ಚೆನ್ನೈನ ರೇಸಿಂಗ್ ಟ್ರ್ಯಾಕ್‌ನಲ್ಲಿ ಅಪಘಾತ: ಬೆಂಗಳೂರಿನ ಕಿರಿಯ ರೈಡರ್ ದುರ್ಮರಣ
ಬೆಂಗಳೂರು, ಆಗಸ್ಟ್, 06: ಚೆನ್ನೈನ ಮದ್ರಾಸ್ ಇಂಟರ್‌ಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕಿರಿಯ ರೈಡರ್ ನಿಧನರಾಗಿದ್ದಾರೆ.
ಶ್ರೇಯಸ್ ಹರೀಶ್ (13) ಬೆಂಗಳೂರಿನ ಬಾಲಕ ಮೋಟಾರ್‌ಸೈಕಲ್ ಸ್ಪರ್ಧೆಯಲ್ಲಿ ಮೂರನೇ ಸುತ್ತಿನ ರೈಡಿಂಗ್ ವೇಳೆ ಅಪಘಾತಕ್ಕೀಡಾಗಿದ್ದು, ಈ ವೇಳೆ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದು ಮಾಡಲಾಗಿದೆ.

ಶ್ರೇಯಸ್ ಅವರು ಅತೀ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್ಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡುಗೇರಿಸಿಕೊಂಡಿದ್ದರು. ಇನ್ನು ಶ್ರೇಯಸ್ ಸಾವಿನಿಂದ ಪೋಷಕರ ಆಕ್ರಂನ ಮುಗಿಲು ಮುಟ್ಟಿದೆ.
ಶ್ರೇಯಸ್ 2010 ಜುಲೈ 26ರಂದು ಜನಿಸಿದ್ದು, ಈತ ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾರ್ಥಿಯಾಗಿದ್ದ. ಅಲ್ಲದೆ ಪೆಟ್ರೋನಾಸ್ ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ಹೊಸಬರ ವಿಭಾಗದಲ್ಲಿ ಸ್ಪರ್ಧಿಸಿ ಸತತ 4 ಬಾರಿ ಗೆಲುವು ಸಾಧಿಸಿದ್ದರು. ಹಾಗೆಯೇ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದ್ದ ಹಿನ್ನೆಲೆ ಉದಯೋನ್ಮುಖ ತಾರೆ ಎಂದು ಪ್ರಖ್ಯಾತಿ ಪಡೆದುದ್ದರು.
ಪೋಲ್ ಪೊಸಿಷನ್‌ಗೆ ಅರ್ಹತೆ ಪಡೆದಿದ್ದ ರೈಡಿಂಗ್ ನಂತರ ಈ ದುರ್ಘಟನೆ ನಡೆದಿದೆ. ಟರ್ನ್-1ನಿಂದ ನಿರ್ಗಮಿಸಿದ ಶ್ರೇಯಸ್ ಬಿದ್ದು ತಲೆಗೆ ಗಂಭೀರ ಗಾಯವಾಯಿತು. ಆಗ ತಕ್ಷಣವೇ ರೇಸ್ ನಿಲ್ಲಿಸಿ, ಟ್ರ್ಯಾಕ್‌ನಲ್ಲಿ ಇರಿಸಲಾಗಿದ್ದ ಟ್ರಾಮಾ ಕೇರ್ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಈ ವೇಳೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಾವು ಪ್ರಕರಣ ಕುಸಿತ
ಕಳೆದ ಒಂದು ತಿಂಗಳಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯು ಎನ್‌ಎಚ್‌ಎಐ (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಒಂದು ಪ್ರಮುಖ ತಲೆನೋವಾಗಿತ್ತು. ಈ ಸಂಪೂರ್ಣ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ), ಅಲೋಕ್ ಕುಮಾರ್ ಅವರು ಜುಲೈ ತಿಂಗಳಲ್ಲಿ ಹೆದ್ದಾರಿಯಲ್ಲಿ ಎಂಟು ಸಾವುಗಳು ದಾಖಲಾಗಿದ್ದರೆ, ಮೇ ಮತ್ತು ಜೂನ್‌ನಲ್ಲಿ ಈ ಸಂಖ್ಯೆ 29 ಮತ್ತು 28 ರಷ್ಟಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತದ ಸಾವಿನ ಸಂಖ್ಯೆಯು ಪೊಲೀಸರ ಪೂರ್ವಭಾವಿ ಪ್ರಯತ್ನಗಳಿಂದ ಮೇ -29 ಸಾವುಗಳು. ಜೂನ್ -28 ಸಾವುಗಳು, ಜುಲೈ 23ರ ವೇಳೆಗೆ 8ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಅಪಘಾತಗಳು ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತಗಳನ್ನು ತಪ್ಪಿಸಲು ಅದೇ ಕ್ರಮಗಳನ್ನು ನಿರ್ವಹಿಸಲಾಗುವುದು. ನಮ್ಮ ಅಧಿಕಾರಿಗಳು ಮತ್ತು ಪುರುಷರ ತಂಡಕ್ಕೆ ಅಭಿನಂದನೆಗಳು. ಸಾವುಗಳನ್ನು ಒಂದೇ ಅಂಕೆಯಲ್ಲಿ ಇಡಬೇಕು ಎಂದು ಅವರು ಹೇಳಿದರು.












Click it and Unblock the Notifications