ಅಭಿಪ್ರಾಯ ಹೇಳಿದ್ದೇನೆ ಅಷ್ಟೇ.. ತಪ್ಪಾಗಿ ತಿಳ್ಕೊಳ್ಬೇಡಿ.. ಕೊಹ್ಲಿ ಹಾಗೂ ಸಚಿನ್ ಹೋಲಿಕೆ ಕುರಿತು ಎಬಿ ಡಿ ವಿಲಿಯರ್ಸ್ ಸ್ಪಷ್ಟನೆ

AB de Villiers: ದಕ್ಷಿಣ ಆಫ್ರಿಕಾ ಹಾಗೂ ಐಪಿಎಲ್‌ನ ಮಾಜಿ ಸ್ಟಾರ್ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್‌ ಅವರು ವಿದೇಶಿ ಪಿಚ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ಗಿಂತಲೂ ವಿರಾಟ್‌ ಕೊಹ್ಲಿ ಅವರು ಚೆನ್ನಾಗಿ ಆಡುತ್ತಾರೆ ಎಂದು ಹೇಳಿಕೆ ನೀಡಿದ್ದರು ಅಂತಾ ವರದಿಯಾಗಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಇದಕ್ಕೆ ಎಬಿ ಡಿ ಅವರೇ ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಕ್ರಿಕೆಟರ್, ಮಿಸ್ಟರ್ 360 ಅಂತಲೇ ಹೆಸರಾಗಿರುವ ಎಬಿ ಡಿ ವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಹೋಲಿಕೆ ವಿಚಾರವಾಗಿ ಎದ್ದಿದ್ದ ವಿವಾದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿದೇಶಿ ನೆಲದಲ್ಲಿ ಮತ್ತು ವೇಗದ ಹಾಗೂ ಬೌನ್ಸ್ ಹೊಂದಿರುವ ಪಿಚ್‌ಗಳಲ್ಲಿ ಕೊಹ್ಲಿ ತೆಂಡೂಲ್ಕರ್‌ಗಿಂತಲೂ ಮೇಲು ಎಂದು ಡಿ ವಿಲಿಯರ್ಸ್ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿತ್ತು.

AB de Villiers Clarifies Team India Cricketers Virat Kohli vs Sachin Tendulkar Remark Know details

ಎಬಿ ಡಿ ವಿಲಿಯರ್ಸ್ ಹೇಳಿದ್ದೇನು?

ಎಬಿ ಡಿ ವಿಲಿಯರ್ಸ್ ತಮ್ಮ ಹಿಂದಿನ ವೀಡಿಯೊದಲ್ಲಿ, 'ಏಷ್ಯಾದ ಬ್ಯಾಟರ್‌ಗಳು ವಿದೇಶಿ ನೆಲದ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಮೊದಲು ತೋರಿಸಿಕೊಟ್ಟವರು ಸಚಿನ್ ತೆಂಡೂಲ್ಕರ್. ಆದರೆ ವಿರಾಟ್ ಕೊಹ್ಲಿ ಅದನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಅವರು ಸಚಿನ್‌ಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿದ್ದರು,' ಎಂದು ಹೇಳಿದ್ದರು. ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಗೊಂದಲಗಳಿಗೆ ತೆರೆ ಎಳೆದ ಎಬಿ ಡಿ ವಿಲಿಯರ್ಸ್

'ಅಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ನೆನಪಿಡಿ, ಅದು ಕೇವಲ ನನ್ನ ವೈಯಕ್ತಿಕ ನೋಟ ಮತ್ತು ಅಭಿಪ್ರಾಯ. ನಾನು ಯಾರನ್ನೂ ಸಣ್ಣವರನ್ನಾಗಿ ಮಾಡುತ್ತಿಲ್ಲ. ಸಚಿನ್ ಪ್ರತಿಯೊಬ್ಬ ಭಾರತೀಯ ಯುವ ಆಟಗಾರನಿಗೆ ವಿದೇಶದಲ್ಲೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವುದು ಹೇಗೆ ಎಂದು ತೋರಿಸಿಕೊಟ್ಟ ಮಾರ್ಗದರ್ಶಕರು,' ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ವಿದೇಶಿ ಟೆಸ್ಟ್ ಅಂಕಿ-ಅಂಶಗಳು (ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ) ಸಚಿನ್‌ಗಿಂತ ಉತ್ತಮವಾಗಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, 'ನಾವು ಯಾವಾಗಲೂ ಕೇವಲ ಅಂಕಿ-ಅಂಶಗಳನ್ನು ನೋಡಬಾರದು. ಕೊಹ್ಲಿ ಶಾರ್ಟ್ ಬಾಲ್ ಹಾಗೂ ವೇಗದ ಬೌಲಿಂಗ್ ಎದುರಿಸಿದ ರೀತಿ, ಅವರ ಫಿಟ್‌ನೆಸ್, ತಂಡವನ್ನು ಮುನ್ನಡೆಸಿದ ರೀತಿ ಮತ್ತು ಮುಂದಿನ ಪೀಳಿಗೆಯ ಆಟಗಾರರಿಗೆ ನೀಡಿದ ಸ್ಫೂರ್ತಿ ಅದ್ಭುತವಾದದ್ದು,' ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಿಂದ ಕಲಿತ್ತಿದ್ದನ್ನು ವಿರಾಟ್ ಕೊಹ್ಲಿ ಮುಂದೆ ಕೊಂಡೊಯ್ದರು. ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಅವರಂತಹ ಯುವ ಆಟಗಾರರು ಸಚಿನ್ ಮತ್ತು ವಿರಾಟ್ ಅವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ ಎಂದು ಎಬಿ ಡಿ ವಿಲಿಯರ್ಸ್ ವಿವರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ಗಳಿಸಿದ ರನ್ ಮತ್ತು ಸರಾಸರಿ ಕೊಹ್ಲಿಗಿಂತ ಹೆಚ್ಚಿದ್ದರೂ, ಕೊಹ್ಲಿ ತಮ್ಮ ಫಿಟ್‌ನೆಸ್, ಆಕ್ರಮಣಕಾರಿ ಶೈಲಿ ಮತ್ತು ಮನೋಭಾವದಿಂದ ಭಾರತೀಯ ಕ್ರಿಕೆಟ್ ಚಿತ್ರಣವನ್ನು ಬದಲಾಯಿಸಿದರು. ಅಂಕಿ-ಅಂಶಗಳನ್ನು ಹೊರತುಪಡಿಸಿ, ಕೊಹ್ಲಿಯ ಈ ಸಮಗ್ರ ಪ್ರಭಾವವನ್ನಷ್ಟೇ ತಾವು ಪ್ರಶಂಸಿಸಿದ್ದು ಎಂದು ಡಿ ವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್‌ ವಲಯದಲ್ಲಿ ತಮ್ಮ ವಿರುದ್ಧ ವ್ಯಕ್ತವಾಗಿದ್ದ ಟೀಕೆಗಳು ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಗೊಂದಲಗಳನ್ನ ಬಗೆಹರಿಸುವ ಕೆಲಸವನ್ನ ಮಿಸ್ಟರ್ 360 ಮಾಡಿದ್ದಾರೆ ಅಂತಲೇ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+