬೇಕಾಗುತ್ತದೆ ಎಂದು ವರದಿಯಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ಈ ಮೊದಲು ನೀಡಿರುವ ಸಂದರ್ಶವೊಂದರಲ್ಲಿ, ತನ್ನ ಬಹುತೇಕ ಆಸ್ತಿ ಅಮ್ಮನ ಹೆಸರಿನಲ್ಲಿದ್ದು, ಭವಿಷ್ಯದಲ್ಲಿ ಆಸ್ತಿಯಲ್ಲಿ ಹೆಚ್ಚು ಪಾಲು ಸಿಗುವುದಿಲ್ಲ ಎಂದು ಹೇಳಿರುವುದು ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ ನತಾಶಾ 2020 ರಲ್ಲಿ ವಿವಾಹವಾದರು. ಅವರಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.












Click it and Unblock the Notifications