• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್‌ ಎತ್ತಿ ಹಿಡಿಯುವ ತಂಡವನ್ನು ಹೆಸರಿಸಿದ ಎಬಿ ಡಿ ವಿಲಿಯರ್ಸ್

|
Google Oneindia Kannada News

ಮುಂಬೈ, ನವೆಂಬರ್ 8: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಗಳಿಗೂ ಮುನ್ನ ಯಾವ ತಂಡ ಫೈನಲ್ ಪ್ರವೇಶಿಸಲಿದೆ, ಯಾವ ತಂಡ ವಿಶ್ವಕಪ್‌ ಎತ್ತಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನವೆಂಬರ್ 9ರಂದು ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಸಿಡ್ನಿಯಲ್ಲಿ ನಡೆಯುವ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನ ತಂಡವನ್ನು, ಅಡಿಲೇಡ್‌ನಲ್ಲಿ ನವೆಂಬರ್ 10ರಂದು ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ.

ಮುಂದಿನ 5 ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ: ಅರುಣ್ ಧುಮಾಲ್ಮುಂದಿನ 5 ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ: ಅರುಣ್ ಧುಮಾಲ್

ದಕ್ಷಿಣ ಆಫ್ರಿಕಾ ಲೆಜೆಂಡರಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ನವೆಂಬರ್ 12 ರಂದು ಮೆಲ್ಬೋರ್ನ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಡಲಿವೆ ಎಂದು ತಿಳಿಸಿದ್ದಾರೆ.

ಭಾರತ ವಿಶ್ವಕಪ್ ಎತ್ತಿ ಹಿಡಿಯಲಿದೆ

"ನನ್ನ ಪ್ರಕಾರ ಭಾರತ ತಂಡದ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ಪಂದ್ಯವನ್ನಾಡಲಿದೆ. ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯಲಿದೆ. ಸೂರ್ಯಕುಮಾರ್ ಯಾದವ್‌ ಮತ್ತು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಡೀ ಭಾರತ ತಂಡ ಉತ್ತಮ ಸಾಮರ್ಥ್ಯ ಹೊಂದಿದೆ" ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಫಾರ್ಮ್‌ ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, "ರೋಹಿತ್ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಿದ್ದಾರೆ ಎಂದು ನನಗನಿಸುವುದಿಲ್ಲ, ಆದರೆ ತಂಡಕ್ಕೆ ಅತ್ಯಗತ್ಯಬ ಎಂದಾ ಅವರೂ ಕೂಡ ಪಾರ್ಟಿಗೆ ಸೇರುತ್ತಾರೆ. ಅವರೊಬ್ಬ ಅದ್ಭುತ ಆಟಗಾರ" ಎಂದು ಮಾಜಿ ಆರ್‌ಸಿಬಿ ಪ್ಲೇಯರ್ ತಿಳಿಸಿದ್ದಾರೆ.

ಮಿಸ್ಟರ್ 360 ಪ್ರಕಾರ, ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡರೂ ಅದೃಷ್ಟದಿಂದ ಸೆಮಿಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸುವುದಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

AB de villiers Predicts India and New Zealand will play final of T20I world cup 2022

ತವರು ತಂಡದ ಪ್ರದರ್ಶನಕ್ಕೆ ಬೇಸರ
ತಮ್ಮ ತಂಡದ ಪ್ರದರ್ಶನದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಡಿವಿಲಿಯರ್ಸ್ "ನಮ್ಮ ತಂಡದ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿತ್ತು. ನಾವು ನಾಕೌಟ್‌ಗೆ ಹೋಗದಿರುವುದು ನನಗೆ ಆಶ್ಚರ್ಯವಿಲ್ಲ. ಕಳೆದ ಕೆಲವು ವರ್ಷಗಳಿಂದ ನಾವು ಉತ್ತಮ ಪ್ರದರ್ಶನ ನೀಡಿದ ಅಗ್ರ 4 ತಂಡಗಳಾಗಿಲ್ಲ, ಆದ್ದರಿಂದ ಇದು ದೊಡ್ಡ ಆಶ್ಚರ್ಯವೇನಿಲ್ಲ. ನಾವು ಅಂದುಕೊಂಡಿದ್ದಕ್ಕಿಂತ ಉತ್ತಮವಾಗಿ ಆಡಿದ್ದೇವೆ" ಎಂದು ತಿಳಿಸಿದರು.

ನಾವು ಭಾರತ ತಂಡವನ್ನು ಮಣಿಸಿದ್ದೆವು, ನಾಕೌಟ್ ಪ್ರವೇಶಿಸಲು ಉತ್ತಮ ವೇದಿಕೆ ಸೆಟ್ ಮಾಡಿಕೊಂಡಿದ್ದೆವು. ಆದರೆ ದುರದೃಷ್ಟವಶಾತ್ ಯಾವುದೋ ಒಂದು ಹಂತದಲ್ಲಿ ನಾನು ಅಂದುಕೊಂಡದ್ದು ತಪ್ಪಾಯಿತು. ನೆದರ್ಲೆಂಡ್ಸ್ ವಿರುದ್ಧ ನಮ್ಮ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು, ಆದರೆ ಸ್ಲೋ ವಿಕೆಟ್‌ನಲ್ಲಿ ಚೇಸ್‌ ಮಾಡಿದ್ದು ಸೋಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

English summary
South African former cricketer AB de villiers Predicts India and New Zealand will play final and India will win world cup 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X