Ind vs End 2nd ODI: ಟೀಂ ಇಂಡಿಯಾಗೆ ಬೃಹತ್‌ ರನ್‌ಗಳ ಗುರಿ ನೀಡಿದ ಇಂಗ್ಲೆಂಡ್

Ind vs End 2nd ODI: ಕಟಕ್‌ನಲ್ಲಿ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ಇಂದು (ಫೆಬ್ರವರಿ 09) ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ತಂಡ ಭಾರತಕ್ಕೆ 305 ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 49.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕೆಳೆದುಕೊಂಡಿದ್ದು, 304 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಟೀಂ ಇಂಡಿಯಾಗೆ 305 ರನ್‌ಗಳ ಗುರಿ ನೀಡಿದೆ.

2nd ODI Cricket England bat first and target of 305 runs for Team India

ಭಾರತ ಇಂಗ್ಲೆಂಟ್‌ ವಿರುದ್ಧ ಈ ಪಂದ್ಯವನ್ನು ಗೆಲ್ಲಲು 50 ಓವರ್‌ಗಳಲ್ಲಿ 305 ರನ್‌ಗಳನ್ನು ಗಳಿಸಬೇಕುದೆ. ಕೊನೆಯ ಓವರ್‌ನ ನಾಲ್ಕನೇ ಮತ್ತು 5ನೇ ಎಸೆತಗಳಲ್ಲಿ ಸತತ ಎರಡು ರನ್ ಔಟ್‌ಗಳೊಂದಿಗೆ ಇಂಗ್ಲೆಂಡ್ ತನ್ನೆಲ್ಲಾ 10 ವಿಕೆಟ್‌ಗಳನ್ನು ಭಾರತ ತಂಡದ ಬೌಲರ್‌ಗಳಿಗೆ ಒಪ್ಪಿಸಿತು. ಈ ಮೂಲಕ 304 ರನ್‌ಗಳನ್ನು ಕಲೆ ಹಾಕಿತು.

ಇನ್ನು ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ಮೂಲಕ ಭಾರತದ ವರುಣ್ ಚಕ್ರವರ್ತಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದು, ಈ ಮೂಲಕ 1974ರ ಬಳಿಕ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಕಟಕ್‌ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ 33 ವರ್ಷದ ವರುಣ್ ಚಕ್ರವರ್ತಿ ಕಣಕ್ಕಿಳಿದಿದ್ದು, ಇದು ಅವರ ಪದಾರ್ಪಣೆ ಏಕದಿನ ಪಂದ್ಯವಾಗಿದೆ.

ಈ ಪಟ್ಟಿಯಲ್ಲಿ ಭಾರತಕ್ಕಾಗಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಫಾರೋಖ್ ಎಂಜಿನಿಯರ್ ನಂಬರ್‌ 1 ಸ್ಥಾನದಲ್ಲಿದ್ದು, ಅವರು 1974ರಲ್ಲಿ ಚೊಚ್ಚಲ ಪಂದ್ಯವನ್ನಾಡಿದಾಗ ಅವರ ವಯಸ್ಸು 36 ವರ್ಷ ಮತ್ತು 138 ದಿನಗಳಾಗಿತ್ತು.

ಇಂಗ್ಲೆಂಡ್‌ ಮೊದಲ ವಿಕೆಟ್​ಗೆ 65 ಎಸೆತಗಳಲ್ಲಿ 81 ರನ್‌ ಗಳಿಸಿತು. ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಅಬ್ಬರದ ಆಟಕ್ಕೆ ವರುಣ್ ಚಕ್ರವರ್ತಿ ಫುಲ್‌ ಸ್ಟಾಪ್‌ ಇಟ್ಟರು. 29 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ ಸಿಡಿಸಿ ಜೊತೆಯಾಟದ ನಿರೀಕ್ಷೆಯಲ್ಲಿದ್ದ ಫಿಲ್ ಸಾಲ್ಟ್ ಜಡೇಜಾಗೆ ಕ್ಯಾಚ್ ನೀಡಿ ವಿಕೆಟ್‌ ಒಪ್ಪಿಸಿದರು.

