ತೇಜಸ್ವಿನಿ ಅವರ 'ಹೊರಳುದಾರಿ' ಕೃತಿಗೆ ಸ್ವಸ್ತಿ ಪ್ರಕಾಶನ ಪ್ರಶಸ್ತಿ ಪ್ರದಾನ

Posted By:
Subscribe to Oneindia Kannada

ಶಿರಸಿ, ಜನವರಿ 04: ಕುಮಟಾದ ಸ್ವಸ್ತಿ ಪ್ರಕಾಶನ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ ಡಿ.31 ರಂದು ಶಿರಸಿ ತಾಲೂಕಿನ ಬಕ್ಕಳ ದ "ಶ್ರೀ ಶಂಕರ" ದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ವಸ್ತಿ ಪ್ರಕಾಶನದ ಬಹುಮಾನಿತ ಕೃತಿ ತೇಜಸ್ವಿನಿ ಹೆಗಡೆಯವರ "ಹೊರಳುದಾರಿ" ಕಾದಂಬರಿ ಲೋಕಾರ್ಪಣೆ ಹಾಗೂ ಶ್ರೀಮತಿ ತೇಜಸ್ವಿನಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸ್ಪರ್ಧೆಯ ವಿಜೇತ ಕವಿಗಳಿಗೆ ಬಹುಮಾನ ವಿತರಣೆ ನಡೆದವು. ಪುಸ್ತಕ ಬಿಡುಗಡೆ ಮಾಡಿದ ಚಿಂತಕ ನಾರಾಯಣ ಶೇವಿರೆ ಅವರು ತೇಜಸ್ವಿನಿಯವರ ಸಾಹಿತ್ಯದ ಆಸಕ್ತಿ ಹಾಗೂ ಸಾಧನೆಯನ್ನು ಶ್ಲಾಘಿಸಿದರು.

Tejaswini Hegde recieves Swasti Publications award for her Kannada novel 'Horaludhari'

ಬೆಳಗಿನ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹಗಳ ಕುರಿತು ಸಂವಾದ ಚರ್ಚೆ ಮಾತುಗಳು ನಡೆದವು. ಡಾ.ಗೋವಿಂದ ಹೆಗಡೆ, ಪ್ರಶಾಂತ್ ನಾಯ್ಕ ಕರ್ಕಿ, ಪ್ರಶಾಂತ್ ಪಟಗಾರ್ ದೇವರಬಾವಿ, ಗುರುಗಣೇಶ್, ಕರ್ಕಿ ಕೃಷ್ಣಮೂರ್ತಿ, ತೇಜಸ್ವಿನಿ ಹೆಗಡೆ, ಗಾಯತ್ರೀ ರಾಘವೇಂದ್ರ , ಇನ್ನೂ ಅನೇಕರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃಷಿ ಪರಿಸರದ ನಡುವೆ ಈ ಮಾತುಕತೆ ಆತ್ಮೀಯವು ಪೂರಕವು ಆಗಿ ನಡೆಯಿತು.

ತೇಜಸ್ವಿನಿಯವರ 'ಹಂಸಯಾನ' ಕಾದಂಬರಿಯ ಲೋಕಾರ್ಪಣೆಗೆ ಆಹ್ವಾನ

ಸಂಜೆಯವರೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞ ಕೃಷಿ ವಿಜ್ಞಾನ ಬರಹಗಾರ ಶಿವಾನಂದ ಕಳವೆ ಯವರು ವಹಿಸಿದ್ದರು. ಸಾಹಿತ್ಯದ ಬದಲಾಗಬೇಕಾದ ದೃಷ್ಟಿಕೋನದ ಕುರಿತು ಮಾತನಾಡಿದ ಅವರು, ಹಳ್ಳಿಗಳ ಜೀವನದ ಕುರಿತು ಯಾವ ಬರಹಗಳೂ ಇತ್ತೀಚೆಗೆ ಕಾದಂಬರಿ ರೂಪದಲ್ಲಿ ಬರುತ್ತಿಲ್ಲ. ಜನಜೀವನವೇ ಇಂದಿಗೆ ಸಾಹಿತ್ಯದ ಪ್ರಸ್ತುತ ವಿಷಯವಾಗಬೇಕೆಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಒಡನಾಟ, ಬದುಕು, ಬರಹಗಳ ಬಗೆಗೂ ಅನೇಕ ಮಾಹಿತಿ ತಿಳಿಸಿಕೊಟ್ಟರು.

'ಶಿರಸಿ ಭವನ'ದ ತೇಜಸ್ವಿನಿ ಹೆಗಡೆ- ಸ್ವಸ್ತಿ ಕಾದಂಬರಿ ಸ್ಪರ್ಧೆ ವಿಜೇತೆ

Tejaswini Hegde recieves Swasti Publications award for her Kannada novel 'Horaludhari'

ನಮ್ಮಿಂದ ನಿಮಗೆ ಕನ್ನಡವು ಮನೆಮನೆಗೆ ಎಂಬ ಸ್ವಸ್ತಿ ಪ್ರಕಾಶನದ ಆಶಯದಂತೆ ನಾಲ್ಕನೇ ವರ್ಷದ ಈ ಕಾರ್ಯಕ್ರಮ ಸಂಜಯ್ ಭಟ್ ಬೆಣ್ಣೆ ಯವರ ಮನೆ "ಶ್ರೀ ಶಂಕರ" ದ ಸುಂದರ ಪರಿಸರದಲ್ಲಿ ನಡೆಸಿಕೊಡಲಾಯಿತು. ಸ್ವತಃ ಸಂಜಯ್ ಭಟ್ ನಿರೂಪಿಸಿದರು. ರಾಜ್ಯದ ಅನೇಕ ಭಾಗಗಳಿಂದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada writer Tejaswini Hegde recieved Swasti Publication award for her Kannada novel Horaludari. Swasti publications Kumata organised a function to distribute award to Mrs Hegde in Bakkala region in Sirsi taluk, Uttara Kannada district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