Aman Sehrawat: ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್; ಭಾರತಕ್ಕೆ ಮತ್ತೊಂದು ಒಲಿಂಪಿಕ್ಸ್ ಪದಕ
ಕೊನೆಗೂ ಭಾರತಕ್ಕೆ ಕುಸ್ತಿಯಲ್ಲಿ ಪದಕ ಸಿಕ್ಕಿದೆ. ಕುಸ್ತಿಪಟು ವಿನೇಶ್ ಫೋಗಟ್ ಅವರ ಪ್ರಕರಣದಿಂದ ಭಾರತದ ಅಭಿಮಾನಿಗಳಿಗೆ ಬೇಸರವಾಗಿತ್ತು. ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅಭಿಮಾನಿಗಳು ಸ್ವಲ್ಪ ಸಮಾಧಾನ ತಂದಿದ್ದಾರೆ. 21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪದಕ ಗೆದ್ದರು.

ಕೆಟ್ಟ ಆರಂಭ ಪಡೆದರೂ ಗೆಲುವು
ಪಂದ್ಯದ ಆರಂಭದಲ್ಲಿ ಅಮನ್ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಪ್ರಾರಂಭದಲ್ಲೇ ಡೇರಿಯನ್ ಅವರಿಗೆ ಅಂಕವನ್ನು ಬಿಟ್ಟುಕೊಟ್ಟರು. ಬಳಿಕ ಎದುರಾಳಿಯ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿದ ಅಮನ್ ರಕ್ಷಣಾತ್ಮಕವಾಗಿ ಆಡಿದರು.
ಬಳಿಕ ಆಕ್ರಮಣಕಾರಿಯಾಗಿ ಆಡಿದ ಅಮನ್ ಎರಡು ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದರು. ಬಳಿಕ ಇಬ್ಬರ ನಡುವೆ ರೋಚಕ ಹೋರಾಟ ಮುಂದುವರೆಯಿತು ಅಮನ್ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ 4-3 ರಲ್ಲಿ ಮುನ್ನಡೆ ಸಾಧಿಸಿದರು. . ಅಮನ್ ಮೊದಲ ಸುತ್ತನ್ನು 6-3 ಮುನ್ನಡೆಯೊಂದಿಗೆ ಕೊನೆಗೊಳಿಸಿದರು.
2ನೇ ಸುತ್ತಿನಲ್ಲಿ ಅಮಾನ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು. ರಿಯನ್ ದಣಿದಂತೆ ಕಂಡರೂ ಪಂದ್ಯ ಇನ್ನೂ ಮುಗಿದಿರಲಿಲ್ಲ. ಅಮನ್ ತನ್ನ ಮುನ್ನಡೆಯನ್ನು 8-5ಕ್ಕೆ ವಿಸ್ತರಿಸಿದರು ಮತ್ತು ಸತತವಾಗಿ ಪಾಯಿಂಟ್ ಗಳಿಸುವ ಮೂಲಕ 13-5 ಅಂಕಗಳೊಂದಿಗೆ ಗೆಲುವು ಪಡೆದರು.












Click it and Unblock the Notifications