ಇನ್ನು ತಂಡದ ಮೊತ್ತ 100ರ ಗಡಿ ದಾಟುತ್ತಿದ್ದಂತೆ ಇಂಗ್ಲೆಂಡ್‌ ತಂಡ ಮತ್ತಷ್ಟು ಉತ್ತಮ ರನ್‌ಗಳನ್ನ ಸಿಡಿಸಿದರು. 56 ಎಸೆತಗಳಲ್ಲಿ 10 ಬೌಂಡರಿ ಸಹಿತ 65 ರನ್ ಸಿಡಿಸಿದ್ದ ಡಕೆಟ್ ವಿಕೆಟ್‌ ಕೀಳುವಲ್ಲಿ ಜಡೇಜಾ ಯಶಸ್ವಿಯಾದರು.

ಜೋ ರೂಟ್ ಉತ್ತಮ ಪ್ರದರ್ಶನ ಮೂಲಕ ಹ್ಯಾರಿ ಬ್ರೂಕ್ ಜೊತೆಗೂಡಿ 3ನೇ ವಿಕೆಟ್​ಗೆ 66 ರನ್​ಗಳನ್ನು ಸಿಡಿಸಿದರು. ಈ ಮೂಲಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಕಾರಣಕರ್ತರಾದರು. ಬ್ರೂಕ್​ 31 ರನ್, ನಾಯಕ ಜೋಸ್ ಬಟ್ಲರ್ 34 ರನ್ ಸಿಡಿಸಿದರು. ಇನ್ನು ಜೋ ರೂಟ್ 76 ಎಸೆತಗಳಲ್ಲಿ 6 ಬೌಂಡರಿ ಸಹಿತ 72 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದ್ರು. ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಇವರಿಗೆ ಗೇಟ್ ಪಾಸ್ ನೀಡುವಲ್ಲಿ ಯಶಸ್ವಿಯಾದರು.

5 ವಿಕೆಟ್ ಕೆಳೆದುಕೊಂಡ ಇಂಗ್ಲೆಂಡ್‌ 248 ರನ್‌ಗಳನ್ನು ಕಲೆಹಾಕಿತ್ತು. ಬಳಿಕ ಎಂಟ್ರಿ ಕೊಟ್ಟ ಲಿಯಾಮ್ ಲಿವಿಂಗ್​ಸ್ಟನ್ ರನ್‌ಗಳನ್ನು 300ರ ಗಡಿ ದಾಟಿಸಿದ್ರು. 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 41 ರನ್ ಚಚ್ಚಿದ ಲಿವಿಂಗ್​ಸ್ಟನ್ ಕೊನೇ ಓವರ್​​ನಲ್ಲಿ ರನೌಟ್ ಆದರು.

ಇನ್ನು ಜೆಮಿ ಓವರ್ಟನ್ 6, ಗಸ್ ಆಟ್ಕಿನ್ಸನ್ 3, ಆದಿಲ್ ರಶೀದ್​ 14 ರನ್ ಗಳಿಸಿ 304ರ ಗಡಿಯತ್ತ ತಂಡವನ್ನು ಕೊಂಡೊಯ್ದರು. ಕೊನೆಯ ಓವರ್‌ನಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಟೀಂ ಇಂಡಿಯಾಗೆ 305 ರನ್‌ಗಳ ಗುರಿ ನೀಡಿತು. ಇನ್ನು ಭಾರತದ ಪರ ಬೌಲಿಂಗ್‌ನಲ್ಲಿ ಆರ್ಭಟಿಸಿದ ಜಡೇಜಾ 3, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಕೀಳುವ ಮೂಲಕ ಇಂಗ್ಲೆಂಡ್‌ ಅನ್ನು 304 ರನ್‌ಗಳಿಗೆ ಕಟ್ಟಿಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+